ಅಕ್ರಮ ಉಸುಕು ಮಾರಾಟ
ಕನ್ನಡಪ್ರಭ ವಾರ್ತೆ ಟಿ ಸಿಂಧನೂರು ಟಿ ಸೆ.1
ತಾಲೂಕಿನ ವ್ಯಾಪ್ತಿಗೆ ಒಳಪಡುವ ಹೆಡಗಿನಾಳ ಗ್ರಾಮದಲ್ಲಿ, ಲೋಕೊಪಯೋಗಿ ಅಧಿಕಾರಿಗಳು ಆಂಧ್ರಪ್ರದೇಶದ ಲಾರಿಗಳಿಗೆ ಹಗಲು ಹೊತ್ತಿನಲ್ಲಿಯೇ ಭಯವಿಲ್ಲದೆ ಅಕ್ರಮವಾಗಿ ಹೊಳೆಯಲ್ಲಿರುವ ಉಸುಕನ್ನು ಸರಬರಾಜು ಮಾಡಲು ಸಹಕರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳಿಯ ಸರ್ಕಾರಿ ಶಾಲೆಯ ಎಸ್ಡಿಎಮ್ಸಿ ಮಾಜಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಸುಮಾರು ಒಂದು ವಾರದಿಂದಲೂ ಲೋಕಪಯೋಗಿ ಅಧಿಕಾರಿಗಳಾದ ನಾಗರಾಜ ಹಾಗೂ ಸಿಬ್ಬಂದಿ ಈ ಉಸುಕನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, ಗ್ರಾಮಸ್ಥರು ಕೇಳಿದ್ದಕ್ಕೆ ಮೌನವಾಗಿದ್ದಾರೆ. ಇದರ ಬಗ್ಗೆ ಪೋಲಿಸರಿಗೆ, ಲೋಕೋಪಯೋಗಿ ಅಧಿಕಾರಿಗಳಿಗೆ ಮಾಹಿತಿ ಗೊತ್ತಿದ್ದು ತಮಗೆ ಎನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಆಸ್ಪದವಾಗಿದೆ.
ನಗರದ ಚಿಕ್ಕ ಹಳ್ಳದಲ್ಲಿ ರಾತ್ರಿಯಿಡೀ ಯಾಮೊಬ್ಬ ಅಧಿಕಾರಿಗಳಿಗೆ ಹೆದರದೆ ಅಕ್ರಮ ಉಸುಕು ಸಾಗಾಣಿಕೆ ನಡೆದಿದೆ. ಗಾಡಿಯ ಮಾಲೀಕರಿಗೆ ವಿಚಾರಿಸಿದರೆ ರವಿವಾರ ಇರುವುದರಿಂದ ಯಾವ ಅಧಿಕಾರಿ ಇತ್ತ ಸುಳಿಯುವುದಿಲ್ಲ. ಅವರಿಗೆ ಸೇರುವುದು ಸೇರುತ್ತೆ ಎನ್ನುತ್ತಾರೆ. ಲಿಂಗಸ್ಗೂರು ಸಹಾಯಕ ಆಯುಕ್ತ ಟಿ. ಯೋಗೇಶ ಉಸುಕು ಅಕ್ರಮ ಸಾಗಾಣಿಕೆ ಮಾಡುವವರನ್ನು ಕೂಡಲೇ ಬಂಧಿಸುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

