ಮಾ.4 ರವರೆಗೆ ನೃಪತುಂಗ ರಂಗೋತ್ಸವ
ಲಿಂಗಸ್ಗೂರು: ನಗರಕ್ಕೆ ಸಮೀಪದ ಶಕ್ತಿನಗರದ ಡಾ. ಅಂಬೇಡ್ಕರ್ ಭವನದಲ್ಲಿ ಫೆ.25 ರಿಂದ ಮಾ.4 ರವರೆಗೆ ನೃಪತುಂಗ ರಂಗೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ನೃಪತುಂಗ ನಾಟ್ಯ ಕಲಾರಂಗದ ಅಧ್ಯಕ್ಷ ನಾಗಭೂಷಣ್ ನಾಗಳ್ಳಿ ಹೇಳಿದರು.
ನೃಪತುಂಗ ರಂಗೋತ್ಸವ-2014 ರಲ್ಲಿ ಫೆ.25 ರಂದು ಉದ್ಘಾಟನಾ ಸಮಾರಂಭ ಹಾಗೂ ಅಂದು ಸಂಜೆ ಮಹಾಂತೇಶ ನವಲಕಲ್ ರಚಿತ ಚಂದ್ರಗುಪ್ತ ಮೌರ್ಯ ನಾಟಕ. ಫೆ.26 ರಂದು ಸಂಜೆ ಹನುಮಂತ ಹಾಲಿಗೇರಿ ರಚಿತ ಊರ ಸುಟ್ಟರೂ ಹನುಮಪ್ಪ ಹೊರಗ ಎಂಬ ನಾಟಕ. ಫೆ.27 ರಂದು ಸಂಜೆ ಶಿವರಾತ್ರಿ ಪ್ರಯುಕ್ತ ಸೂಗೂರೇಶ್ವರ ದೇವಸ್ಥಾನದ ಬಿಚ್ಚಿ ಬಾಚರಸ ದಾಸೋಹ ಮಂಟಪದ ವೇದಿಕೆಯಲ್ಲಿ ಪರ್ವತವಾಣಿ ರಚಿತ ಬಹದ್ದೂರ್ ಗಂಡ ನಾಟಕ. ಫೆ.28 ರಂದು ಸಂಜೆ ಅಮರೇಶ ನುಗಡೋಣಿ ರಚಿತ ಕಥೆ ಆಧರಿಸಿ ಮಂಥನ ನಾಯಕ.
28 ರಂದು ಬೇಲೂರು ಕೃಷ್ಣಮೂರ್ತಿ ರಚಿತ ದಂಡ ಪಿಂಡಗಳು ನಾಟಕ. ಮಾ.1 ರಂದು ಸಂಜೆ ಬೇಲೂರು ಕೃಷ್ಣಮೂರ್ತಿ ರಚಿತ ಕಲೆಯ ಕೊಲೆ ಹಾಗೂ ವಿ.ಎನ್. ಅಶ್ವಥ್ ರಚಿತ ಶ್ರೀಕೃಷ್ಣ ಸಂಧಾನ ನಾಟಕ. ಮಾ.2 ರಂದು ಸಂಜೆ ಶಿವಕುಮಾರ ಶ್ರೀ ರಚಿತ ಶರಣ ಸತಿ- ಲಿಂಗಪತಿ ನಾಟಕ. ಮಾ.3 ರಂದು ಸಂಜೆ ಡಾ. ರಾಜಶೇಖರ ಹನುಮಲಿ ರಚಿತ ಮಹಾಬೆಳಗು ನಾಟಕ. ಮಾ.4 ರಂದು ಸಮಾರೋಪ ಸಮಾರಂಭ ಜರುಗಲಿದೆ ಹಾಗೂ ಶಿವಕುಮಾರ ಶಿವಾಚಾರ್ಯರು ರಚಿತ ವಿಶ್ವಬಂಧು ಮರುಳಸಿದ್ಧ ನಾಟಕ ಕಾರ್ಯಕ್ರಮಗಳು ಜರುಗಲಿವೆ.
ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗ ಪ್ರಯೋಗಶಾಲೆ ಮತ್ತು ನೀನಾಸಂ ಸಂಸ್ಥೆಗಳಿಂದ ರಂಗ ಶಿಕ್ಷಣದಲ್ಲಿ ಪದವಿ ಪಡೆದು ಅಡ್ಯಾಟ-2014 ಹೆಸರಿನಿಂದ ಧಾರವಾಡದ ಆಟ- ಮಾಟ ಮತ್ತು ಕನಸಿನ ಓಟ-2014 ಹೆಸರಿನಲ್ಲಿ ರಾಯಚೂರಿನ ರಂಗ ಕನಸು ವಿಶಿಷ್ಟ ಭಿನ್ನ ಹೆಸರುಳ್ಳ ತಂಡಗಳ ಮೂರು ನಾಟಕಗಳು ಈ ಉತ್ಸವದಲ್ಲಿ ಪ್ರಯೋಗಗೊಳ್ಳಲಿವೆ. ವಿಭಿನ್ನ ಕಥಾಹಂದರಗಳನ್ನು ಒಳಗೊಂಡ ನಾಟಕಗಳು ಹಾಗೂ ರಾ.ಶಾ.ವಿ. ಕೇಂದ್ರ ಉದ್ಯೋಗಿ ಕಲಾ ತಂಡಗಳು ಅಂಬೇಡ್ಕರ್ ಭವನದ ವೇದಿಕೆಯಲ್ಲಿ ಅನಾವರಣಗೊಳ್ಳಲಿವೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

