200 ಸಿಬ್ಬಂದಿ ನಿಯೋಜನೆ ಪ್ರಕ್ರಿಯೆ
ಕ.ಪ್ರ. ವಾರ್ತೆ ಗುಲ್ಬರ್ಗ ಜ.3
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಿಜಾಪುರ ವಿಭಾಗವು ದೊಡ್ಡ ಮತ್ತು ಅತ್ಯಂತ ಮುಖ್ಯ ವಿಭಾಗವಾಗಿದೆ. ಆಡಳಿತಾತ್ಮಕ ಕಾರಣಗಳಿಂದ ಇಲ್ಲಿಯವರೆಗೆ ಬಿಜಾಪುರ ವಿಭಾಗಕ್ಕೆ ಯಾವುದೇ ಚಾಲನಾ ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವುದಿಲ್ಲ. ಪ್ರಸ್ತುತ ಬಿಜಾಪುರ ವಿಭಾಗದಲ್ಲಿ 200 ಜನ ಚಾಲನಾ ಸಿಬ್ಬಂದಿಗಳ ಹುದ್ದೆ ಖಾಲಿಯಿವೆ. ಈ ಹುದ್ದೆಗಳನ್ನು ಸಂಸ್ಥೆಯ ಇತರೆ ವಿಭಾಗಗಳಿಂದ ಬಿಜಾಪುರ ವಿಭಾಗಕ್ಕೆ ವರ್ಗಾವಣೆ ಮಾಡಿ ನಿಯೋಜಿಸಿ ಹುದ್ದೆಗಳನ್ನು ತುಂಬಲು ಸಂಸ್ಥೆಯು ನಿರ್ಧರಿಸಿದೆ.
ಬಿಜಾಪುರ ವಿಭಾಗಕ್ಕೆ ಸಿಬ್ಬಂದಿಯನ್ನು ಕೆಲವು ಅಂಶಗಳ ಆಧಾರದ ಮೇರೆಗೆ ವರ್ಗಾವಣೆ ಮಾಡಿ ನಿಯೋಜಿಸಲಾಗುವುದು. ಇಚ್ಛಿತ ಸಿಬ್ಬಂದಿ 2014ರ ಜನವರಿ ಅಂತ್ಯದವರೆಗೆ ತಮ್ಮ ಅಭಿಪ್ರಾಯಗಳನ್ನು ಸಂಸ್ಥೆಗೆ ತಿಳಿಸುವಂತೆ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ತಿಳಿಸಿದ್ದಾರೆ.
ಪಾರದರ್ಶಕತೆ: ಚಾಲನಾ ಸಿಬ್ಬಂದಿ ಸೇವಾ ಹಿರಿತನಕ್ಕನುಗುಣವಾಗಿ ಹಂತ ಹಂತವಾಗಿ ಬಿಜಾಪುರ ವಿಭಾಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಕೌನ್ಸೆಲಿಂಗ್ ಮುಖಾಂತರ ವರ್ಗಾವಣೆ ಮಾಡಿ ನಿಯೋಜಿಸಲಾಗುವುದು. ಗುಲ್ಬರ್ಗ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಹೊಸಪೇಟೆ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಜಾಪುರ ಜಿಲ್ಲೆಯ ಚಾಲನಾ ಸಿಬ್ಬಂದಿಗಳನ್ನು ಅವರ ಸೇವಾ ಜೇಷ್ಠತೆ ಪರಿಗಣಿಸಿ ವರ್ಗಾವಣೆ ಮಾಡಲಾಗುವುದು.
ಸೇವಾ ಹಿರಿತನಲ್ಲಿ ಬರುವ 200 ಜನ ಸಿಬ್ಬಂದಿಗಳನ್ನು ಬಿಜಾಪುರ ವಿಭಾಗಕ್ಕೆ ವರ್ಗಾವಣೆ ಮಾಡಿ ನಿಯೋಜಿಸಲಾಗುವುದು. ಬಿಜಾಪುರ ವಿಭಾಗಕ್ಕೆ ವರ್ಗಾವಣೆ ಬಯಸುವ ಸಿಬ್ಬಂದಿಗಳಿಗೆ ಹಂತ ಹಂತವಾಗಿ ಅವಕಾಶ ಸಿಗುವುದರಿಂದ ಯಾವುದೆ ಒತ್ತಡ ಮತ್ತು ಗೊಂದಲಗಳಿಗೆ ಒಳಗಾಗದೆ ಖಾಲಿ ಹುದ್ದೆಗಳನ್ನು ತುಂಬುವ ಪ್ರಕ್ರಿಯೆಗೆ ಸಹಕರಿಸಬೇಕು.
ವಿಫುಲ ಅವಕಾಶ: ಮುಂದೆ ಬಿಜಾಪುರ ವಿಭಾಗದಲ್ಲಿ ಖಾಲಿಯಾಗುವ ಹುದ್ದೆಗಳನ್ನು ಸದರಿ ಜೇಷ್ಠತಾ ಪಟ್ಟಿಗನುಗುಣವಾಗಿ ವರ್ಗಾವಣೆ ಮಾಡಿ ನಿಯೋಜಿಸುವ ವ್ಯವಸ್ಥೆಯನ್ನು ಮುಂದುವರೆಸಲು ನಿರ್ಣಯಿಸಲಾಗಿರುತ್ತದೆ. ಇದರಿಂದ ಸಿಬ್ಬಂದಿಗೆ ವಿಫುಲ ಅವಕಾಶ ದೊರೆಯಲಿದ್ದು, ಯಾವುದೇ ಆಮಿಷಕ್ಕೆ ಒಳಗಾಗದೆ ಮತ್ತು ವದಂತಿಗಳಿಗೆ ಆಸ್ಪದ ನೀಡಕೂಡದು ಮತ್ತು ಒತ್ತಡ ತರಬಾರದೆಂದು ಸಿಬ್ಬಂದಿಗೆ ತಿಳಿಸಲಾಗಿದೆ. ಎಲ್ಲ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪಾರದರ್ಶಕವಾಗಿ ಮತ್ತು ಕೌನ್ಸೆಲಿಂಗ್ ಮುಖಾಂತರ ಜನವರಿ ಅಂತ್ಯದೊಳಗಾಗಿ ಬಿಜಾಪುರ ವಿಭಾಗಕ್ಕೆ ವರ್ಗಾವಣೆ ಮಾಡಲಾಗುವುದು.
ಈ ಮೇಲಿನ ಅಂಶಗಳಗೊಂಡಂತೆ ಬಿಜಾಪುರ ವಿಭಾಗಕ್ಕೆ ಚಾಲನಾ ಸಿಬ್ಬಂದಿಗಳನ್ನು ಅತ್ಯಂತ ಪಾರದರ್ಶಕವಾಗಿ, ಸಿಬ್ಬಂದಿ ಸೇವಾ ಹಿರಿತನ ಮತ್ತು ಕೌನ್ಸೆಲಿಂಗ್ ಮುಖಾಂತರ ವರ್ಗಾವಣೆ ಮಾಡಲು ತೆಗೆದುಕೊಂಡಿರುವ ಕ್ರಮಕ್ಕೆ ಸಿಬ್ಬಂದಿ ಸಹಕರಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

