ರಾಯಚೂರು

ರಾಜ್ಯಕ್ಕೆ ಮತ್ತಷ್ಟು ರೇಲ್ವೆ ಯೋಜನೆ ಮಂಜೂರು: ಸಚಿವ ಖರ್ಗೆ

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.13
ಸಮಗ್ರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳ ಜಾರಿ ಮತ್ತು ಪ್ರಯಾಣಿಕರ ಸಮಸ್ಯೆ ಪರಿಹರಿಸುತ್ತಿರುವುದಾಗಿ ಹೇಳಿದ ಸಚಿವ ಮಲ್ಲಿಕಾರ್ಜುನ ಖರ್ಗೆ, ಜ.20ರಂದು ಬೆಂಗಳೂರಿನ ಯಲಹಂಕದಲ್ಲಿ 3 ಹೊಸ ಪ್ಲಾಟ್ಫಾರ್ಮ್ ನಿರ್ಮಾಣಕ್ಕೆ ಅಡಿಗಲ್ಲು ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಗುಲ್ಬರ್ಗದಿಂದ 11 ಕಿಮೀ ದೂರದಲ್ಲಿರುವ ತಾಜ್ ಸುಲ್ತಾನಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕದಲ್ಲಿ 3 ಹೊಸ ಪ್ಲಾಟ್ಫಾರ್ಮ್ ನಿರ್ಮಿಸಲಾಗುತ್ತಿದೆ. ಇದಕ್ಕೆ 19 ಕೋಟಿ ವೆಚ್ಚವಾಗಲಿದೆ. ಇದಲ್ಲದೆ ಬೆಂಗಳೂರು ನಗರದಲ್ಲಿನ ರೇಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ನೀಡುವ ಯೋಜನೆಗಳನ್ನು ರೂಪಿಸಲಾಗಿದ್ದು, ಇದಕ್ಕಾಗಿ 80 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದರು.
ಜ.20ರಂದು ಅಡಿಗಲ್ಲು: ಯಲಹಂಕದಲ್ಲಿ 3 ಹೊಸ ರೈಲು ಪ್ಲಾಟ್ಫಾರ್ಮ್ಗಳು  ನಿರ್ಮಾಣವಾದಲ್ಲಿ ಅದರಿಂದ ಅನೇಕ ರೈಲುಗಳನ್ನು ಅಲ್ಲಿ ನಿಲ್ಲಿಸಬಹುದು. ಇದರಿಂದಾಗಿ ಹೈ-ಕ ಭಾಗದಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಯಲಹಂಕದಲ್ಲೇ ಇಳಿದು ತಮ್ಮ ಸ್ಥಳಗಳಿಗೂ ಹೋಗಲು ಅನುಕೂಲ. ಸಮೀಕ್ಷೆಯೊಂದರ ಪ್ರಕಾರ- ಶೇ.25ರಿಂದ ಶೇ.30ರಷ್ಟು ಜನ ಯಲಹಂಕದಲ್ಲೇ ಇಳಿಯುತ್ತಾರೆ. ಇದರಿಂದ ಬೆಂಗಳೂರು ನಗರ ದಟ್ಟಣೆ ತಪ್ಪಿಸಬಹುದು ಎಂದರು.
ಇದಲ್ಲದೆ ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಅನೇಕ ಪ್ರಗತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಒಂದು ತಿಂಗಳಲ್ಲಿ ಅಲ್ಲಿಯೂ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಾಗುತ್ತದೆ. ಯಲಹಂಕ ನಿಲ್ದಾಣದಿಂದ ಮುಖ್ಯರಸ್ತೆ ಅಭಿವೃದ್ಧಿಪಡಿಸಿದರೆ ಬರುವ ದಿನಗಳಲ್ಲಿ ಯಲಹಂಕ ನಿಲ್ದಾಣ ಮಹತ್ವದ ನಿಲ್ದಾಣವಾಗಿ ಹೊರಹೊಮ್ಮುವ ಸಾಧ್ಯತೆಗಳಿದೆ ಎಂದು ತಿಳಿಸಿದರು.
