ರಾಯಚೂರು

ನಾಗಾವಿ' ಪಠ್ಯಕ್ರಮದಲ್ಲಿ ಜಾರಿಯಾಗಲಿ

Published On :

ಚಿತ್ತಾಪುರ: ತಾಲೂಕಿನ ರೈತರು ಉಳುಮೆ ಮಾಡಿ ಜೀವನ ನಡೆಸುತ್ತಿದ್ದ ಜಮೀನನ್ನು ಕಾರ್ಖಾನೆಯವರು ಖರೀದಿ ಮಾಡಿ ಕಾರ್ಖಾನೆ ಸ್ಥಾಪಿಸುತ್ತಿದ್ದು, ಆ ಕಾರ್ಖಾನೆಗಳಲ್ಲಿ ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ  ಉದ್ಯೋಗವಕಾಶ ನೀಡಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಹೇಳಿದರು.
ಅವರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕರವೇ ವತಿಯಿಂದ ಹಮ್ಮಿಕೊಂಡಿದ್ದ ಐತಿಹಾಸಿಕ ನಾಗಾವಿ ನಾಡಿನ ರೈತರ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರ ಜಮೀನುಗಳನ್ನು ನೀಡುತ್ತಿರುವ ಕಾರಣ ನಮ್ಮ ರೈತರು ಇಂದು ಜಮೀನು ಇಲ್ಲದೆ, ಕೆಲಸವೂ ಇಲ್ಲದೆ ಬೀದಿಗೆ ಬರುವಂತಾಗಿದೆ. ಅದಕ್ಕಾಗಿ ರೈತರಿಗೆ ಸರೋಜಿನಿ ಮಹಿಷಿ ವರದಿಯಂತೆ ಉದ್ಯೋಗ ನೀಡಬೇಕು ಇಲ್ಲದಿದ್ದಲ್ಲಿ ಕರವೇ ಇದರ ಬಗ್ಗೆ ಹೋರಾಟಕ್ಕೂ ಸಿದ್ದ ಎಂದು ಹೇಳಿದರು.
ಇಲ್ಲಿನ ನಾಗಾವಿ ತನ್ನದೇ ಆದ ಇತಿಹಾಸ ಹೊಂದಿದೆ. ರಾಷ್ಟ್ರಕೂಟರ ಕುಲ ದೇವತೆಯಾಗಿದ್ದ ನಾಗಾವಿ ದೇವಸ್ಥಾನ ಹಾಗೂ ಅಲ್ಲಿನ ಪ್ರದೇಶದಲ್ಲಿನ ಕೋಟೆ, ಶಿಲಾಶಾಸನಗಳ ಕುರಿತು ಸಂಶೋಧನೆ ನಡೆಸಿ ಅವನ್ನು
ಪುನರುಜ್ಜೀವನಗೋಳಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಅಲ್ಲದೇ ನಾಗಾವಿ ವಿಶ್ವವಿದ್ಯಾಲಯವನ್ನು ಇಲ್ಲಿ ಪ್ರಾರಂಭ ಮಾಡಬೇಕು ಮತ್ತು ಪ್ರಾಥಮಿಕ ಹಂತದ ಶಿಕ್ಷಣದ ಪಠ್ಯಕ್ರಮದಲ್ಲಿ ನಾಗಾವಿ ಇತಿಹಾಸ ಸೇರಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತಾಗಬೇಕು. ಇದಕ್ಕೆ ಸರ್ಕಾರದ ಗಮನ ಸೆಳೆಯಲು ಕರವೇ ವತಿಯಿಂದ ಪತ್ರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಸಾಲದು. ನಮ್ಮ ಕನ್ನಡ ಭಾಷೆಯ ವೈವಿಧ್ಯತೆ ಅನ್ಯ ಭಾಷೆಗಳಲ್ಲಿ ಇಲ್ಲದೆ ಇರುವುದರಿಂದ ಇನ್ನೂ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳು ಲಭಿಸಲಿ ಎಂದು ಹೇಳಿದರು.
ಹಜರತ್  ಸೈಯದ್ ಶಾಹ ಮುಸ್ತಫಾ ಖಾದ್ರಿ, ಸೋಮಶೇಖರ ಶಿವಾಚಾರ್ಯರು ಹಾಗೂ ಜಿಲ್ಲಾ ಅಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್, ಉಪಾಧ್ಯಕ್ಷ ನಾಗರಾಜ ಕಡಬೂರ, ಸದಸ್ಯ ವಿನೋದ ಗುತ್ತೇದಾರ, ಕರವೇ ಉಪಾಧ್ಯಕ್ಷ ಜಿಲ್ಲೆಯ ತಾಲೂಕುಗಳ ಕರವೇ ಅಧ್ಯಕ್ಷರು ಇದ್ದರು.
ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ರವಿ ಎಸ್. ಕೋರಿ ಕಾರ್ಯಕ್ರಮ ನಡೆಸಿಕೊಟ್ಟರು. ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ, ರಾಚಯ್ಯ ಸ್ವಾಮಿ ಅವರ ರಸಮಂಜರಿ ನೋಡುಗರ ಜನಮನ ಸೆಳೆಯಿತು.
ವಿವಿಧ ಕ್ಷೇತ್ರದ ಸಾಧಕರಿಗೆ ನಾಗಾವಿ ಸುಪುತ್ರ ಪ್ರಶಸ್ತಿ, ಅನ್ನದಾನ ರೈತರಿಗೆ ನೇಗಿಲ ಯೋಗಿ ಪ್ರಶಸ್ತಿ ಮತ್ತು ಹಾಸ್ಯ ರತ್ನ ಪ್ರಶಸ್ತಿ ಮತ್ತು ಮಲ್ಲಿಕಾರ್ಜುನ ಡೋಲೆ ಅವರಿಗೆ ರೈತರ ಧ್ವನಿರತ್ನ ಪ್ರಶಸ್ತಿ ಮತ್ತು ಪತ್ರಕರ್ತರಿಗೆ ಹೋರಾಟ ಸ್ಫೂರ್ತಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.