ರಾಯಚೂರು

ಕುಡಿವ ನೀರು ಸಮಸ್ಯೆ: ಗ್ರಾಮಸ್ಥರಿಂದ ಇಒಗೆ ಮುತ್ತಿಗೆ

Published On :

ಮುದಗಲ್: ಕುಡಿವ ನೀರಿನ ತೊಂದರೆಯಿಂದ ಬೇಸತ್ತ ಕನ್ನಾಳ ಗ್ರಾಮಸ್ಥರು ಶನಿವಾರ ತಾಪಂ ಇಒ ಶರಣಬಸವರಾಜಗೆ ಮುತ್ತಿಗೆ ಹಾಕಿ ನೀರಿನ ವ್ಯವಸ್ಥೆ ಕಲ್ಪಿಸುವವರೆಗೂ ಮುನ್ನಡೆಯದಂತೆ ಬಿಗಿಪಟ್ಟು ಹಿಡಿದ ಪ್ರಸಂಗ ಗ್ರಾಪಂ ಮುಂದೆ ಜರುಗಿತು.
ಪಟ್ಟಣ ಸಮೀಪದ ಕನ್ನಾಳ ಗ್ರಾಮದಲ್ಲಿ ಕುಡಿವ ನೀರಿಗೆ ಅನುಭವಿಸುತ್ತಿರುವ ತೊಂದರೆಯಿಂದ ಬೇಸತ್ತ ಜನಸಾಮಾನ್ಯರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರೋಸಿ ಹೋಗಿದ್ದಾರೆ. ಕನ್ನಾಳ ಗ್ರಾಪಂ ಕೇಂದ್ರ ಸ್ಥಾನದಲ್ಲಿಯೇ ಕುಡಿವ ನೀರಿನ ಸಮಸ್ಯೆ ನೀಗಿಸಲು ಆಡಳಿತ ಮಂಡಳಿ ತಿಣುಕಾಟ ನಡೆಸಿದ್ದು ಇನ್ನುಳಿದ ಹಳ್ಳಿಗಳನ್ನು ದೇವರೇ ಕಾಪಾಡಬೇಕು.
ಸದಸ್ಯನ ತಕರಾರು: 2010-11ರ ಜಿಪಂ ಎನ್ಆರ್ಡಿಡಬ್ಲೂ ಯೋಜನೆಯಡಿಯಲ್ಲಿ 3 ಲಕ್ಷ ವೆಚ್ಚದಲ್ಲಿ ಹಳ್ಳದ ಸಮೀಪ ಕೊಳವೆಬಾವಿ ಕೊರೆಯಿಸಿ ಗ್ರಾಮಕ್ಕೆ ಕುಡಿವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸದ್ರಿ ನೀರನ್ನು ಗ್ರಾ.ಪಂ. ಸದಸ್ಯ ವೆಂಕೋಬ ಎನ್ನುವಾತ ತನ್ನ ಹೊಲಗಳಿಗೆ ನೀರು ಹಾಯಿಸಿಕೊಂಡು ಗ್ರಾಮಕ್ಕೆ ಸರಬರಾಜು ಮಾಡುವ ನೀರನ್ನು ಸ್ಥಗಿತಗೊಳಿಸಿ ಪದೇ ಪದೇ ಗ್ರಾಮಸ್ಥರೊಂದಿಗೆ ತಗಾದೆ ತೆಗೆಯುತ್ತಿದ್ದಾರೆಂದು ಅಲ್ಲಿನ ಜನರು ಆರೋಪಿಸಿದ್ದಾರೆ.
ಪರಿಶೀಲನೆ: ಕೊಳವೆಬಾವಿ ಇರುವ ಸ್ಥಳವನ್ನು ಪರಿಶೀಲಿಸಿದ ಇಒ, ಕೂಡಲೇ ಪಟ್ಟಾ ಭೂಮಿಯಲ್ಲಿ ಸರ್ಕಾರಿ ಕೊಳವೆಬಾವಿಗಳನ್ನು ಕೊರೆಯಿಸಿದ ಬಗ್ಗೆ ಗ್ರಾಪಂ ಮೂಲಕ ಮಾಹಿತಿ ನೀಡಿ ಎಂದು ಸ್ಥಳದಲಿದ್ದ ಪಿಡಿಒ ಸರೋಜಮ್ಮಗೆ ಸೂಚಿಸಿದರು. ಗ್ರಾಪಂ ಸದಸ್ಯ ವೆಂಕೋಬನೊಂದಿಗೆ ಮಾತನಾಡಿ, 2 ತಿಂಗಳು ನೀರು ಸರಬರಾಜು ಮಾಡುವಂತೆ ಓಲೈಸಿದರು.
ಮುಂದಿನ ದಿನಗಳಲ್ಲಿ ಸ್ಕೇರ್ ಸಿಟಿ ಅನುದಾನದಡಿಯಲ್ಲಿ ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ ಹಾಗೂ ಪೈಪ್ಲೈನ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಇಒ ತಿಳಿಸಿದರು. ಖಾಜಾಹುಸೇನ್, ಜೆಇ ಮಹೆಬೂಬ್, ನಾಗಮ್ಮ ಗೌಂಡಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.