ಗ್ರಂಥಾಲಯಗಳಿಗೆ ಪುಸ್ತಕ ಆಯ್ಕೆ; ಎಐಡಿಎಸ್ಒ ಟೀಕೆ
ರಾಯಚೂರು: ಮನುವಿನ ವಿಚಾರಧಾರೆ, ಮನುಸ್ಮೃತಿಯಲ್ಲಿನ ಮುತ್ತಿನ ಮಾತುಗಳು ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ, ಆಧ್ಯಾತ್ಮಿಕ ಚಿಂತನಧಾರೆ, ಅಗ್ನಿ ಸಹಸ್ರನಾಮ, ತಂತ್ರ ಸಾಧನೆ ಮತ್ತಿತರೆ ಪುಸ್ತಕಗಳನ್ನು ರಾಜ್ಯದ ಪ್ರೌಢಶಾಲಾ ಗ್ರಂಥಾಲಯಗಳಿಗೆ ಒದಗಿಸಲು ಆಯ್ಕೆ ಮಾಡಿರುವುದನ್ನು ಎಐಡಿಎಸ್ಒ ಸಂಘಟನೆ ವಿರೋಧಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಚೀಕಲಪರ್ವಿ, ಪುಸ್ತಕಗಳು ಮಕ್ಕಳಲ್ಲಿ ವೈಜ್ಞಾನಿಕ ಮತ್ತು ಧರ್ಮ ನಿರಪೇಕ್ಷ ಮನೋಭಾವವನ್ನು ಬೆಳೆಸುವ ಬದಲು ಅವಿವೇಕ, ಧಾರ್ಮಿಕ ಅಂಧ-ಶ್ರದ್ಧೆಯನ್ನು ಬಿತ್ತಿ ಮಕ್ಕಳಲ್ಲಿ ಕೋಮು ವೈಷಮ್ಯ ಬಿತ್ತುವ ಕಾರ್ಯ ಮಾಡುತ್ತವೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಈ ನಿರ್ಧಾರಕ್ಕೆ ತಡೆ ಹಾಕಬೇಕು. ಮಕ್ಕಳಲ್ಲಿ ತರ್ಕ ಮತ್ತು ಪ್ರಶ್ನಿಸುವ ಮನೋಭಾವವನ್ನು ಸೃಷ್ಟಿಸುವಂತಾಗಬೇಕು. ಧರ್ಮ ನಿರಪೇಕ್ಷ ಶಿಕ್ಷಣವೆಂದರೆ ಧರ್ಮ ವೈಯಕ್ತಿಕ ನಂಬಿಕೆಯಾಗಬೇಕು. ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಲ್ಲಿ ಧರ್ಮ ಪ್ರವೇಶ ಮಾಡಬಾರದು ಎಂದು ಆಗ್ರಹಿಸಿದ್ದಾರೆ.
ಭಾರತದಂತಹ ಬಹುಧರ್ಮೀಯ ದೇಶದಲ್ಲಿ ಶಿಕ್ಷಣ ಅಥವಾ ರಾಜಕೀಯದಲ್ಲಿ ಧರ್ಮ ಪ್ರವೇಶಿಸಿದರೆ ಜನಗಳನ್ನು ಒಗ್ಗೂಡಿಸುವ ಬದಲು ಅವರಲ್ಲಿ ಕೋಮುದ್ವೇಷ ಭಾವನೆ ಮೂಡಿಸುವ ಅಪಾಯವಿದೆ. ಇಂಥ ಧಾರ್ಮಿಕ ಪುಸ್ತಕಗಳು ಎಳೆಯ ವಿದ್ಯಾರ್ಥಿಗಳ ನಡುವೆ ವಿತರಣೆಯಾದರೆ ಅದು ಸಮಾಜದ ಪ್ರಗತಿಗೆ ಮಾರಕ ಎಂದು ಆರೋಪಿಸಿದ್ದಾರೆ.
ವೈಜ್ಞಾನಿಕ-ಧರ್ಮ ನಿರಪೇಕ್ಷ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವಂತಹ ಸಾಹಿತ್ಯ ಹಾಗೂ ಪುಸ್ತಕಗಳನ್ನು ಶಾಲಾ- ಕಾಲೇಜುಗಳಿಗೆ ಸರಬರಾಜು ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