ಗುಲ್ಬರ್ಗಕ್ಕೆ ಮತ್ತೊಂದು ಪಿಟ್ ಲೈನ್: ಹೊಸ ರೈಲುಗಳನ್ನು ಆರಂಭಿಸಲು ಅನುಕೂಲವಾಗುವ ಪಿಟ್ಲೈನ್ನ್ನು ಗುಲ್ಬರ್ಗಕ್ಕೆ ಮತ್ತೊಂದು ಮಂಜೂರು ಮಾಡಲಾಗಿದೆ. ಈಗಾಗಲೇ ಪಿಡಿಎ ಎಂಜಿನಿಯಿರಿಂಗ್ ಕಾಲೇಜು ಪಕ್ಕದಲ್ಲಿರುವ ರೇಲ್ವೆ ಕೆಳಸೇತುವೆ ಪಕ್ಕದಲ್ಲಿ ಪಿಟ್ ಲೈನ್ ಕಾಮಗಾರಿ ಶುರುವಾಗಿದೆ. ಇದಲ್ಲದೆ ಬಿದ್ದಾಪುರ ಬಳಿಯ ರೈಲು ಮಾರ್ಗಕ್ಕೆ ಹೊಂದಿಕೊಂಡೇ ಮತ್ತೊಂದು ಪಿಟ್ಲೈನ್ ನಿಮಾರ್ಣಕ್ಕೂ ಅನುಮೋದನೆ ನೀಡಲಾಗಿದೆ. ಇವೆರಡರಿಂದ ಏಕಕಾಲಕ್ಕೆ 27 ಕೋಚ್ಗಳನ್ನು ಸ್ವಚ್ಛಗೊಳಿಸಿ ಇಲ್ಲಿಂದಲೇ ಓಡಿಸಲು ಅನುಕೂಲವಾಗುತ್ತದೆ ಎಂದರು.
ಬೀದರ್ ಜಿಲ್ಲೆಯಿಂದಲೂ ಹೊಸ ರೈಲುಗಳ ಉಗಮಕ್ಕೆ ಅವಕಾಶ ಇರುವಂತೆ ಅಲ್ಲಿಯೂ ರೈಲು ಸ್ವಚ್ಛತೆ, ನಿರ್ವಹಣೆಗೋಸ್ಕರ ಪಿಟ್ಲೈನ್ ಕಾಮಗಾರಿಗೆ ಮಂಜೂರಾತಿ ನೀಡಲಾಗುತ್ತಿದೆ. ತಕ್ಷಣ ಈ ಯೋಜನೆಯ ಕಾಮಗಾರಿಗೆ ತಾವು ಧರಂ ಜೊತೆಗೂಡಿ ಅಡಿಗಲ್ಲು ಹಾಕುವುದಾಗಿ ಹೇಳಿದರು.
ಮುನಿರಾಬಾದ್- ಮೆಹೆಬೂಬ ನಗರ ಮಾರ್ಗ: ಮುನಿರಾಬಾದ್- ರಾಯಚೂರು- ಮೆಹಬೂಬ್ನಗರ ಮಾರ್ಗಕ್ಕೆ ತಾವು ಕಳೆದ 3 ವರ್ಷಗಳಲ್ಲಿ ದೊರಕದ ಹಣ ನೀಡಿದ್ದಾಗಿ ಅಂಕಿ- ಸಂಖ್ಯೆ ಸಮೇತ ಹೇಳಿದ ಸಚಿವರು, 2013- 14ನೇ ಸಾಲಿಗೆ 98 ಕೋಟಿ ಅನುದಾನ ನೀಡಲಾಗಿದೆ. ಈ ಹಣದಲ್ಲಿ ಕಾಮಗಾರಿ ಸಹಜವಾಗಿಯೇ ವೇಗ ಪಡೆಯುವ ಆಶಯ ತಮ್ಮದು. ಹಲವರು ಖರ್ಗೆ ತಮ್ಮ ಜಿಲ್ಲೆಗಳನ್ನು ಮಾತ್ರ ನೋಡಿಕೊಳ್ಳುತ್ತಿದ್ದಾರೆಂಬ ಟೀಕೆ ಸರಿಯಲ್ಲ ಎಂದರು.
