ರಾಯಚೂರು

ಹಿರಿಯ ಜೀವಗಳಿಗೆ ಗೌರವ ಸಮರ್ಪಣೆ

Published On :

ಮುದಗಲ್: ಪಟ್ಟಣದ ವಿಜಯ ಮಹಾಂತೇಶ್ವರ ಮಠದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯರಿಗೆ ವೀರಶೈವ ಸಮಾಜದಿಂದ ಗೌರವ ಸಮರ್ಪಣೆ ಮಾಡಲಾಯಿತು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಮರೇಗೌಡ ಪಾಟೀಲ್ ಮಟ್ಟೂರು, ವಿರುಪಾಕ್ಷಪ್ಪ, ಜುಮ್ಮರಲಾಲ ಶೇಠ, ನೀಲಕಂಠಪ್ಪ ಸುಂಕದ, ಲಿಂಗಪ್ಪ ಹಣಗಿ, ಮಹಾಂತಯ್ಯ ರ್ಯಾವಿಹಾಳ ಮಠ, ಅನಂತರಾವ ದೇಶಪಾಂಡೆ, ಯೋಗೇಶಪ್ಪ ಗೌರಿಪೂರ, ಲಿಂಗರಾಜ ಸಾಹುಕಾರ ಸಂತೆಕೆಲ್ಲೂರು, ಸಿದ್ದನಗೌಡ ಕರಡಕಲ್, ಹಾಜಿಮಲಂಗ ಬಾಬಾ, ಶರಣಪ್ಪ ವಡ್ಡರ ಮುಂತಾದವರನ್ನು ವೀರಶೈವ ಸಮಾಜದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಮತ್ತು ಪದಾಧಿಕಾರಿಗಳು ಗೌರವಿಸಿದರು.


ಕುಡಿವ ನೀರು ಸರಬರಾಜಿನಲ್ಲಿ ವ್ಯತ್ಯಯ


ಮುದಗಲ್: ಮುದಗಲ್ಗೆ ಶಾಶ್ವತ ಕುಡಿವ ನೀರು ಸರಬರಾಜು ಮಾಡುವ ನವಲಿ ಜಾಕ್ವೆಲ್ನಲ್ಲಿ ಮೋಟಾರ್ ಹಾಗೂ ಸ್ಟಾಟರ್ ದುಸ್ಥಿತಿಯಲ್ಲಿದ್ದುದರಿಂದ ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಪಂ ಮುಖ್ಯಾಧಿಕಾರಿ ಮಹಾಂತೇಶ ತಿಳಿಸಿದ್ದಾರೆ.
ನವಲಿ ಜಾಕ್ವೆಲ್ನಲ್ಲಿ ಕೃಷ್ಣಾ ನದಿಯಿಂದ ನೀರನ್ನು ಪಂಪ್ ಮಾಡುವ ಮೋಟಾರ್ಗಳು ಹಾಗೂ 2 ಸ್ಟಾಟರ್ಗಳು ದುರಸ್ಥಿಯಲ್ಲಿವೆ. ಮುದಗಲ್ ಪ.ಪಂ. ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ, ದುರಸ್ತಿಗೆ ಬಂದಿರುವ ಮೋಟಾರ್ಗಳನ್ನು ಪರಿಶೀಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ. ಪ.ಪಂ. ಅಧ್ಯಕ್ಷ ರಜ್ಜಬ್ ಅಲಿ ಟಿಂಗ್ರಿ ಹಾಗೂ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ನವಲಿ ಜಾಕ್ವೆಲ್ಗೆ ಭೇಟಿ ನೀಡಿ ದುರಸ್ತಿಗೆ ಬಂದಿರುವ ಮೋಟಾರ್ಗಳನ್ನು ಪರಿಶೀಲಿಸಿದರು. ಕುಡಿವ ನೀರಿನ ಅಭಾವವಾಗದಂತೆ ಕ್ರಮ ಕೈಗೊಳ್ಳಲು ಶೀಘ್ರವೇ ಮೋಟಾರ್ಗಳ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಿ ನೀರಿನ ಅಭಾವವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪ.ಪಂ. ಸದಸ್ಯರಾದ ವೀರೇಶ ವಡ್ಡರ್, ವೀರಭದ್ರಪ್ಪ ಕೊಳ್ಳಿ, ಮುಖಂಡರಾದ ನಾಗನಗೌಡ ಅಕ್ಕಿ, ಸಂಜೀವ ಕುಮಾರ್, ಚಂದ್ರಶೇಖರ, ಪ.ಪಂ.ಸಿಬ್ಬಂದಿ ರಂಗನಾಥ, ಬಸವರಾಜ ಕೊಟ್ಟೂರು ಸೇರಿದಂತೆ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.