ಜಿಲ್ಲಾ ಉಸ್ತುವಾರಿ ಸಚಿವ ಇಸ್ಲಾಂ, ಐಜಿಪಿ ವಜಾಕ್ಕೆ ಎಬಿವಿಪಿ ಆಗ್ರಹ
ಅಫಜಲ್ಪುರ: ಭೂಗತ ಪಾತಕಿ ಮುನ್ನಾ ಶೂಟೌಟ್ ಪ್ರಕರಣದಲ್ಲಿ ಗುಂಡೇಟಿನಿಂದ ಮರಣವನ್ನಪ್ಪಿದ ಮಲ್ಲಿಕಾರ್ಜುನ ಬಂಡೆ ಅವರ ವೀರಮರಣಕ್ಕೆ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಮಂತ್ರಿ ಖಮರುಲ್ ಇಸ್ಲಾಂ ಹಾಗೂ ಐಜಿಪಿ ವಜೀರ್ ಅಹ್ಮದ್ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ. ಇದು ಖಂಡನೀಯ. ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿ ಖಮರುಲ್ ಇಸ್ಲಾಂ ಮತ್ತು ಐಜಿಪಿ ವಜೀರ್ ಅಹ್ಮದ್ ಅವರನ್ನು ವಜಾಗೊಳಿಸಬೇಕೆಂದು ತಾಲೂಕು ಎಬಿವಿಪಿ ಖಾರವಾಗಿ ಒತ್ತಾಯಿಸಿತು. ಎಬಿವಿಪಿ ತಾಲೂಕು ಘಟಕದ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಬಂಡೆ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ಖಮರುಲ್ ಇಸ್ಲಾಂ ವಜೀರ್ ಅಹ್ಮದ್ ವಿರುದ್ಧ ಪ್ರತಿಭಟನೆಯನ್ನು ನಡೆಸಿ ಖಮರುಲ್ ಇಸ್ಲಾಂ ಪ್ರತಿಕೃತಿ ದಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಪ್ರಮುಖ ರಾಜು ಬಡದಾಳ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಐಜಿಪಿ ವಜೀರ್ ಅಹ್ಮದ್ ಅವರನ್ನು ರಾಜ್ಯ ಸರ್ಕಾರ ವಜಾಗೊಳಿಸಬೇಕು. ಬಂಡೆ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಧನ ರು. 1 ಕೋಟಿ ನೀಡಬೇಕು. ಪೊಲೀಸ್ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಪಡೆಗಳಿಗೆ ನೂತನ ತಂತ್ರಜ್ಞಾನ ಹೊಂದಿರುವ ಆಯುಧಗಳು ಮತ್ತು ಕವಚಗಳನ್ನು ಒದಗಿಸಬೇಕು ಎಂದು ಹೇಳಿ, ತಹಸೀಲ್ದಾರ ಗೌಸುದ್ದೀನ್ ಅವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಭೀಮರಾಯ ಆಲಮೇಲ್, ಸಾಗರ ಪ್ರಚಂಡೆ, ಹಿರಗೇಪ್ಪ ಸಿಂಗೆ, ಮಂಜುನಾಥ ಜಾಧವ, ಶ್ರೀಧರ ರಾಂಪೂರ, ಶಿವರಾಜ ಅವರಾದ್ ಶ್ವೇತಾ, ರೂಪಾ ಪದಕಿ, ಚನ್ನಮ್ಮ ಜಿರೋಳ್ಳಿ, ಅರುಣಾ ಪಾಟೀಲ್, ಸುಧಾರಾಣಿ ಪಾಟೀಲ್ ಮತ್ತಿತರರು ಇದ್ದರು.
ಕೋಟಿ ಪರಿಹಾರ ನೀಡಿ: ಬಂಡೆ ಅವರನ್ನು ಸೂಕ್ತ ಚಿಕಿತ್ಸೆ ನೀಡದೆ ಇರುವುದರಿಂದ ಅವರು ಅಸುನಿಗುವಂತಾಯಿತು. ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಐಜಿಪಿ ಅವರು ನೇರ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಬಂಡೆ ಕುಟುಂಬಕ್ಕೆ ಘೋಷಿಸಿರುವ ಪರಿಹಾರ ಮೊತ್ತ 1 ಕೋಟಿ ನೀಡಬೇಕೆಂದು ಜೈ ಕರವೇ ಉಪಾಧ್ಯಕ್ಷ ಮಹಾಂತೇಶ ಗುಣಾರಿ ಪಟ್ಟಣದ ವಸತಿ ನಿಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು. ಗೌರಿಶಂಕರ ಹೆಗ್ಗಿ, ಗುರುಶಾಂತ ಡಾಂಗೆ, ವಿನೋದ ಬಡದಾಳ, ರಾವುತ್ ವಾಲಿಕಾರ, ಪ್ರಕಾಶ ಪಾಟೀಲ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

