4ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಕನ್ನಡಪ್ರಭ ವಾರ್ತೆ ಸಿಂಧನೂರು ಸೆ.1
ನಗರದ ಬಸವಕೇಂದ್ರ, ಯುವ ಬಸವಕೇಂದ್ರ ಮತ್ತು ಮಹಿಳಾ ಬಸವಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಮನೆ- ಮನಗಳಿಗೆ ವಚನ ಸಂದೇಶ ತಲುಪಿಸುವ ವಚನ ಜ್ಯೋತಿ ಕಾರ್ಯಕ್ರಮ ಸೆ.4ರಂದು ಮುಕ್ತಾಯಗೊಳ್ಳಲಿದ್ದು ಅಂದು ಸತ್ಯಾಗಾರ್ಡನ್ನಲ್ಲಿ ಸಂಜೆ 6ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಯುವ ಬಸವಕೇಂದ್ರ ಗೌರವಧ್ಯಕ್ಷ ಡಾ. ಶಂಭನಗೌಡ ನಿಡಿಗೋಳ ತಿಳಿಸಿದರು.
ಬಸವ ಪ್ರಸಾದ ನಿಲಯದಲ್ಲಿ ಗೋಷ್ಠಿಯಲ್ಲಿ ಮಾತನಾಡಿ, ಬಸವ ಕೇಂದ್ರದಿಂದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮವು ತಿಂಗಳ ಪರ್ಯಂತ ನಡೆದಿದ್ದು ಇದರ ಪ್ರಯುಕ್ತವಾಗಿ ಮಧುಮೇಹ, ಹಾಗೂ ಹೃದಯರೋಗ ತಜ್ಞರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಬಸವ ಚಾರಿಟಬಲ್ ಟ್ರಸ್ಟ್ನಲ್ಲಿ ಸೆ.4ರ ಬೆ.9ರಿಂದ ಸಂಜೆ 4ರವರೆಗೆ ಜರುಗಲಿದೆ. ವೈದ್ಯರಾದ ಡಾ. ಬಾಬುರಾಜೇಂದ್ರ, ಬಿ.ನಾಯಕ ಬಾಗಲಕೋಟೆ, ಡಾ. ಶೀತಲ ನಾಯಕ ಇರುವರು.
ಸಂಸದರಿಂದ ಉದ್ಘಾಟನೆ: ನಂತರ ಬಸವ ಚಾರಿಟಬಲ್ ಟ್ರಸ್ಟ್ನ ಆಡಳಿತಧಿಕಾರಿ ಪಂಪಣ್ಣ ಹಳ್ಳಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲಿದೆ. ಕಾರ್ಯಕ್ರಮವನ್ನು ಸಂಸದ ಶಿವರಾಮೇಗೌಡ ಉದ್ಘಾಟಿಸುವರು. ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸುವರು. ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ರಂಜಾನ್ ದರ್ಗಾ ಅನುಭವ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಜಿಲ್ಲಾಧಿಕಾರಿ ನಾಗರಾಜ, ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜಶೇಖರ ಪಾಟೀಲ್, ಎನ್.ಶಿವನಗೌಡ ಗೊರೇಬಾಳ, ಟ್ರಸ್ಟ್ನ ಅಧ್ಯಕ್ಷ ಬಸವರಾಜ ಸಾಹುಕಾರ ತುರ್ವಿಹಾಳ, ಬಸವಕೇಂದ್ರ ಅಧ್ಯಕ್ಷ ಗುಂಡಪ್ಪ ಬಳಿಗಾರ, ಡಾ. ಶಿವರಾಜ, ಚಂದ್ರಶೇಖರ ಯರದಿಹಾಳ ಆಗಮಿಸುವರು. ಗೋಷ್ಠಿಯಲ್ಲಿ ಬಸವಕೇಂದ್ರ ಅಧ್ಯಕ್ಷ ಗುಂಡಪ್ಪ ಬಳಿಗಾರ, ಸಿದ್ರಾಮಪ್ಪ ಮಾಡಶಿರವಾರ, ಶಾಂತಪ್ಪ ಚಿಂಚರಿಕಿ, ಸಂಗಪ್ಪ ಕಳಕಣ್ಣನವರ್, ಅಮರೇಶ, ನಿಜಗುಣ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

