ಬಸ್ನಿಲ್ದಾಣದೊಳ ಹರಿವ ಕೊಳಚೆ ನೀರು; ಕಿರಿಕಿರಿ
ಆಳಂದ: ಇಲ್ಲಿನ ಸುಂದರವಾದ ಕೇಂದ್ರೀಯ ಬಸ್ನಿಲ್ದಾಣ ಕಟ್ಟಡದೊಳಗಿನ ಹೋಟೆಲ್ನ ಕೊಳಚೆ ನೀರು ಹರಿದು ಪ್ರಯಾಣಿಕರ ಓಡಾಟಕ್ಕೆ ಅಡ್ಡಿಯಾಗಿ, ವಾಸನೆ ಹರಡಿದರು ಸಂಬಂಧಿತರು ಕ್ರಮಕೈಗೊಂಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಹಲವು ತಿಂಗಳಿಂದಲೂ ಕೊಳಚೆ ನೀರು ಒಳಚರಂಡಿಯಿಂದ ಹರಿಯದೆ, ಮೇಲ್ಭಾಗದಿಂದ ಹರಿಯುತ್ತಿದ್ದು, ಓಡಾಡುವ ಜನರು ಜಾರಿ ಬೀಳತೊಡಗಿದ್ದಾರೆ. ಅಲ್ಲದೆ ದುರ್ವಾಸನೆ ಹರಡಿಕೊಂಡು ನಾಗರಿಕರ ಅನಾರೋಗ್ಯಕ್ಕೆ ದಾರಿಯಾಗಿದೆ. ಹರಿಯುವ ಕೊಳಚೆ ನೀರು ಬಸ್ ನಿಲುಗಡೆ ಸ್ಥಳದಲ್ಲೇ ನಿಂತು ಹಲವು ತಿಂಗಳಿಂದಲೂ ಹರಿಯುತ್ತಿದ್ದು, ಇದರಿಂದ ಬಸ್ನಿಂದ ಏರಿಳಿಯುವ ಪ್ರಯಾಣಿಕರು ರಾಡಿಯಲ್ಲೇ ನಡೆದಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ವಯೋವೃದ್ಧರು, ಮಕ್ಕಳು ಜಾರಿ ಬಿದ್ದುಗಾಯಗೊಂಡು ನಿಲ್ದಾಣದ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕತೊಡಗಿದ್ದಾರೆ. ಈಗಲೂ ಕಾಲಮಿಂಚಿಲ್ಲ. ಬಸ್ನಿಲ್ದಾಣ ಸ್ವಚ್ಛತೆ ಕೈಗೊಳ್ಳಬೇಕು. ಕುಡಿಯುಲು ನೀರಿನ ವ್ಯವಸ್ಥೆ ಕೈಗೊಂಡು ಸದ್ಯ ಹರಿಯುತ್ತಿರುವ ಕೊಳಚೆ ನೀರು ತಡೆಯಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ನೇರ ಸಂದರ್ಶನ ಇಂದು, ನಾಳೆ
ಗುಲ್ಬರ್ಗ: ಉದ್ಯೋಗ ಮತ್ತು ತರಬೇತಿ ಇಲಾಖೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಶಿಶುಕ್ಷದಾರ ನೇಮಕಾತಿಗಾಗಿ ಏ.22, ಏ.23 ರಂದು ನೇರ ಸಂದರ್ಶನ ಹಮ್ಮಿಕೊಂಡಿದ್ದಾರೆ. ಏ.22 ರಂದು ಬೆಳಗ್ಗೆ 10ಕ್ಕೆ ಟರನರ್, ವೆಲ್ಡರ್, ಮಷಿನಿಸ್ಟ್, ಎಂಆರ್ಎಸಿ, ಫಿಟರ್ ಮತ್ತು ಡಿಎಂಎಂ ವೃತ್ತಿಗಳಿಗಾಗಿ ಹಾಗೂ ಏ.23 ರಂದು ಬೆಳಗ್ಗೆ 10ಕ್ಕೆ ಎಲೆಕ್ಟ್ರಾನಿಕ್ ಮೆಕಾನಿಕ್, ಎಲೆಕ್ಟ್ರಿಶಿಯನ್, ಎಲೆಕ್ಟ್ರೋ ಪ್ಲಾಟರ್ ವೃತ್ತಿಗಳಿಗಾಗಿ ಸಂದರ್ಶನ ನಡೆಯಲಿದೆ ಎಂದು ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಎನ್. ಪಾಂಚಾಳ ತಿಳಿಸಿದ್ದಾರೆ.
