ಮಹರ್ಷಿ ವಾಲ್ಮೀಕಿ ಟೀಕೆ ಸರಿಯಲ್ಲ
ಕ.ಪ್ರ.ವಾರ್ತೆ ,ಮುದಗಲ್ , ಅ.30
ರಾಮಾಯಣ ದೇಶದ ಪವಿತ್ರ ಗ್ರಂಥ. ಇಂತಹ ಮಹಾನ್ ಗ್ರಂಥ ರಚಿಸಿದ ಆದಿಕವಿ ವಾಲ್ಮೀಕಿ ಅವರನ್ನು ಕೆಲ ಪಟ್ಟಭದ್ರ ಹಿತಾಶಕ್ತಿಗಳು, ಕಳ್ಳ- ಸುಳ್ಳ, ದರೋಡೆಕೋರ ಎಂದು ಟೀಕಿಸುತ್ತಿದ್ದಾರೆ. ಹೀಗಿದ್ದರೆ ಮಹಾನ್ ಗ್ರಂಥ ರಚಿಸುತ್ತಿರಲಿಲ್ಲ. ತಪಸ್ವಿಗೆ ಕುಳಿತಾಗ ಬೆಳೆದ ಹುತ್ತಿನಿಂದ ಪುನಃ ಎದ್ದು ಬರುತ್ತಿರಲಿಲ್ಲ ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣ ಸಮೀಪದ ಕನ್ನಾಳ ಗ್ರಾಮದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 4ನೇ ವರ್ಷದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಜಯಂತಿಯನ್ನು ಕೇವಲ ಢಾಂಬಿಕತೆಗೆ ಆಚರಿಸದೆ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಸಮಾಜದ ಬಂಧುಗಳಿಗೆ ಕಿವಿಮಾತು ಹೇಳಿದರು.
ಯಾರು ಯಾವುದೇ ಜಾತಿಗೆ ಸೀಮಿತರಲ್ಲ: ಗೊಲ್ಲಪಲ್ಲಿಯ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ಜಾತಿಗಳಿಗೆ ಗುರುಗಳಿಲ್ಲ. ನೀತಿಗೆ ಗುರುಗಳಿದ್ದಾರೆ. ಯಾರು ಯಾವುದೇ ಜಾತಿಗಳಿಗೆ ಸೀಮಿತವಲ್ಲ. ಸರ್ವರು ಧಾರ್ಮಿಕ ಹಾಗೂ ಮಹಾನ್ ನಾಯಕರ ಜಯಂತಿಗಳಲ್ಲಿ ಭಾಗವಹಿಸಬೇಕು ಎಂದರು.
ಮುದಗಲ್ ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯಗುರು ಎಂ.ಎಚ್. ಗೌಡರ ಮಾತನಾಡಿ, ನಾಯಕ ಬಂಧುಗಳು ಸಂಘಟನಯೊಂದಿಗೆ ಸರ್ಕಾರಿ ಸೌಲಭ್ಯ ಪಡೆದು ಮುಂದೆ ಬರಬೇಕು ಎಂದರು.
ಕಾಂಗ್ರೆಸ್ ಮುಖಂಡ ಬಸವಂತರಾಯ ಕುರಿ ವಿಶೇಷ ಉಪನ್ಯಾಶ ನೀಡಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಾಲ್ಮೀಕಿ ಗುರುಮನೆತನದ ವಂಶಸ್ಥ ಕನಕಗಿರಿ ಸಂಸ್ಥಾನದ ದೊರೆ ರಾಜಾ ಉಡೆಚೆಂದ್ರ ನಾಯಕ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ನಾಗಮ್ಮ ಗೌಂಡಿ, ಉಪಾಧ್ಯಕ್ಷ ಅಮರೇಶ ರಾಠೋಡ, ಅಭಿಯಂತರ(ಜೆಇ)ಸತ್ಯದೇವ ನಾಯಕ, ಪಿಡಿಒಗಳಾದ ಚನ್ನಮಲ್ಲಯ್ಯ ಸ್ವಾಮಿ, ಸುಶೀಲಕುಮಾರ, ಮುಖ್ಯಗುರುಗಳಾದ ಎಸ್.ಜಿ. ಕೊಳ್ಳಿ, ಹರಿಶ್ಚಂದ್ರ ನಾಯ್ಕ, ಮುಖಂಡರಾದ ಚನ್ನಬಸನಗೌಡ ಕನ್ನಳ, ರವಿ ಪಾಟೀಲ್, ಯಲ್ಲೋಜಿರಾವ್, ಗಂಗಪ್ಪ ನಾಯಕ, ಹನುಮಪ್ಪಯ್ಯ, ಅಮರಪ್ಪ ಗಡದರ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

