ರಾಯಚೂರು

ಸಾಮೂಹಿಕ ವಿವಾಹ

Published On :

ಸಿಂಧನೂರು: ನಗರದ ಕೋಟೆ ಬಡಾವಣೆಯಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿದ್ದ ಒಳಬಳ್ಳಾರಿ ಚನ್ನಬಸವ ತಾತನ ಪುರಾಣ ಮಂಗಲೋತ್ಸವದ ಕಾರ್ಯಕ್ರಮದಲ್ಲಿ ಆರು ಸಾಮೂಹಿಕ ವಿವಾಹಗಳು ಜರುಗಿದವು.
ಕೋಟೆ ವೀರೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಸುಮಂಗಲೆಯರಿಂದ ಕುಂಭ, ಕಳಸ, ವೀರಗಾಸೆ ಕುಣಿತ, ವಿವಿಧ ಭಜನಾ ಮಂಡಳಿಯಿಂದ ಭಜನೆಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.
ನಗರಸಭೆಯ ಮಾಜಿ ಸದಸ್ಯ ಶರಣೆಗೌಡ ಬೆನ್ನೂರು, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಜಿಪಂ ಸದಸ್ಯೆ ಶಾಂತಾ ದಯಾನಂದ ರೆಡ್ಡಿ, ಪುರಸಭೆ ಮಾಜಿ ಸದಸ್ಯರಾದ ಅಮರಯ್ಯ ಸ್ವಾಮಿ ಒಳಬಳ್ಳಾರಿ, ತಿಪ್ಪಯ್ಯಸ್ವಾಮಿ, ನಾಗಪ್ಪ ಹೊಸಮನಿ, ನಿವೃತ್ತ ಶಿಕ್ಷಕ ಧರಯ್ಯ ಸ್ವಾಮಿ, ವೀರಭದ್ರಪ್ಪ ಗಸ್ತಿ, ಮಹಾಂತಪ್ಪ ಯರದಿಹಾಳ, ಶರಣಯ್ಯಸ್ವಾಮಿ ರಾರಾವಿ, ಬಸ್ಸಪ್ಪಯ್ಯ ಸಾಲಿಮಠ, ಅಮರಪ್ಪ ಕುದುರೆ ಮತ್ತು ಕೋಟೆ ಗೆಳೆಯರ ಬಳಗದ ಸದಸ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.