ಕ್ರೀಡೆಗಳು ಭಾವೈಕ್ಯತೆ ಪ್ರತೀಕ
ಕ.ಪ್ರ. ವಾರ್ತೆ ಸಿಂಧನೂರು ಸೆ.11
ಮನೋರಂಜನೆ, ಆರೋಗ್ಯ ನೀಡುವ ಜೊತೆಗೆ ಸಮಾಜದಲ್ಲಿ ಶಾಂತಿ, ಸಹೋದರತೆ, ಪ್ರೀತಿ ಬೆಳೆಸುವಂತಹ ಕ್ರೀಡೆಗಳು ಭಾವೈಕ್ಯತೆಯ ಪ್ರತೀಕವಾಗಿವೆ ಎಂದು ಕೊಪ್ಪಳ ಸಂಸದ ಶಿವರಾಮಗೌಡ ಹೇಳಿದರು.
ನಗರದ ಶ್ರೀಕೃಷ್ಣದೇವರಾಯ ಪಿಯು ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಪಿಯುಸಿ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಹಿಂದುಳಿದಿಲ್ಲ ಎಂಬುದನ್ನು ಸಾಬೀತುಪಡಿಸಿ: ನಿತ್ಯವೂ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಉತ್ತಮ ಆರೋಗ್ಯವಿದ್ದರೆ ಒಳ್ಳೆಯ ಮನಸ್ಸು ನಮ್ಮದಾಗುತ್ತದೆ. ಕ್ರೀಡೆಯಲ್ಲಿ ಸೋಲು- ಗೆಲವು ಸಹಜ. ಗೆಲ್ಲುವ ಛಲ ಮೈಗೂಡಿಸಿಕೊಳ್ಳಬೇಕು. ಸೋಲು ಬಂದಾಗ ಎದೆಗುಂದದೇ ಸತತ ಪ್ರಯತ್ನವಾಗಬೇಕಿದೆ. ಬತ್ತದ ನಾಡಿನಲ್ಲಿ ಕ್ರೀಡೆಗಳು ಹಿಂದುಳಿದಿಲ್ಲ ಎನ್ನುವುದನ್ನು ಸಾರಬೇಕಿದೆ ಎಂದರು.
ಕ್ರೀಡಾ ಜ್ಯೋತಿ ಸ್ವೀಕರಿಸಿದ ಡಿಡಿಪಿಐ ಕಲ್ಲಯ್ಯ ಮಾತನಾಡಿ, ಈ ವರ್ಷದ ಫಲಿತಾಂಶದಲ್ಲಿ ಜಿಲ್ಲೆಗೆ ಸಿಂಧನೂರು ತಾಲೂಕು ಪ್ರಥಮ ಸ್ಥಾನ ಗಳಿಸಿದೆ. ಇಲ್ಲಿ ಉತ್ತಮ ಕ್ರೀಡಾಪಟುಗಳಿದ್ದು, ಕ್ರೀಡೆಗಳಲ್ಲಿಯೂ ಉತ್ತಮ ಸಾಧನೆಯನ್ನು ವಿದ್ಯಾರ್ಥಿಗಳು ಮಾಡಲಿದ್ದಾರೆ ಎಂದರು. ನಗರಸಭೆ ನೂತನ ಅಧ್ಯಕ್ಷ ಜಾಫರ ಜಾಹಗೀರದಾರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ಕ್ರೀಡಾ ಮೈದಾನವನ್ನು ಉದ್ಘಾಟಿಸಿದರು.
ತಾಪಂ ಸದಸ್ಯ ವೆಂಕೋಬ ಸಾಸಲಮರಿ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ಶ್ರೀಕೃಷ್ಣದೇವರಾಯ ಸಂಸ್ಥೆಯ ಉಪಾಧ್ಯಕ್ಷ ಬಿ.ಸುಬ್ರಮಣ್ಯ, ಕಾರ್ಯದರ್ಶಿ ಡಿ.ವೆಂಕಟರಾವ, ಸಿಂಹಾದ್ರಿ ಸತ್ಯನಾರಾಯಣ, ಎಂ.ಸಿ.ಅಂಕಯ್ಯ, ಜಿ.ಸತ್ಯನಾರಾಯಣ, ಆಡಳಿತಾಧಿಕಾರಿ ವೈ.ನರೇಂದ್ರನಾಥ, ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ಬಿ. ಕರಂಡಿ, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸಿ. ಹಿರೇಮಠ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ಸುಣಗದ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

