ರಾಯಚೂರು

ದೇವದಾಸಿಯರ ಸಮ್ಮೇಳನ ಯಶಸ್ವಿ

Published On :

ಸಿಂಧನೂರು: ನಗರದ ಡಾ.ಅಂಬೇಡ್ಕರ್ ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಈಚೆಗೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ತಾಲೂಕು ಸಮ್ಮೇಳನ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಲ್ಲಯ್ಯ ಜಾಲಹಳ್ಳಿ ದೇವದಾಸಿಯರ ಮೇಲಿರುವ ಸರ್ಕಾರಗಳ ಮಲತಾಯಿ ಧೋರಣೆ ಖಂಡನೀಯ. ದೇವದಾಸಿಯರ ಮಹಿಳಾ ಸಂಘಟನೆ ಪ್ರಾರಂಭವಾದದ್ದೇ 12 ಬೇಡಿಕೆಗಳನ್ನು ಆಧರಿಸಿ, ಆದರೆ ಇದುವರೆಗೆ ಕೇವಲ ಎರಡು ಬೇಡಿಕೆ ಮಾತ್ರ ಈಡೇರಿವೆ. ಇನ್ನುಳಿದ ಬೇಡಿಕೆಗಳು ಸರ್ಕಾರದ ಮುಂದಿದ್ದು ಅವುಗಳ ಈಡೇರಿಕೆಗೆ ಒತ್ತಡ ಹೇರಲು ಹೋರಾಟ ಚುರುಕುಗೊಳಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ನರಸಿಂಹಪ್ಪ ಮಾತನಾಡಿ, ಸಂಘಟನೆಯ ರಾಜ್ಯ ಸಮ್ಮೇಳನವು ಅಕ್ಟೋಬರ್ 3ರಂದು ಹೊಸಪೇಟೆಯಲ್ಲಿ, ಜಿಲ್ಲಾ ಸಮ್ಮೇಳನ ಸೆ.7ರಂದು ರಾಯಚೂರಿನಲ್ಲಿ ನಡೆಯಲಿದ್ದು ಬೇಡಿಕೆ ಬಗ್ಗೆ ಚರ್ಚಿಸಲಾಗುವುದು ಎಂದರು.
ಹನುಮಂತಪ್ಪ ಮ್ಯಾಗಳಮನಿ, ಮಕ್ಬುಲ್ಸಾಬ ಸಾಲಗುಂದಾ, ರಾಮಯ್ಯ ಸುಲ್ತಾನಪೂರ ಹಾಜರಿದ್ದರು. ಯಂಕಪ್ಪ ಕೆಂಗಲ್ ಸ್ವಾಗತಿಸಿದರು. ಆದನಗೌಡ ನಿರೂಪಿಸಿದರು. ಸೈಮನ್ ವಂದಿಸಿದರು.
ಪದಾಧಿಕಾರಿಗಳು: ಗೌರವಾಧ್ಯಕ್ಷರಾಗಿ ನರಸಿಂಹಪ್ಪ, ಅಧ್ಯಕ್ಷರಾಗಿ ಹನುಮಮ್ಮ ರೈತನಗರಕ್ಯಾಂಪ್, ಉಪಾಧ್ಯಕ್ಷರಾಗಿ ಶೇಖಮ್ಮ ರೌಡಕುಂದಾ, ಸಂಘಟನಾ ಕಾರ್ಯದರ್ಶಿ ಧರ್ಮಮ್ಮ ಗುಂಡಾ, ಕಾರ್ಯದರ್ಶಿ ಯಂಕಮ್ಮ ಸಿದ್ರಾಂಪುರ, ಸಹಕಾರ್ಯದರ್ಶಿಗಳಾಗಿ ಶಿವಮ್ಮ ಕಣ್ಣೂರು, ದುರುಗಮ್ಮ ಜಾಲಿಹಾಳ, ಖಜಾಂಚಿ ತಾಯಮ್ಮ ಹೊಸಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮರಿಯಮ್ಮ ಬಳಗಾನೂರು, ಅಯ್ಯಮ್ಮ ಹೊಗರನಾಳ, ಮರಿಯಮ್ಮ ಬಸಾಪುರ, ಕರಿಯಮ್ಮ ಗೊರೇಬಾಳ, ಯಮನಮ್ಮ ಸಿಂಧನೂರು, ಕರಿಯಮ್ಮ ವಿರುಪಾಪುರ, ದುರುಗಮ್ಮ ಉಪ್ಪಳ, ಹುಸೇನಮ್ಮ ಹೊಸಳ್ಳಿ, ಕರಿಯಮ್ಮ ಬೆಳಗುರ್ಕಿ, ಯಲ್ಲಮ್ಮ ರಾಮತ್ನಾಳ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.