ರಾಯಚೂರು

ಮಾಹಿತಿ ಪ್ರಸಾರದ ಮೂಲಕ ರೈತರಿಗೆ ನೆರವಾಗಲಿ: ಪತ್ರಕರ್ತ ಬಿ. ವೆಂಕಟಸಿಂಗ್

Published On :

ಕ.ಪ್ರ. ವಾರ್ತೆ   ರಾಯಚೂರು   ಏ.21
ನಗರದ ಕೃಷಿ ವಿವಿಯಲ್ಲಿ ಸೋಮವಾರ ಎರಡು ದಿನಗಳ ಕೃಷಿ ಪತ್ರಿಕೋದ್ಯಮ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕೃಷಿ ವಿಶ್ವವಿದ್ಯಾಲಯ ರಾಯಚೂರು ಮತ್ತು ಮಾಧ್ಯಮ ಸಂಸ್ಕ ೃತಿ ಅಭಿವೃದ್ಧಿ ಕೇಂದ್ರ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಹಿರಿಯ ಪತ್ರಕರ್ತ ಬಿ. ವೆಂಕಟಸಿಂಗ್ ಚಾಲನೆ ನೀಡಿದರು. ಮಾಧ್ಯಮಗಳಲ್ಲಿ ಕೃಷಿ ವಿಚಾರಗಳಿಗೆ, ಕೃಷಿ ಸಂಬಂಧಿ ನೂತನ ಆವಿಷ್ಕಾರಗಳ ಬಗ್ಗೆ ಹೆಚ್ಚೆಚ್ಚು ಮಾಹಿತಿ ಪ್ರಸಾರ ಮಾಡುವ ಮೂಲಕ ರೈತರಿಗೆ ನೆರವಾಗಬೇಕು. ಅದೇರೀತಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರೊಂದಿಗೆ ನೇರವಾಗಿ ಬೆರೆತು ರೈತರಿಗೆ ಬೇಕಾದ ವಿಷಯಗಳನ್ನು ಬರೆವಣಿಗೆಯ ಮೂಲಕ ತಲುಪಿಸುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೃಷಿ ಲೇಖನಕ್ಕೆ ಪ್ರಯತ್ನ: ಶಿರಸಿಯ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ಸಂಚಾಲಕ ಶಿವಾನಂದ ಕಳವೆ ಮಾತನಾಡಿ, ಕೃಷಿ ಪತ್ರಿಕೋದ್ಯಮ ಮಹತ್ವವನ್ನು ವಿವರಿಸಿ, ತರಬೇತಿಯ ಮುಖಾಂತರ ಕೃಷಿ ಲೇಖನಗಳನ್ನು ಬರೆಯುವ ಆಸಕ್ತಿಯನ್ನು ವಿಜ್ಞಾನಿಗಳಲ್ಲಿ ಮೂಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕಾರ್ಯಾಗಾರ ಪ್ರಯೋಜನಕಾರಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಮಾತನಾಡಿ, ಪತ್ರಿಕೋದ್ಯಮ ಕಾರ್ಯಾಗಾರದಿಂದ ಕೃಷಿ ವಿಜ್ಞಾನಿಗಳಿಗೆ ಅನುಕೂಲವಾಗಲಿದ್ದು, ಮುಂಬರುವ ದಿನಗಳಲ್ಲಿ ರೈತರಿಗೆ ಮಾಹಿತಿ ರವಾನಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ನರೇಂದ್ರ ರೈದೇರ್ಲ, ಅಡ್ಡೂರ ಕೃಷ್ಣರಾವ್ ಮತ್ತು ಪೂರ್ಣಪ್ರಜ್ಞ ಬೇಳೂರು ಹಾಜರಿದ್ದರು. ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ.ಎಸ್. ಜನಗೌಡರ್, ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ ಮತ್ತು ತ್ರಿವಿಕ್ರಮ್ ಜೋಷಿ, ವಿವಿ ಅಧಿಕಾರಿಗಳು, ವಿಜ್ಞಾನಿಗಳು ಇದ್ದರು.
ಈ ವೇಳೆ ಕೃಷಿ ಪ್ರದೀಪಿಕೆ ತ್ರೈಮಾಸಿಕ ಪತ್ರಿಕೆ ಲೋಕಾರ್ಪಣೆ ಮಾಡಲಾಯಿತು. ವಿಶ್ವವಿದ್ಯಾಲಯದ ಪ್ರಕಟಣಾ ಕೇಂದ್ರದ ಸಂಪಾದಕ ಡಾ. ಪ್ರಮೋದ ಕಟ್ಟಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.