ರಾಯಚೂರು

ಇಸ್ಪೀಟ್: 11 ಜನರ ಬಂಧನ

Published On :

ಮುದಗಲ್: ಪಟ್ಟಣ ಸೇರಿದಂತೆ ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 5 ದಿನದಲ್ಲಿ ಮಟಕಾ, ಇಸ್ಪೀಟ್ ಜೂಜಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿವೆ.
ಎಸ್‌ಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ ಮಟಕಾ ಮತ್ತು ಇಸ್ಪೀಟ್ ಜೂಜಾಟಕ್ಕೆ ಸಂಬಂಧಿಸಿದಂತೆ ಒಟ್ಟು 11 ಪ್ರಕರಣ ದಾಖಲಾಗಿದ್ದು, ಮಟಕಾ ಆಡದಂತೆ, ಆಡಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ 10  ಜನರ ಮೇಲೆ ಪ್ರಕರಣ ದಾಖಲಾಗಿದೆ.
ಸಮೀಪದ ವ್ಯಾಕರನಾಳ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 11 ಜನರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜ.2ರಂದು ಮಹ್ಮದ್ ತೋಖಿಕ್ ಮತ್ತು ಹುಸೇನ್ ಬೇಗ್ ಅವರನ್ನು ಬಂಧಿಸಿ, ಅವರಿಂದ 2200 ವಶಪಡಿಸಿಕೊಳ್ಳಲಾಗಿದೆ. ವೀರಭದ್ರಪ್ಪ ದಂಡಿ 789, ಸಿಪಿಐ ಅಲಿಸಾಬ ನೇತೃತ್ವದ ಡಿಎಸ್‌ಬಿ ತನಿಖಾ ತಂಡ ಪಟ್ಟಣಕ್ಕೆ ಆಗಮಿಸಿ ಮಟಕಾ ಬುಕ್ಕಿ ಹುಸೇನ್‌ಸಾಬ ತಲೇಖಾನ್ ಅವರನ್ನು ಬಂಧಿಸಿ 610 ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಜ.3ರಂದು ಛತ್ತರ ಗ್ರಾಮದಲ್ಲಿ ಯಮನೂರ ಅವರನ್ನು ಬಂಧಿಸಿ, 1320 ವಶಪಡಿಸಿಕೊಂಡಿದ್ದು ಮತ್ತು ಬುಕ್ಕಿ ಅಮರೇಗೌಡ ಗುಂಜಳ್ಳಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಅಮರೇಗೌಡ ಗುಂಜಳ್ಳಿ ನಾಪತ್ತೆಯಾಗಿದ್ದಾನೆ.  ಹಲ್ಕಾವಟಗಿ ಗ್ರಾಮದಲ್ಲಿ ರವಿ ನಂದಪ್ಪ ಅವರನ್ನು ಬಂಧಿಸಿ 750 ಹಾಗೂ ಉಳಿಮೇಶ್ವರ ಗ್ರಾಮದಲ್ಲಿ ಜೂಜಾಟದಲ್ಲಿ ತೊಡಗಿದ್ದ 6 ಜನರನ್ನು ಬಂಧಿಸಿ, 2510 ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿದೆ. ಅದೇ ರೀತಿ ಜ.6ರಂದು ಕನಸಾವಿ ರಾಮಲಿಂಗಪ್ಪ ಅವರಿಂದ 1,530 ಜಪ್ತಿ ಮಾಡಿ, ದೇವೇಂದ್ರಪ್ಪ ಹಿರೇಲೆಕ್ಕಿಹಾಳ ಅವರ ಮೇಲೆ ಪ್ರಕರಣ ದಾಖಲಾಗಿದ್ದು ದೇವೆಂದ್ರಪ್ಪ ನಾಪತ್ತೆಯಾಗಿದ್ದಾನೆ.
ಜೂಜುಕೋರರ ನಿದ್ದೆಗೆಡಿಸಿದ ಪೊಲೀಸರು: ಪಟ್ಟಣದ ಸುತ್ತಮುತ್ತ ಇಸ್ಪೀಟ್ ಜೂಜಾಟ ಮತ್ತು ಮಟಕಾ ಹಾವಳಿ ಹೆಡೆ ಎತ್ತಿರುವುದಕ್ಕೆ ಪಿಎಸ್‌ಐ ಸಂಗಮೇಶ ಶಿವಯೋಗಿ ಹಾಗೂ ಸಿಬ್ಬಂದಿ ದಾಳಿಯಿಂದ ಜೂಜುಕೋರರಿಗೆ ನಿದ್ದೆಗೆಡಿಸಿದಂತಾಗಿದೆ.
ಮುದಗಲ್ ಭಾಗದ ಹಳ್ಳಿಗಳಲ್ಲಿ ಮಟಕಾ, ಇಸ್ಪೀಟ್ ಜೂಜಾಟ ವ್ಯಾಪಕವಾಗಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸ್ ಇಲಾಖೆ ತಂಡ ರಚಿಸಿಕೊಂಡಿದ್ದು ದಾಳಿ ನಡೆಸುತ್ತಿದೆ. ಕೆಲವರು ರಾಜಕೀಯ ಮುಖಂಡರ ಬೆಂಬಲ ಪಡೆದು ಪಾರಾಗುತ್ತಿದ್ದಾರೆ ಎಂದು ಹೇಳತಾಗುತ್ತಿದೆ. ಎಸ್ಪಿ ಎನ್.ಎಸ್. ನಾಗರಾಜ ಅವರು ಜೂಜಾಟಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮಕ್ಕೆ ಮುಂದಾಗಿರುವುದನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.