ರೇಲ್ವೆ ಸಚಿವನಾದ ನಂತರ ಕರ್ನಾಟಕದ ಯೋಜನೆಗಳಿಗೆ ಹೆಚ್ಚಿನ ಮಹತ್ವ, ಆದ್ಯತೆ ನೀಡುತ್ತಿದ್ದೇನೆ. ಅನೇಕ ರಾಜ್ಯಗಳಿಂದ ಸಿಎಂ, ಸಚಿವರು ದುಂಬಾಲುಬಿದ್ದು ಯೋಜನೆಗಳ ಮಂಜೂರಾತಿಗೆ ಕೋರುತ್ತಿರುತ್ತಾರೆ. ಆದರೆ ತಾವಂತೂ ಕರ್ನಾಟಕದ ಮಟ್ಟಿಗೆ ಖುದ್ದು ಮುಖ್ಯ ಕಾರ್ಯದರ್ಶಿ, ಸಂಬಂಧಪಟ್ಟಂತಹ ಅಧಿಕಾರಿಗಳ ಸಭೆ ನಡೆಸಿ ಎಲ್ಲೆಲ್ಲಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂಬ ಮಾಹಿತಿ ಪಡೆದು ಅವುಗಳಿಗೆ ವೇಗ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಅಗ್ನಿ ದುರಂತಗಳ ಅಧ್ಯಯನಕ್ಕೆ ಸಮಿತಿ
ರೈಲುಗಳಲ್ಲಿ ಈಚೆಗಿನ ದಿನಗಳಲ್ಲಿ ಸಂಭವಿಸುತ್ತಿರುವ ಅಗ್ನಿ ದುರಂತಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರೇಲ್ವೆ ಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈಗಾಗಲೇ ರೇಲ್ವೆ ಸುರಕ್ಷತಾ ಆಯುಕ್ತರಿಗೂ ಈ ಬಗ್ಗೆ ಸೂಚನೆ ನೀಡಿ ದುರಂತಗಳನ್ನು ತಡೆಯಲು ತಾತ್ಕಾಲಿಕವಾಗಿ ಪರಿಹಾರ ಕ್ರಮಗಳನ್ನು ಸೂಚಿಸುವಂತೆಯೂ ಕೋರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಗುಲ್ಬರ್ಗ- ಬೀದರ್ ರೈಲು ಮಾರ್ಗ
ಗುಲ್ಬರ್ಗ- ಬೀದರ್ ರೇಲ್ವೆ ಮಾರ್ಗ ನಿರ್ಮಾಣ ಕಾಮಗಾರಿಗೆ ಈ ವರ್ಷ 120 ಕೋಟಿ ಹೆಚ್ಚುವರಿ ಅನುದಾನ ಇಡಲಾಗಿದೆ. ಬರುವ ವರ್ಷ 160 ಕೋಟಿ ಮೀಸಲಿಡಲಾಗುತ್ತಿದೆ. ಇದೇ ವೇಗದಲ್ಲಿ ಹಣದ ಲಭ್ಯತೆ, ಕಾಮಗಾರಿ ವೇಗ ಸಾಗಿದರೆ ಇನ್ನೆರಡು ವರ್ಷದೊಳಗೇ ಈ ಮಹತ್ವದ ಯೋಜನೆ ಪೂರ್ಣಗೊಳ್ಳಲಿದೆ ಎಂದು ಖರ್ಗೆ ಹೇಳಿದರು.
ಯೋಜನೆಗಳಿಗೆ ರಾಜ್ಯ- ಕೇಂದ್ರ ಸರ್ಕಾರದ ಪಾಲುದಾರಿಕೆಯಿದ್ದು ರಾಜ್ಯದ ಸ್ಪಂದನೆ ಹೇಗಿದೆ ಎಂಬ ಪ್ರಶ್ನೆಗೆ, ಖರ್ಗೆ ಯಾವುದೇ ಸಮರ್ಪಕ ಉತ್ತರ ನೀಡಲಿಲ್ಲ. ರಾಜ್ಯದ ಸ್ಪಂದನೆ ಇರದೆ ಹೋದಲ್ಲಿ ಇವೆಲ್ಲ ಕೆಲಸಗಳು ನಡೆಯುತ್ತಿರಲಿಲ್ಲ. ಅದಕ್ಕೇ ಈ ವಿಚಾರದಲ್ಲಿ ಹೆಚ್ಚಿಗೆ ಏನನ್ನೂ ಹೇಳಲಾರೆ ಎಂದು ಜಾರಿಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.