ಮಠಾಧೀಶರದ್ದು ಸಮಾಜಮುಖಿ ಜೀವನ
ರಾವೂರ/ಶಹಾಬಾದ್: ಮಠಾಧೀಶರಿಗೆ ಸಮಾಜ ಗುರುತರ ಜವಾಬ್ದಾರಿಯನ್ನು ಕೊಟ್ಟಿದ್ದು ಜೀವಮಾನವರೆಗೂ ಸಮಾಜಮುಖಿ ಕಾರ್ಯಗಳನ್ನು ಮಾಡುವುದಕ್ಕಾಗಿಯೇ ಎಂದು ಸೊನ್ನದ ಸಿದ್ದಲಿಂಗೇಶ್ವರ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಹೇಳಿದರು.
ರಾವೂರಿನ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧರ್ಮ ಸಭೆಯಲ್ಲಿ ಶ್ರೀಮಠದಿಂದ ಸನ್ಮಾನ('ಗೌಡಾ' ಪಡೆದ ಹಿನ್ನೆಲೆ) ಸ್ವೀಕರಿಸಿ ಮಾತನಾಡಿ, ಅಂತರ, ಬಹಿರಂಗವಾಗಿ ಸಮಾಜ ಸೇವೆ ಮಾಡುವ ಮಠಾಧೀಶರು ತಮ್ಮ ಕ್ರಿಯಾಶೀಲತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಅಂಥವರ ಸಾಲಿಗೆ ರಾವೂರಿನ ಸಿದ್ದಲಿಂಗ ಸ್ವಾಮೀಜಿ ಸೇರುತ್ತಾರೆ ಎಂದರು.
ಎಲ್ಲರ ಇಷ್ಟದಂತೆ ರಾವೂರ ಶ್ರೀಗಳು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕಾರ್ಯಗಳನ್ನು ಕೈಗೊಂಡಿದ್ದಾರೆಂದು ಹೇಳಿ, ರಾವೂರ ಶ್ರೀಗಳ ಮಾರ್ಗದರ್ಶನದಲ್ಲಿ ಸೊನ್ನಮಠ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಆದರ್ಶಕ್ಕಾಗಿ..: ಸಾನ್ನಿಧ್ಯ ವಹಿಸಿದ್ದ ಮುಗುಳನಾಗಾವಿ ಅಭಿನವ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ರಾವೂರ ಶ್ರೀಗಳು, ಸೊನ್ನದ ಶ್ರೀಗಳು ಮಠದ ಆಸ್ತಿಗಾಗಿ ಸ್ವಾಮಿಗಳಾಗದೆ, ಆದರ್ಶಕ್ಕಾಗಿ ಸ್ವಾಮಿಗಳಾಗಿದ್ದಾರೆ. ಸಮಾಜದ ಕಲ್ಮಶವನ್ನು ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಮಠಗಳು ಧರ್ಮದ ಕಾರ್ಯ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿವೆ ಎಂದು ಹೇಳಿದರು.
ರಾವೂರನ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇಂದು ಗೌರವ ಡಾಕ್ಟರೇಟ್ ಪದವಿಗಳು ಗೌರವ ಕಳೆದುಕೊಳ್ಳುತ್ತಿರುವ ವೇಳೆಯಲ್ಲಿ ಸೊನ್ನದ ಶ್ರೀಗಳಿಗೆ ಗುವಿವಿ ಗೌರವ ಡಾಕ್ಟರೇಟ್ ನೀಡಿ ಗೌರವ ಹೆಚ್ಚಿಸಿಕೊಂಡಿದೆ ಎಂದು ಹೇಳಿದರು. ನರೋಣಾದ ಮಹಾಂತ ಸ್ವಾಮಿಗಳು ಮಾತನಾಡಿದರು. ಕೇಸರ ಜವಳಗಿಯ ಜಡಿಬಸವಲಿಂಗೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ನಿರೂಪಿಸಿದರು. ಶರಣು ಜ್ಯೋತಿ ಸ್ವಾಗತಿಸಿದರು. ರಾಗಿಣಿ ಸಂಕನೂರ, ರವಿಕುಮಾರ ಅಲ್ಲಮಶೆಟ್ಟಿ, ಸಂಗೀತ ಸೇವೆ ಸಲ್ಲಿಸಿದರು. ಕೆ.ಎಸ್. ಬಡಿಗೇರ ವಂದಿಸಿದರು.
ಡಾ. ಗುಂಡಣ್ಣ ಬಾಳಿ, ಶಿವಲಿಂಗಪ್ಪ ವಾಡೆದ, ದೇವಿಂದ್ರಪ್ಪ ತಳವಾರ, ಸಾಹೇಬಗೌಡ ತಳವಾರ, ಲಿಂಗರೆಡ್ಡಿ ಬಾಸರೆಡ್ಡಿ, ಅಣ್ಣಾರಾವ ಬಾಳಿ, ಅಮರಪ್ಪ ಜ್ಯೋತಿ, ಮಾಳಪ್ಪ ಕೋಲಿ, ಸಿದ್ದಲಿಂಗ ಬಾಳಿ, ಹುಸೇನಸಾಬ ಮುಸವಾಲಿ, ಜಾವೀದ, ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

