ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಕೇಸ್ ದಾಖಲಿಸಿ: ಕೆಆರ್ಎಸ್
ಸಿಂಧನೂರು: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯು ಎಪಿಎಂಸಿ ಜಾಗ ಅತಿಕ್ರಮಿಸಿದ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಅಗ್ಗದ ದರದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕರ್ನಾಟಕ ರೈತ ಸಂಘ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.
ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ್ಗಿ ಮತ್ತು ಆರ್ವೈಎಫ್ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಗುರುವಾರ ಎಪಿಎಂಸಿ ಕಾರ್ಯದರ್ಶಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಿವರ: ಸ.ನಂ. 969/2 ಒಟ್ಟು 9 ಎಕರೆ 10 ಗುಂಟೆ ಜಮೀನು ಇದ್ದು ಇದರಲ್ಲಿ ಸಿಂಧನೂರು ಕುಷ್ಟಗಿ ರಸ್ತೆಯು ಹಾಯ್ದು ಹೋಗಿರುತ್ತದೆ. ಕಾರಣ ಜಮೀನಿನಲ್ಲಿ 2 ಭಾಗಗಲಾಗೊದ್ದು ಉತ್ತರದ ಪಟ್ಟಿ 6 ಎಕರೆ 29 ಗುಂಟೆ, ದಕ್ಷಿಣ ಪಟ್ಟಿ ಇರುತ್ತದೆ. 1.17 ಯ ಜಮೀನು ಸಿಂಧನೂರು 1.4 ಎಕರೆ ಕುಷ್ಟಗಿ ರಸ್ತೆ ಹೋಗಿದೆ.
ಉತ್ತರ ಭಾಗದ ಜಮೀನನ್ನು ಎಪಿಎಂಸಿ ಖರೀದಿ ಮಾಡಿದ್ದು, ದಕ್ಷಿಣ ಭಾಗದ ಸ.ನಂ.969 ಸಿ ಗೆ ಸೇರಿದ 1 ಎಕರೆ ಜಮೀನನ್ನು ಮಾರುಕಟ್ಟೆ ವಿಸ್ತರಣೆಗೆ ಎಪಿಎಂಸಿ ಸ್ವಾಧೀನ ಪಡಿಸಿಕೊಂಡಿದೆ.
ಎಪಿಎಂಸಿ ಸ್ವಾಧೀನ ಪಡಿಸಿಕೊಂಡ ನಂತರವೂ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಪಹಣಿ ಪತ್ರಿಕೆಯಲ್ಲಿ 2.4ಎಕರೆ ಜಮೀನು ಕಾಡಮ್ಮನ ಹೆಸರೇ ಉಳಿದಿತ್ತು. ಇದೇ ತಪ್ಪನ್ನೇ ದುರುಪಯೋಗಪಡಿಸಿಕೊಂಡ ಶ್ರೇಣಿಕ್ ರಾಜ್ ಶೇಠ್ ಮತ್ತು ಇತರರು ಶೇಡ್ ಹಾಕಿದ್ದು 6 ಗುಂಟೆ ಭೂಮಿಯನ್ನು ಬಿನ್ ಶೇತಕಿ ಮಾಡಲು ಅರ್ಜಿ ಸಲ್ಲಿಸಿದ್ದರು.
ಈ ಕುರಿತು ಎಪಿಎಂಸಿ ಮತ್ತು ಶ್ರೇಣಿಕ್ರಾಜ್ ಗುಂಪಿನವರ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದು, ಅತಿಕ್ರಮಣಕಾರರನ್ನು ತೆರವುಗೊಳಿಸಲು ಜಿಲ್ಲಾ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಆದರೆ ಎಪಿಎಂಸಿ ಆಡಳಿತ ತೆರವುಗೊಳಿಸುವ ಬದಲು ಅಗ್ಗದ ದರದಲ್ಲಿ ಮಾರಲು ಮುಂದಾಗಿದ್ದು, ತಕ್ಷಣ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗಿದೆ.
ಹಕ್ಕೋತ್ತಾಯ: ಎಪಿಎಂಸಿಗೆ ಸೇರಿದ 6 ಗಂಟೆ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್ಗಳನ್ನು ತೆರವುಗೊಳಿಸಿ ಸ್ವಾಧೀನಪಡಿಸಿಕೊಳ್ಳಭೇಕು. ರೈತರ ವಿಶ್ರಾಂತಿಗಾಗಿ ಮತ್ತು ಜಾನುವಾರುಗಳಿಗೆ ಮೀಸಲಿಟ್ಟ ಎಪಿಎಂಸಿ ಶೆಡ್ಗಳನ್ನು ಧ್ವಂಸಗೊಳಿಸಿ ಮಳಿಗೆ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಿಂಧನೂರು-ಕುಷ್ಟಗಿ ರಸ್ತೆಯ ದಕ್ಷಿಣ ಭಾಗದ ಜಮೀನು ಹಾಗೂ ಎಪಿಎಂಸಿ ಆವರಣದ ಒಳಗಿನ ನಿವೇಶನ ಹಂಚಿಕೆ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸುವಂತೆ ರೈತ ಸಂಘ ಮತ್ತು ಆರ್ವೈಎಫ್ ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

