ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಸಂಘದ ಧರಣಿ
ಕ.ಪ್ರ. ವಾರ್ತೆ , ಲಿಂಗಸ್ಗೂರು , ಫೆ.19
ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಟ ಮಾಸಿಕ ವೇತನ ಜಾರಿಗೆ ಅನುಮೋದನೆ ನೀಡಬೇಕೆಂಬ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರ ಸಂಘದಿಂದ ಸೋಮವಾರ ಧರಣಿ ನಡೆಸಲಾಯಿತು.
ಸ್ಥಳೀಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಆರಂಭಿಸಿದ ನೌಕರರು, 2011ರ ಕನಿಷ್ಟ ಕೂಲಿ ಕಾಯ್ದೆ ಅನ್ವಯ ಗ್ರಾಪಂ ನೌಕರರಿಗೆ ಕನಿಷ್ಟ ಮಾಸಿಕ ವೇತನ 10 ಸಾವಿರ ಜಾರಿಗೆ ಅನುಮೋದನೆ ನೀಡಬೇಕು. 3 ನೇ ಹಣಕಾಸು ಆಯೋಗದ ವರದಿ ಯಥಾವತ್ತಾಗಿ ಜಾರಿಗೊಳಿಸಿ ನೌಕರರಿಗೆ ಪ್ರತ್ಯೇಕ ಅನುದಾನ ನೀಡಬೇಕು. ಗಣಕಯಂತ್ರ ನೌಕರರನ್ನು ಗ್ರಾಪಂ ನೌಕರರೆಂದು ಪರಿಗಣಿಸಬೇಕು. 3ನೇ ಕಂತಿನ ಶಾಸನಬದ್ಧ ತ್ರೈಮಾಸಿಕ ಅನುದಾನ ಗ್ರಾಪಂ ಖಾತೆಗಳಿಗೆ ವಿಳಂಬ ಮಾಡದೆ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳ 5ನೇ ತಾರೀಕಿನೊಳಗೆ ವೇತನ ಬಿಡುಗಡೆ ಮಾಡಬೇಕು. ಅಕ್ರಮ ನೇಮಕಾತಿ ನಿಲ್ಲಿಸಿ ನೌಕರರಿಗೆ ಜನಶ್ರೀ ವಿಮಾ ಯೋಜನೆ ಜಾರಿ ಮಾಡಬೇಕು. ಇಪಿಎಫ್ ಖಾತೆ ತೆರೆಯಬೇಕು. 5 ವರ್ಷ ಸೇವಾವಧಿ ಪೂರೈಕೆಯ ಎಸ್ಎಸ್ಎಲ್ಸಿ ಉತ್ತೀರ್ಣರಾದ ಪಂಪ್ ಆಪರೇಟರ್ಗಳನ್ನು ಜೇಷ್ಠತಾ ಪಟ್ಟಿಯಡಿ ಕರ ವಸೂಲಿಗಾರರಾಗಿ ಬಡ್ತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಪಂ ನೌಕರರ ಸಂಘದ ತಾಲೂಕಾಧ್ಯಕ್ಷ ಅಮರೇಶ ಕನ್ನಾಳ, ಶಿವರೆಡ್ಡಿ ಗೌಡೂರು, ಮಹಬೂಬಸಾಬ, ಬಸಯ್ಯ, ಬಸವರಾಜ, ಪ್ರೇಮಸಿಂಗ್, ವಾಸುದೇವ, ಹುಸೇನಸಾಬ, ದೇವಪ್ಪ, ರೇಣುಕಾ, ಕವಿತಾ, ಹನಮಮ್ಮ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

