ಜಿಲ್ಲಾ ಕ್ರೀಡಾಕೂಟ; ರಾಜ್ಯ ಮಟ್ಟಕ್ಕೆ
ಸಿಂಧನೂರು: ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಿಂಧನೂರು ತಾಲೂಕಿನ ಅನೇಕರು ಉತ್ತಮ ಸಾಧನೆ ಮೆರೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾದರ್ಲಿಯ ಉಪ ತಹಸೀಲ್ದಾರ್ ದೇವರಾಜ್ ಹಿರೇಮಠ ಶಟಲ್ ಡಬಲ್ಸ್ನಲ್ಲಿ ಪ್ರಥಮ, ಶಟಲ್ ಸಿಂಗಲ್ಸ್ನಲ್ಲಿ ದ್ವಿತೀಯ, ಗುಂಡು ಎಸೆತದಲ್ಲಿ ಪ್ರಥಮ, 50 ಮೀಟರ್ ಫ್ರೀ ಸ್ಟೈಲ್ ಈಜುನಲ್ಲಿ ದ್ವಿತೀಯ, ಶಿಕ್ಷಕ ಬೀರಪ್ಪ ಶಂಭೋಜಿ ಅವರು ಕೇರಂ ಡಬಲ್ಸ್ನಲ್ಲಿ ಪ್ರಥಮ, 50 ಮೀಟರ್ ಬ್ಯಾಕ್ ಸ್ಟ್ರೋಕ್ ಈಜಿನಲ್ಲಿ ಪ್ರಥಮ, ಶಿಕ್ಷಕ ಗಂಗಾಧರಯ್ಯ ಹಿರೇಮಠ, 200, 400 ಹಾಗೂ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ತಾಲೂಕಿನ ರೌಡಕುಂದಾ ಗ್ರಾಮದ ಶಾಲೆಯ ಶಿಕ್ಷಕ ಚನ್ನಬಸಪ್ಪ 5000, 10,000 ಹಾಗೂ 15 ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಶಿಕ್ಷಕ ಕೃಷ್ಣ ಕೇರಂ ಡಬಲ್ಸ್ನಲ್ಲಿ ಪ್ರಥಮ, ಕಲ್ಮಂಗಿ ಸಿಆರ್ಪಿ ತಿಪ್ಪಣ್ಣ ನೈನಾಪುರ 400 ಮೀಟರ್ ಈಜಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಯಾಪಲಪರ್ವಿ ಶಾಲೆಯ ಪ್ರದೀಪ್ ಗುಂಡು ಎಸೆತದಲ್ಲಿ ಪ್ರಥಮ, ಸಿಂಗಾಪುರ ಶಾಲೆಯ ಮಹ್ಮದ್ ಅಜರುದ್ದೀನ್ ದ್ವಿತೀಯ, ಸಿದ್ರಾಂಪುರ ಶಾಲೆಯ ಶಂಭುಲಿಂಗ ಜಾವೆಲಿನ್ ಎಸೆತದಲ್ಲಿ ಪ್ರಥಮ, ಬಾಳೆಗಿಡ ಕ್ಯಾಂಪ್ ಶಾಲೆಯ ಹನುಮೇಶ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಬಡ್ಡಿ ತಂಡ: ಕಬಡ್ಡಿ ಸ್ಪರ್ಧೆಯಲ್ಲಿ ತಾಲೂಕಿನ ಆರ್.ಎಚ್. ಕ್ಯಾಂಪ್ ನಂ.2ರ ಶಂಕ್ರಪ್ಪ ಹೂಗಾರ ನಾಯಕತ್ವದ ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ. ಇವರೆಲ್ಲರೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

