ಕಾರ್ಯಕರ್ತೆ ಮೇಲೆ ದೌರ್ಜನ್ಯ: ಖಂಡನೆ
ಸಿಂಧನೂರು: ತಾಲೂಕಿನ ಹೊಸಳ್ಳಿ ಇ.ಜೆ. ಕ್ಯಾಂಪಿನ ಅಂಗನವಾಡಿ ಕಾರ್ಯಕರ್ತೆ ವಿಶ್ರಾಂತಿ ಅವರ ಮೇಲೆ ಕರಿಯಪ್ಪ ಮತ್ತು ಯಮನಪ್ಪ ಎನ್ನುವವರು ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.
ಕರಿಯಪ್ಪ ಎನ್ನುವ ವ್ಯಕ್ತಿ ಮರಿಯಮ್ಮನ ಮೇಲೆ ಮಾನಭಂಗಕ್ಕೆ ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಕಾರಣಕ್ಕೆ ಮಧ್ಯರಾತ್ರಿ ವಿಶ್ರಾಂತಿ ಮನೆಗೆ ಹೋಗಿ ಕರಿಯಪ್ಪ, ಯಮನಪ್ಪ ದಾಂಧಲೆ ನಡೆಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದ ವಿಶ್ರಾಂತಿಯನ್ನು ತಡೆದು ಕೈ ಹಿಡಿದು ಎಳೆದು, ಸೀರೆ ಜಗ್ಗುವ ಮೂಲಕ ಅವಮಾನ ಮಾಡಿದ್ದಾರೆಂದು ಕಾರ್ಯಕರ್ತೆ ವಿಶ್ರಾಂತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿಎಸ್ಐ ಎಸ್.ಎಂ. ಪಾಟೀಲ್ ತನಿಖೆ ಕೈಗೊಂಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ಮಾಡಿರುವ ಕರಿಯಪ್ಪ, ಯಮನಪ್ಪನ ಮೇಲೆ ಕಠಿಣ ಕ್ರಮ ಕೈ ಗೊಳ್ಳುವಂತೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ಅಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಸರಸ್ವತಿ, ಜಿಲ್ಲಾಧ್ಯಕ್ಷ ಡಿ.ಎಚ್. ಕಂಬಳಿ, ರಾಜ್ಯ ಸಮಿತಿ ಸದಸ್ಯ ತಿಪ್ಪಯ್ಯ ಶೆಟ್ಟಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

