ಶಿಕ್ಷಣದಿಂದ ಬಂಜಾರಾ ಸಮಾಜದ ಏಳಿಗೆ
ಮಸ್ಕಿ: ಬಂಜಾರಾ ಸಮಾಜದವರು ಅಕ್ರಮ ಮದ್ಯ ತಯಾರಿಕೆಯಂಥ ವೃತ್ತಿ ಕೈಬಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಪ್ರಗತಿಗೆ ಪೂರಕ ಪರಿಸರ ನಿರ್ಮಿಸಬೇಕು. ಶೈಕ್ಷಣಿಕ ಪ್ರಗತಿಯಿಂದ ಮಾತ್ರ ಪ್ರಗತಿ ಸಾಧ್ಯ ಎಂಬ ಸತ್ಯದ ಅರಿವು ಅವಶ್ಯಕ ಎಂದು ರಾಯಚೂರು ಕೃಷಿ ವಿವಿ ಉಪನ್ಯಾಸಕ ಡಾ.ಚಂದ್ರನಾಯಕ ಮನವಿ ಮಾಡಿದರು.
ಅವರು ಪಟ್ಟಣದಲ್ಲಿ ಸೋಮವಾರ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಸಂತ ಸೇವಾಲಾಲ್ ಸಂಘದ ವತಿಯಿಂದ ಮಸ್ಕಿ ಕ್ಷೇತ್ರದ ತಾಂಡಾ ನಿವಾಸಿಗಳಿಗೆ ಆಯೋಜಿಸಿದ್ದ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ಪೈಪೋಟಿ ದಿನಗಳಲ್ಲಿ ಬಂಜಾರಾ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಹೆಚ್ಚಿನ ಗಮನ ಹರಿಸುವಂತೆ ಮನವಿ ಮಾಡಿದರು.
ಶಿಕ್ಷಣಕ್ಕೆ ಆದ್ಯತೆ: ಸರ್ಕಾರ ಸಮಾಜದವರಿಗೆ ಅನೇಕ ರೀತಿಯ ಶೈಕ್ಷಣಿಕ ಸೌಲಭ್ಯ ಒದಗಿಸುತ್ತಿದ್ದು, ಅವುಗಳ ಸಂಪೂರ್ಣ ಬಳಕೆ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಬಂಜಾರ ಸಮಾಜದವರು ತಮ್ಮ ಭಾಷೆ, ಹಾಗೂ ವೇಷಭೂಷಣ ಸಂಸ್ಕೃತಿಯನ್ನು ಉಳಿಸುವಂತೆಯೂ ಮನವಿ ಮಾಡಿದರು.
ಆರೋಪಮುಕ್ತರಾಗಿ: ಬಂಜಾರಾ ಸಮಾಜದ ಜಿಲ್ಲಾಧ್ಯಕ್ಷ ಹರಿಶ್ಚಂದ್ರ ರಾಠೋಡ ಮಾತನಾಡಿ, ಬಂಜಾರಾ ಸಮಾಜದವರು ಕಷ್ಟಜೀವಿಗಳಾಗಿದ್ದಾರೆ. ಆದರೆ ಸಮುದಾಯದ ವಿರುದ್ಧ ಅಕ್ರಮ ಮದ್ಯ ತಯಾರಿಕೆಯ ಆರೋಪವಿದ್ದು, ಅಂಥ ಆರೋಪಗಳಿಂದ ಸಮಾಜ ಹೊರಬರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಕರೆ ನೀಡಿದರು.
ಮಸ್ಕಿ ವಿಶೇಷ ತಹಸೀಲ್ದಾರ ಲಕ್ಷ್ಮಣ, ರೇಷ್ಮೆ ಇಲಾಖೆಯ ವಲಯಾಧಿಕಾರಿ ನರಸಿಂಹ ದಿನ್ನೆ, ನಟರಾಜ ಮಾತನಾಡಿದರು. ಅಧ್ಯಕ್ಷತೆಯನ್ನು ಬಂಜಾರ ಸೇವಾಲಾಲ್ ಸೇನೆಯ ಮಸ್ಕಿ ಘಟಕದ ಅಧ್ಯಕ್ಷ ಶ್ರೀನಿವಾಸ ಚೌವ್ಹಾಣ್ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಮ್ಮಣ್ಣ ರಾಠೋಡ, ವಕೀಲ ಮೌನೇಶ ರಾಠೋಡ, ತಾಪಂ ಸದಸ್ಯ ಬಾಲಪ್ಪ, ನಾಗಪ್ಪ ಪೂಜಾರಿ, ಫಕೀರಪ್ಪ ಮಾಸ್ತಾರ, ಝುಮ್ರಪ್ಪ ಸೇರಿ ಅನೇಕರಿದ್ದರು. ಮಸ್ಕಿ ಸೇರಿದಂತೆ ಸುತ್ತಲಿನ ವಿವಿಧ ತಾಂಡಾಗಳಿಂದ ಆಗಮಿಸಿದ್ದ ಬಂಜಾರಾ ಸಮಾಜದ ಜನತೆಯಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

