ರಾಯಚೂರು

ಕಾಶಿ ಜಗದ್ಗುರು ಇಂದು ತೊನಸನಳ್ಳಿ(ಎಸ್)ಗೆ

Published On :

ತೊನಸನಳ್ಳಿ(ಎಸ್)/ಶಹಾಬಾದ್: ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ 6ನೇ ಪಟ್ಟಾಧಿಕಾರ ಮಹೋತ್ಸವದ ಧರ್ಮ ಚಿಂತನಾಗೋಷ್ಠಿಯಲ್ಲಿ ಪಾವನ ಸನ್ನಿಧಾನ ವಹಿಸಲು ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಚಂದ್ರಶೇಖರ ಭಗವತ್ಪಾದರು ಏ26ರಂದು ಗ್ರಾಮಕ್ಕೆ ಆಗಮಿಸಲಿದ್ದಾರೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಗ್ರಾಮದಲ್ಲಿ ಸಂಜೆ 6 ಗಂಟೆಗೆ ಮೆರವಣಿಗೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಧರ್ಮ ಚಿಂತನಾಗೋಷ್ಠಿ ನಡೆಯಲಿದ್ದು, ಶಾಖಾಪುರದ ಸಿದ್ದರಾಮ ಶಿವಾಚಾರ್ಯರು ವಹಿಸುವರು. ಬೇನೂರನ ಸಿದ್ದ ರೇಣುಕಾ ಶಿವಾಚಾರ್ಯರು, ಕಮತಗಿಯ ಶಿವಕುಮಾರ ಶಿವಾಚಾರ್ಯರು, ಗುಲ್ಬರ್ಗದ ನೀಲಕಂಠಯ್ಯ ಸ್ವಾಮಿ, ಶಹಾಬಾದ್‌ನ ಶರಣಯ್ಯ ಸ್ವಾಮಿ ಹಿರೇಮಠ ನೇತೃತ್ವ ವಹಿಸುವರು. ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಂಗಲಿಂಪ್ಪ ಬಂದಳ್ಳಿ, ಸಂಗಣ್ಣ ಮೆಡಗುದ್ಲಿ, ಶರಬಣ್ಣಗೌಡ ಹೊನ್ನಪ್ಪಗೌಡ, ಸಂಜೀವರೆಡ್ಡಿ ಪಾಟೀಲ್, ಹಣಮಂತರಾವ ಇಂಗಿನಶೆಟ್ಟಿ, ಶಂಕರಯ್ಯ ಸ್ವಾಮಿ ಹಿರೇಮಠ, ಶಿವಕುಮಾರ ಕೊಡಿ, ಶರಣು ಗೊಳೇದ, ಮಲ್ಲಿಕಾರ್ಜುನ ಗೊಳೇದ, ಮಲ್ಲಿಕಾರ್ಜುನ ಹುಗ್ಗಿ, ಡಾ. ಬಿ.ಎಸ್. ಮಾಲಿಪಾಟೀಲ್ ಇರುವರು.
ಪ್ರಶಸ್ತಿ ಪ್ರದಾನ: ಶ್ರೀಮಠದಿಂದ ಮೊದಲ ಬಾರಿಗೆ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಶಹಾಬಾದ್‌ನ ಸೋಮಶೇಖರ ಮರಗೋಳ ಅವರಿಗೆ 'ದಾನ ಚಿಂತಾಮಣಿ', ಕೋರವಾರ ಅಣವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಧನಂಜಯ ಸ್ವಾಮಿಯವರಿಗೆ 'ವೈದಿಕ ಶಿರೋಮಣಿ', ಶಹಾಬಾದ್‌ನ ಸಂಗಣ್ಣಗೌಡ ರಾಮಶೆಟ್ಟಿಯವರಿಗೆ 'ಅನನ್ಯ ಸೇವಕ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.