ಕಸಾಪ ಶತಮಾನದ ಸಮ್ಮೇಳನ ಕವಿರಾಜಮಾರ್ಗ ನೆಲ ಗುಲ್ಬರ್ಗದಲ್ಲಾಗಲಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜ.4
ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ವರ್ಷ ಶತಮಾನದ ಸಂಭ್ರಮ ವರ್ಷಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆ ವರ್ಷದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಕವಿರಾಜಮಾರ್ಗ ನೆಲವಾದ ಗುಲ್ಬರ್ಗದಲ್ಲೇ ನಡೆದರೆ ಉತ್ತಮ ಎಂದು ಈಗಾಗಲೇ ಸಾಹಿತಿಗಳು, ಕಸಾಪ ವಲಯದಲ್ಲಿ ಬಲವಾಗಿ ಕೇಳಿಬರುತ್ತಿರುವ ಚರ್ಚೆಗೆ ಕೇಂದ್ರ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ.
ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ನೇತೃತ್ವದ ಜಿಲ್ಲಾ ಪದಾಧಿಕಾರಿಗಳು ಹಾಗೂ ಹಿರಿಯ ಸಾಹಿತಿಗಳ ನಿಯೋಗವು ಖರ್ಗೆ ಅವರನ್ನು ಭೇಟಿ ಮಾಡಿ, ಗುಲ್ಬರ್ಗದಲ್ಲೇ ಸಮ್ಮೇಳನವನ್ನು ಆಯೋಜಿಸುವ ಹಿನ್ನೆಲೆಯಲ್ಲಿ ನೇತೃತ್ವ ವಹಿಸಬೇಕೆಂಬ ಮನವಿಗೆ ಸಮ್ಮತಿಸಿದರು.
ಮುನ್ನೂರು ನೇತೃತ್ವದಲ್ಲಿ: ಸಮ್ಮೇಳನ ಆಯೋಜಿಸುವುದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು. ಮಹಿಪಾಲರೆಡ್ಡಿ ಮುನ್ನೂರು ನೇತೃತ್ವದ ನಿಯೋಗದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ವಸಂತ ಕುಷ್ಟಗಿ, ಡಾ. ಸ್ವಾಮಿರಾವ ಕುಲಕರ್ಣಿ, ಪ್ರೊ. ಶಿವರಾಜ ಪಾಟೀಲ, ಗೌರವ ಕಾರ್ಯದರ್ಶಿ ಬಿ.ಎಚ್. ನಿರಗುಡಿ, ಸುರೇಶ ಬಡಿಗೇರ, ಗೌರವ ಕೋಶಾಧ್ಯಕ್ಷ ಡಾ. ರಾಜೇಂದ್ರ ಯರನಾಳೆ, ಜಿಲ್ಲಾ ಪದಾಧಿಕಾರಿಗಳಾದ ಪ್ರೊ. ಭುವನೇಶ್ವರಿ ಚಿಮಕೋಡೆ, ಎಸ್.ಪಿ. ಸುಳ್ಳದ, ಶಂಕರ ಬಿರಾದಾರ, ಸುಭಾಷ ಶೀಲವಂತ, ಶಿವಶಾಂತರೆಡ್ಡಿ ಮತ್ತಿತರರು ಇದ್ದರು.
100ರ ಸಂಭ್ರಮ: ಕಸಾಪಗೆ 2015 ಶತಮಾನದ ಸಂಭ್ರಮ. 1915ರಲ್ಲಿ ಆರಂಭಗೊಂಡ ಪರಿಷತ್ತಿಗೆ ನೂರು ವಸಂತಗಳನ್ನು ತುಂಬುತ್ತಿರುವುದು ಕನ್ನಡಿಗರ ಪಾಲಿಗೆ ಬಹುದೊಡ್ಡ ಹಬ್ಬ. ಇದೀಗ ಕೊಡಗು ಜಿಲ್ಲೆಯಲ್ಲಿ 80ನೇಯ ಸಮ್ಮೇಳನ ಜ.7, 8 ಮತ್ತು 9ರಂದು ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೀಗ 100ರ ಸಂಭ್ರಮ. ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಕೊಟ್ಟದ್ದು ಕವಿರಾಜಮಾರ್ಗ ಕೃತಿ. ಅದನ್ನು ಕೊಟ್ಟ ನೆಲದಲ್ಲಿ ಸಮ್ಮೇಳನ ಆಗಬೇಕಾದ್ದು ಔಚಿತ್ಯಪೂರ್ಣ.
ಕೊಡಗು ಸಮ್ಮೇಳನದಲ್ಲಿ 100ರ ಸಂಭ್ರಮ ವರ್ಷದ ಅಭಾ ಸಾಹಿತ್ಯ ಸಮ್ಮೇಳನದ ಸ್ಥಳ ನಿಗದಿಯಾಗಲಿದ್ದು, ಅದು ಗುಲ್ಬರ್ಗದ ಪಾಲಾಗಲಿ ಎಂಬುದು ಇಲ್ಲಿನ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಸಚಿವರಾದಿಯಾಗಿ ಎಲ್ಲರ ಆಗ್ರಹವಾಗಿದೆ.
ಅಯ್ಯಪ್ಪಸ್ವಾಮಿ ಮಂಡಲ ಪೂಜೆ: ಮೆರವಣಿಗೆ
ಲಿಂಗಸ್ಗೂರು: ಪಟ್ಟಣದಲ್ಲಿ ಶಬರಿಮಲೈ ಅಯ್ಯಪ್ಪಸ್ವಾಮಿ ಮಂಡಲಪೂಜೆ ಅಂಗವಾಗಿ ಸ್ವಾಮಿ ಮಾಲೆ ಧರಿಸಿದ ಭಕ್ತರಿಂದ ಅಯ್ಯಪ್ಪಸ್ವಾಮಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಭಕ್ತರು ಮಂಡಲಪೂಜೆ ನಿಮಿತ್ತ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಗಡಿಯಾರ ಚೌಕ, ಬಸ್ ನಿಲ್ದಾಣ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮರವಣಿಗೆ ನಡೆಸುತ್ತಾ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ತೆರಳಿದರು. ಈ ಮಧ್ಯೆ ಭಜನೆ, ಅಯ್ಯಪ್ಪಸ್ವಾಮಿ ಸ್ತೋತ್ರ, ಭಕ್ತಿಗೀತೆಗಳನ್ನು ಹಾಡುತ್ತಾ ಕುಣಿಯುತ್ತಾ ಮರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಮಾಲೆ ಧರಿಸಿದ ಭಕ್ತರಾದ ಸಿದ್ಧರಾಮ ಗುರುಸ್ವಾಮಿ, ಶಿವಕುಮಾರ ಕುಂಬಾರ, ಮಲ್ಲಿಕಾರ್ಜುನ ಮೇಟಿ, ರಾಜೇಶ, ವೀರೇಶ ಪತ್ತಾರ, ಕುಪ್ಪಣ್ಣ, ಮೌನೇಶ ಮುನ್ನೂರು, ಆನಂದ ರೆಡ್ಡಿ ಮುನ್ನೂರು ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

