ರಾಯಚೂರು

ಜಾಲಹಳ್ಳಿ ಜಿಪಂ ಉಪ ಚುನಾವಣೆ; ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ತೆರೆ

Published On :

ದೇವದುರ್ಗ: ಜಾಲಹಳ್ಳಿ ಜಿಪಂ ಕ್ಷೇತ್ರದ ಉಪ ಚುನಾವಣೆಗಾಗಿ ಕಾಂಗ್ರೆಸ್‌ನಿಂದ ಮಲ್ಲಮ್ಮ ರಾಮನಗೌಡ ಕರಡಿಗುಡ್ಡ, ಜೆಡಿಎಸ್‌ನಿಂದ ರಂಗಮ್ಮ ದುರಗಪ್ಪ ಹಾಗೂ ಬಿಜೆಪಿಯಿಂದ ಮಹಾದೇವಮ್ಮ ಮುದುರಂಗಪ್ಪ ತಮ್ಮ ನಾಮಪತ್ರ ಬುಧವಾರ ಸಲ್ಲಿಸಿದರು.
ಎಸ್ಟಿ ಮಹಿಳೆಗೆ ಮೀಸಲಾಗಿರುವ ಜಾಲಹಳ್ಳಿ ಜಿಪಂ ಕ್ಷೇತ್ರದ ಉಪ ಚುನಾವಣೆಗಾಗಿ ಮೂವರು ಅಭ್ಯರ್ಥಿಗಳು ಸೇರಿ ಒಟ್ಟು ಐದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಬುಧವಾರ ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ನೂರಾರು ಕಾರ್ಯಕರ್ತರು ಮಿನಿ ವಿಧಾನಸೌಧದ ಬಳಿ ಸೇರಿದ್ದು ಕಂಡುಬಂದಿತು.
ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ಆರ್.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಎ. ರಾಜಶೇಖರ ನಾಯಕ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ರಾಮನಗೌಡ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಅವರೊಂದಿಗೆ ಗಲಗ ಜಿ.ಪಂ. ಸದಸ್ಯರಾದ ಶಿವಣ್ಣ ತಾತಾ, ಜಿ.ಪಂ. ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಬಸವರಾಜ ಪಂಪಾಪತಿ, ವೇಣುಗೋಪಾಲ ವಕೀಲರು, ಎ. ಮಲ್ಲಿಕಾರ್ಜುನ ಪಾಟೀಲ್, ಬುಡ್ಡನಗೌಡ ಜಾಗಟಗಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಬಸಯ್ಯ ಶಾಖೆ, ನಾಗಪ್ಪ ಗಿರಿಣಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಅಕ್ಕಮಹಾದೇವಿ ಪಾಟೀಲ್, ಅಮರೇಶ ಬಲ್ಲಿದವ್, ಯಕ್ಬಾಲಸಾಬ್ ಹೌದುಡಿ, ಪುರಸಭೆ ಮಾಜಿ ಅಧ್ಯಕ್ಷ ಚಂದಪ್ಪ ಅಕ್ಕರಕಿ, ಕರೆಮ್ಮ, ಶೇಖ್ ಮುನ್ನಾಭಾಯಿ ಸೇರಿ ಅನೇಕರಿದ್ದರು.
ಅದೇ ರೀತಿ ಬಿಜೆಪಿ ಅಭ್ಯರ್ಥಿ ಮಹಾದೇವಮ್ಮ ಮುದುರಂಗಪ್ಪ ಅವರ ಪರವಾಗಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ, ಗುರುರಾಜರಾವು ದೇಸಾಯಿ, ಶ್ಯಾಮರಾವ ಕುಲಕರ್ಣಿ, ಜಿ.ಪಂ. ಸದಸ್ಯರಾದ ಪ್ರಕಾಶ ಪಾಟೀಲ, ಬಿಜೆಪಿ ತಾಲೂಕು ಅಧ್ಯಕ್ಷ ಜಂಬಣ್ಣ ನೀಲೋಗಲ್, ಬಸವರಾಜ ಗಾಣದಾಳ, ಈರಣ್ಣ ಬಳೆ, ಬಸವರಾಜ ವಕೀಲರು, ಪುರಸಭೆ ಅಧ್ಯಕ್ಷರಾದ ಫಕ್ರೋದ್ದೀನ್ ಗೌರಂಪೇಟ್ ಸೇರಿ ಅನೇಕರು ಆಗಮಿಸಿ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಅಭ್ಯರ್ಥಿ ರಂಗಮ್ಮ ದುರಗಪ್ಪ ಅವರೊಂದಿಗೆ ಪಕ್ಷದ ಅರಕೇರಾ ಜಿಪಂ ಸದಸ್ಯ ದಾನಪ್ಪ ಆಲ್ಕೋಡ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಮುಖಂಡರಾದ ರಾಘವೇಂದ್ರ ಕೋಲ್ಕಾರ, ವಿ.ಎಂ. ಮೇಟಿ, ಕರಿಲಿಂಗಪ್ಪ ನಾಡಗೌಡ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ ವಕೀಲರು, ಜಂಬುಯಾದವ್, ವಿಶ್ವನಾಥ ಪಟ್ಟಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.