ಸಿಂಧನೂರಿನಲ್ಲಿ ಶಿವಾನುಭವ ಕಮ್ಮಟ ಇಂದಿನಿಂದ
ಸಿಂಧನೂರು: ದಾವಣಗೆರೆಯ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಲಿಂ. ಶರಣೆ ಪುಟ್ಟಮ್ಮ ಮತ್ತು ಲಿಂ.ಶರಣ ಬಸವರಾಜಪ್ಪ ಅಜ್ಜಂಪುರಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗ ಸಂಯುಕ್ತಾಶ್ರಯದಲ್ಲಿ ಏ. 25 ರಿಂದ 27 ರವರೆಗೆ ಶಿವಾನುಭವ ಕಮ್ಮಟ ಏರ್ಪಡಿಸಲಾಗಿದೆಂದು ಯುವ ಬಸವಕೇಂದ್ರದ ಅಧ್ಯಕ್ಷ ಚಂದ್ರಶೇಖರ ಯರದಿಹಾಳ ತಿಳಿಸಿದ್ದಾರೆ. ಅನುಭಾವಿ ಶರಣ-ಶರಣೆಯರು, ಬಸವಾದಿ ಶರಣರು ಸಿದ್ಧಾಂತ-ಸಾಹಿತ್ಯ-ಸಂಸ್ಕೃತಿ ಕುರಿತು ಪ್ರವಚನ ನೀಡಲಿದ್ದಾರೆ. ಬಸವ ಭಕ್ತರಲ್ಲಿನ ಅಭಿಪ್ರಾಯ ಭೇದಗಳು, ಆಚರಣೆ ವ್ಯತ್ಯಾಸಗಳು ಸೌಹಾರ್ದತೆ, ಪ್ರೀತಿ ಬೆಸೆಯಲು ಸಮಾವೇಶ ಸಹಕಾರಿಯಾಗಲಿದೆ. ಇಂತಹ ವೇದಿಕೆ ನಿರ್ಮಾಣವಾಗಲು ನಾವೆಲ್ಲರೂ ಒಂದೆಡೆ ಸೇರಿ, ಸಂವಾದದ ಮೂಲಕ ಚರ್ಚೆ ನಡೆಸಬೇಕು. ಬಸವ ಅಭಿಮಾನಿಗಳು, ಶರಣರು ಆಗಮಿಸಬೇಕೆಂದು ಕೋರಿದ್ದಾರೆ.
ಮೂರ್ತಿ ಮೆರವಣಿಗೆ
ರಾಯಚೂರು: ನಗರದ ಶ್ರೀಕಂದಗಡ್ಡೆ ಮಾರೆಮ್ಮದೇವಿಯ ನೂತನ ಶಿಲಾಮೂರ್ತಿ ವಿಗ್ರಹದ ಮೆರವಣಿಗೆ ನಗರದಲ್ಲಿ ಏ.25ರಂದು ಆಯೋಜಿಸಲಾಗಿದೆ. ಬೆಳಗ್ಗೆ 9ಕ್ಕೆ ನಗರದ ಕಿಲ್ಲೆಬ್ರಹನ್ಮಠದಿಂದ ಕುಂಭ ಕಳಸ ದೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಕಂದಗಡ್ಡೆ ಮಾರೆಮ್ಮ ದೇವಿಯ ನೂತನ ವಿಗ್ರಹದ ಮೆರವಣಿಗೆ ಸಾಗಿ ದೇವಸ್ಥಾನ ತಲುಪಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

