'ಗ್ರಾಮೀಣ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ಮಿಂಚಲಿ'
ಸಿಂಧನೂರು: ಗ್ರಾಮೀಣ ಭಾಗದಲ್ಲಿ ಎಲೆ ಮರೆಕಾಯಿಯಂತಿರುವ ಕ್ರೀಡಾಪಟುಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದು ಗ್ರಾಮದ ಕೀರ್ತಿ ಹೆಚ್ಚಿಸುವಂತೆ ರಾಜ್ಯ ಅಮೇಚೂರ ಖೋಖೋ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಚಿನ್ನಮೂರ್ತಿ ಹೇಳಿದರು.
ಬಳಗಾನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕೆಂದ್ರ ಶಾಲೆಯ ಆವರಣದಲ್ಲಿ ರಾಯಚೂರು ಜಿಲ್ಲಾ ಅಮೇಚೂರ ಖೋಖೋ ಅಸೋಸಿಯೇಶನ್ ಹಾಗೂ ಗ್ರಾಮದ ಉದಯ ಕ್ರೀಡಾ ಕ್ಲಬ್, ಹಳೆಯ ವಿದ್ಯಾರ್ಥಿಗಳ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಹೋನಲು ಬೆಳಕಿನ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಗ್ರಾಮದ ಕ್ರೀಡಾಪಟುಗಳ, ಕ್ರೀಡಾಭಿಮಾನಿಗಳ ಮತ್ತು ಆಯೋಜಕರ ಕಾರ್ಯವನ್ನು ಶ್ಲಾಘಿಸಿ, ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಮೀರಿಸುವಂತ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾರ್ಯಕ್ರಮವನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಸಂಗಪ್ಪ ಬಾಗೇವಾಡಿ, ಮುಖ್ಯಗುರು ಅಮರನಾಥ ಹಳ್ಳೂರು, ಪತ್ರಕರ್ತ ಡಾ.ಎಸ್.ಎಸ್. ಜಾಗೀರದಾರ ಮಾತನಾಡಿದರು. ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಮೌನೇಶ ಜಿ.ಪಿ ವಹಿಸಿದ್ದರು.
ರಾಜ್ಯ ಖಜಾಂಚಿ ಸುದೀದ್ರ, ದೈಹಿಕ ಶಿಕ್ಷಕ ಮಹಾದೇವಪ್ಪ, ಸಂತೋಷ ಅಂಬ್ಲಿ, ವಿಶ್ವನಾಥಗೌಡ, ವಿಶ್ವನಾಥ ಪಟ್ಟಣಶೆಟ್ಟಿ, ಕೆ. ನಾಗರಾಜ, ಹನುಮಂತ ಭಜಂತ್ರಿ, ಅಮರಪ್ಪ ಉದ್ಬಾಳ ಎಚ್. ಪಂಪಾಪತಿ, ಟಿ. ವೀರೇಶ, ಹನುಮನಗೌಡ ಹಂಚಿನಾಳ ಮತ್ತಿತರರು ಇದ್ದರು. ಪ್ರಾಚಾರ್ಯ ಪಂಪಾಪತಿ ಗುತ್ತೇದಾರ ಸ್ವಾಗತಿಸಿದರು. ಶಿವಶಂಕರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

