ರಾಯಚೂರು

ಈಡೇರದ ಬೇಡಿಕೆ: ಪ.ಪಂ. ಆಡಳಿತ ಮಂಡಳಿ ಮೇಲೆ ದಸಂಸ ಆಕ್ರೋಶ

Published On :

ಮುದಗಲ್: ಪ್ರತಿ ಸಭೆಯಲ್ಲಿ ನಾವು ಮನವಿಯನ್ನು ಸಲ್ಲಿಸುತ್ತಿದ್ದೇವೆ. ನಮ್ಮ ಮನವಿಗೆ ಆಡಳಿತ ಮಂಡಳಿಯಾಗಲಿ, ಅಧಿಕಾರ ವರ್ಗವಾಗಲಿ ಸ್ಪಂದಿಸುತ್ತಿಲ್ಲ. ನಮ್ಮ ಬೇಡಿಕೆಗಳ ಮನವಿಗೆ ಕಿಂಚಿತ್ತಾದರೂ ಸ್ಪಂದಿಸಿ, ನಮ್ಮ ಬೇಡಿಕೆ ಈಡೇರಿಸಿ ಎಂದು ದಸಂಸದ ಮುಖಂಡರು ಪಪಂ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡರು.
ಪಟ್ಟಣ ಪಂಚಾಯತಿ ಸಭೆ ನಡೆಯುತ್ತಿರುವಾಗಲೇ ನಡುವೆ ಸಭೆಗೆ ಆಗಮಿಸಲು ಪ್ರಯತ್ನಿಸಿದಾಗ ಪಪಂ ಅಧ್ಯಕ್ಷರು ಹೊರ ಹೋಗಿ ಸಮಾಜಾಯಿಷಿ ಹೇಳುತ್ತಿದ್ದಂತೆ ದಸಂಸ ಮುಖಂಡರ ನಡುವೆ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಅಧ್ಯಕ್ಷರೇ ಅವರನ್ನು ಒಳಗೆ ಬರ ಹೇಳಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಅವರ ಕೆಲವು ಬೇಡಿಕೆಗಳು ಪ್ರತಿ ಸಭೆಯಲ್ಲಿ ನೀಡಿದಂತೆ ಇರುವದರಿಂದ ದಸಂಸ ಮುಖಂಡರು ನಮ್ಮ ಮನವಿಗೆ ಕಿಂಚಿತ್ತಾದರೂ ಆದ್ಯತೆ ನೀಡಿ, ಮನವಿ ಸಲ್ಲಿಸುತ್ತಿದ್ದರೂ ಕರೆದ ಟೆಂಡರ್‌ನಲ್ಲಿ ಸೇರಿಲ್ಲ. ಟೆಂಡರ್‌ನ್ನು ರದ್ದುಗೊಳಿಸುವಂತೆ ದಸಂಸ ಮುಖಂಡರಾದ ಶರಣಪ್ಪ ಕಟ್ಟಿಮನಿ, ವೆಂಕಟೇಶ ಹಿರೇಮನಿ, ಬಸವರಾಜ ಬಂಕದಮನಿ, ಕೃಷ್ಣಾ ಚಲುವಾದಿ ಒತ್ತಾಯಿಸಿದರು.
ಸದಸ್ಯ ವೀರೇಶ ವಡ್ಡರ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಸೌಲಭ್ಯ ನೀಡಲಾಗುವುದು. ಅಧ್ಯಕ್ಷರ ಅಪ್ಪಣೆಯ ಮೇರೆಗೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸಲಾಗುವುದು ಎಂದು ಹೇಳಿ ಸಮಾಧಾನಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.