ಯುವಕ ಕಣ್ಮರೆ
ಶಹಾಬಾದ್: ನಗರದ ಭಾರತ ಚೌಕ್ ನಿವಾಸಿ ಗಂಗಮ್ಮ ಶಿವಶರಣಪ್ಪ ಭೂಮಾ ಎಂಬುವರ ಮಗ ಗುರುರಾಜ (29) ಕಳೆದ 10 ದಿನಗಳ ಹಿಂದೆ ಕಣ್ಮರೆಯಾಗಿದ್ದು, ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಯುವಕ ನಗರದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ತೆಳುವಾದ ಮೈಕಟ್ಟಿನ, ಗೋದಿ ಬಣ್ಣದ ಈ ಯುವಕನ ಬಗ್ಗೆ ನಗರ ಠಾಣೆಯಲ್ಲಿ ಗುರುರಾಜ ಅವರ ತಾಯಿ ಗಂಗಮ್ಮ ಪ್ರಕರಣ ದಾಖಲಿಸಿದ್ದು, ಪ್ರಕರಣದ ಶೋಧ ನಡೆದಿದೆ.
ಇಂದಿನಿಂದ ಜಾತ್ರೆ
ಗುಲ್ಬರ್ಗ: ಜಿಲ್ಲೆಯ ಕೇಂದ್ರವಾದ ಚಿತ್ತಾಪುರದಿಂದ 10 ಕಿ.ಮೀಟರ್ ದೂರವಿರುವ ರಾವೂರ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವವು ಏ.22 ರಿಂದ 27ರವರೆಗೆ ನಡೆಯಲಿದೆ. ಏ.23 ರಂದು ಸಂಜೆ 6.30ಕ್ಕೆ ಭಕ್ತರ ಜಯಘೋಷದೊಂದಿಗೆ ರಥೋತ್ಸವ ಜರುಗುವುದು ಎಂದು ರವಿಚಂದ್ರ ತಿಳಿಸಿದ್ದಾರೆ.
ತಪಾಸಣೆ ಶಿಬಿರ
ಯಾದಗಿರಿ: ನಗರದ ಸ್ಟೇಷನ್ ಪ್ರದೇಶದಲ್ಲಿರುವ ಸಿದ್ದೇಶ್ವರ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಏ. 23ರಂದು ಉಚಿತ ಚರ್ಮರೋಗ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಈ ತಪಾಸಣೆ ಕಾರ್ಯ ನಡೆಯಲಿದೆ. ಚೆನ್ನೈ ಮತ್ತು ಬೆಂಗಳೂರ ನಗರದ ಖ್ಯಾತ ಚರ್ಮರೋಗ ತಜ್ಞೆ ಡಾ. ಶ್ವೇತ ವಿ. ಜಾಕಾ ಭಾಗವಹಿಸಲಿದ್ದಾರೆ. ಚರ್ಮಗಾಯ, ಹುಟ್ಟು ಮಚ್ಚೆ, ಪಾದಗುಳ್ಳೆ, ಚರ್ಮಗುಳ್ಳೆ ಮೊಡವೆ ಕಲೆ, ಭಂಗು, ಕೂದಲು ಉದುರುವಿಕೆ ತಡೆಗಟ್ಟುವುದಕ್ಕೆ ಸಲಹೆ, ಚಿಕಿತ್ಸೆ ನೀಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

