ರಾಯಚೂರು

ಅನ್ಯ ತಾಲೂಕಿಗೆ ನಿಯೋಜನೆ, ಗೋಳಾಟ

Published On :

ಸಿಂಧನೂರು: ಚುನಾವಣಾ ಕರ್ತವ್ಯಕ್ಕೆ ಹೊರ ತಾಲೂಕಿಗೆ ನಿಯೋಜಿಸಿರುವುದರಿಂದ ಚಿಕ್ಕ ಮಕ್ಕಳನ್ನು ಹೊಂದಿರುವ, ಮತ್ತಿತರ ಕಾಯಿಲೆ ಬಾಧಿತರಾಗಿರುವ ತಾಲೂಕಿನ ಮಹಿಳಾ ನೌಕರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವಾರ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಅವರು ಮಹಿಳಾ ನೌಕರರನ್ನು ಆಯಾ ಸ್ಥಳೀಯ ತಾಲೂಕಿನಲ್ಲೇ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದಾಗಿ ತಿಳಿಸಿದ್ದರು. ಈಗ ಏಕಾಏಕಿ ಸಿಂಧನೂರು ತಾಲೂಕಿನ ಹಲವು ಮಹಿಳಾ ನೌಕರರನ್ನು ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಿಗೆ ನಿಯೋಜಿದ್ದು ತೀವ್ರ ತೊಂದರೆಯಾಗಿದೆ ಎಂದು ಮಹಿಳಾ ನೌಕರರು ಗೋಳಿಟ್ಟಿದ್ದಾರೆ. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗಿತಾಬಾಯಿ ಸೇರಿದಂತೆ ಜಯಶ್ರೀ ಬಿರಾದಾರ, ಆಯೀಷಾ ಸುಲ್ತಾನ್, ಶಕುಂತಲಾ, ಅಂಬಮ್ಮ, ಅಂಬಿಕಾ ದೇವಿ, ಸಾವಿತ್ರಿ ಪಾಟೀಲ್, ಕೌಸರ್ ಸುಲ್ತಾನ್ ಮತ್ತಿತರರನ್ನು ರಾಯಚೂರು ತಾಲೂಕಿನ ಗ್ರಾಮಗಳಿಗೆ ನಿಯೋಜಿಸಿದ್ದು ತಮಗಾಗಿರುವ ತೊಂದರೆಯನ್ನು ತಹಸೀಲ್ದಾರ್ ಮತ್ತು ಸಹಾಯಕ ಚುನಾವಣಾ ಅಧಿಕಾರಿ ಬಳಿ ಹೇಳಿಕೊಂಡಿದ್ದಾರೆ. ಈ ಕುರಿತು ಸಹಾಯಕ ಚುನಾವಣಾಧಿಕಾರಿ ಜಿಲ್ಲಾಧಿಕಾರಿಗಳ ಗಮನ ಸೆಳೆಯುವುದಾಗಿ ಅವರು ಭರವಸೆ ನೀಡಿದ್ದಾರೆ. ಆದರೆ ಅಂತಿಮವಾಗಿ ಮಹಿಳಾ ನೌಕರರು ಮಾತ್ರ ತಮ್ಮ ಸಮಸ್ಯೆ ನಿವಾರಣೆ ಆಗುತ್ತದೆಯೋ ಇಲ್ಲವೋ ಎನ್ನುವ ಸಂದೇಹದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.