ರಾಯಚೂರು

ಸಿದ್ದಣ್ಣ ಚಿಂಚರಿಕಿಯವರ ಸಾಮಾಜಿಕ ಕಾರ್ಯ ಅನನ್ಯ

Published On :

ಸಿಂಧನೂರು: ಬಸವಾಭಿನಗಳಾದ ಸಿದ್ದಣ್ಣ ಚಿಂಚರಕಿಯವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆಂದು ಮುಕ್ತ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ ಬಣ್ಣಿಸಿದರು.
ನಗರದ ಬಸವ ಚಾರಿಟಬಲ್ ಟ್ರಸ್ಟ್‌ನಲ್ಲಿ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಸಿದ್ದಣ್ಣ ಚಿಂಚರಿಕಿಯವರು ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ 753ನೇ ಮನೆಯಲ್ಲಿ ಮಹಾಮನೆ, ಡೋಹರ ಕಕ್ಕಯ್ಯನವರ, ಕಿನ್ನರಿ ಬೊಮ್ಮಯ್ಯನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರಮಜೀವಿ: ಸಿದ್ದಣ್ಣನವರು ಕಾಯಕ ಜೀವಿಗಳು, ಕೃಷಿ ಮನೆತನದಲ್ಲಿ ಜನಿಸಿದ್ದರೂ ನಿತ್ಯ ಪರಿಶ್ರಮ ಪಡುತ್ತಿದ್ದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾಗಿ ಜೈವಿಕ ಕೃಷಿ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದಾರೆ. ಟ್ರಸ್ಟ್‌ನ ಪ್ರಗತಿಯಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದರು. ಟ್ರಸ್ಟ್‌ನ ಧರ್ಮದರ್ಶಿ ಸೂಗಪ್ಪ ಸೋಮಲಾಪುರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ನಾರಾಯಣ ಬೆಳಗುರ್ಕಿ ಅನುಭಾವ ನೀಡಿದರು. ಬಸವ ಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ, ಮುಳ್ಳೂರುಕ್ಯಾಂಪಿನ ಶೇಖರಡ್ಡೆಪ್ಪ ಭಾವಿಕಟ್ಟಿ, ಮುಳ್ಳೂರು ಗ್ರಾಮದ ಶ್ರೀಕಂಠಗೌಡ, ಭೀಮನಗೌಡ, ಪಾಲಾಕ್ಷಗೌಡ ಗದ್ದಿ, ಶಿವಪ್ಪ, ಗುಂಜಳ್ಳಿ ಗ್ರಾಮದ ಶರಣಪ್ಪ ಹೊಸೂರು, ಹನುಮನಗೌಡ ಮಾಲಿಪಾಟೀಲ್, ತಿಮ್ಮನಗೌಡ ಪೊಲೀಸ್ ಪಾಟೀಲ್, ಅಯ್ಯನಗೌಡ ಮಾಲಿಪಾಟೀಲ್, ದೊಡ್ಡಹನುಮನಗೌಡ ಹೊಸಗೌಡ್ರು, ಯಂಕನಗೌಡ ಪೊಲೀಸ್ ಪಾಟೀಲ್ ಹಾಗೂ ಟ್ರಸ್ಟ್‌ನ ಧರ್ಮದರ್ಶಿಗಳು ಭಾಗವಹಿಸಿದ್ದರು. ಶೋಭಾ ಸೋಮಶೇಖರ ಚಿಂಚರಿಕಿ ವಿರುಪಾಪುರ ದಾಸೋಹ ಸೇವೆ ನೆರವೇರಿಸಿದರು.
  ಜಯಶ್ರೀ ಶರಣಬಸವ ಮೇಟಿ ವಚನ ಪ್ರಾರ್ಥನೆ ಮಾಡಿದರು. ಬಸವ ಚಾರಿಟಬಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ ಸ್ವಾಗತಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಡಾ. ಶಂಭನಗೌಡ ನಿಡಿಗೋಳ ನಿರೂಪಿಸಿದರು. ಎಲ್ಬಿಕೆ ಕಾಲೇಜಿನ ಆಡಳಿತಾಧಿಕಾರಿ ಎಚ್.ಜಿ. ಹಂಪಣ್ಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.