ಸಿಂಧನೂರಿಗೆ ಎನ್ಇಕೆಆರ್ಟಿಸಿ ಡಿವಿಜನ್ಗೆ ಪ್ರಸ್ತಾವನೆ: ಬಾದರ್ಲಿ
ಸಿಂಧನೂರು: ನಗರದ ಬಸ್ ಘಟಕವು 600ಕ್ಕೂ ಹೆಚ್ಚು ಶೆಡ್ಯೂಲ್ಗಳನ್ನು ಹೊಂದಿದ್ದು, 4 ರಾಜ್ಯ ಹೆದ್ದಾರಿಕೇಂದ್ರ ಸ್ಥಾನವಾಗಿದೆ. ನಿತ್ಯವೂ ಸಾವಿರಾರು ಬಸ್ಗಳು ಓಡಾಡುತ್ತಿದ್ದು, ಡಿವಿಜನ್ ಆಗುವ ಸಂಪೂರ್ಣ ಅರ್ಹತೆಯಿರುವುದರಿಂದ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಅಂಬಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಬಸ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. ಸಿಂಧನೂರು ಘಟಕಕ್ಕೆ ಇನ್ನೂ 25 ಬಸ್ಗಳು ಸದ್ಯದಲ್ಲಿಯೇ ಬರಲಿವೆ. ಸಿಂಧನೂರು- ವಿಜಯವಾಡ ಬಸ್ ಸಂಚಾರಕ್ಕೆ ಈಗಾಗಲೇ ಅನುಮತಿ ಸಿಕ್ಕಿದ್ದು, ಸದ್ಯದಲ್ಲಿಯೇ ಆರಂಭವಾಗಲಿದೆ. ಬಸ್ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ ಕಾಮಗಾರಿಗಾಗಿ ಹೆಚ್ಚುವರಿ 96 ಲಕ್ಷ ರೂ.ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಘಟಕ ವ್ಯವಸ್ಥಾಪಕ ಕರೇಗೌಡ ಮುಕ್ಕುಂದಿ ಮಾತನಾಡಿ, ಕಳೆದ ಬಾರಿ ಅಂಬಾ ಜಾತ್ರೆಗೆ 50 ಬಸ್ ಬಿಡಲಾಗಿತ್ತು. 25 ಲಕ್ಷ ಆದಾಯ ಬಂದಿತ್ತು. ಈ ಬಾರಿ 60 ಬಸ್ಗಳನ್ನು ಬಿಡಲಾಗುವುದೆಂದರು. ನಗರಸಭಾ ಅಧ್ಯಕ್ಷ ಜಾಫರ ಜಾಹಗೀರದಾರ, ಸದಸ್ಯರಾದ ಶೇಖರಪ್ಪಗಿಣಿವಾರ, ಪ್ರಭುರಾಜ, ಮುಖಂಡರಾದ ಎನ್.ಅಮರೇಶ, ಅಲ್ಲಮಪ್ರಭು ಪೂಜಾರ, ಕೆ.ದುರುಗಪ್ಪ, ಖಾಜಿ ಮಲ್ಲಿಕ್ ವಕೀಲ ಹಾಗೂ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

