ರಾಯಚೂರು

ವ್ಯಕ್ತಿತ್ವ ವಿಕಸನ ಶಿಬಿರಗಳಿಂದ ನಾಯಕತ್ವ ಗುಣ: ಮಿಶ್ರಾ

Published On :

ಶಹಾಬಾದ್: ವ್ಯಕ್ತಿತ್ವ ವಿಕಸನ ಕಾರ್ಯಗಾರಗಳು ಉತ್ತಮ ಜೀವನ, ನಾಯಕತ್ವ ಗುಣ ಕಲಿಸುವುದಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಾಯಕಾರಿಯಾಗುತ್ತವೆ ಎಂದು ಸೇಡಂನ ಸೃಷ್ಟಿ ಲರ್ನಿಂಗ್ ಶಾಲೆಯ ಉದಯಕುಮಾರ ಮಿಶ್ರಾ ಹೇಳಿದರು.
ಪಟ್ಟಣದ ಚವ್ಹಾಣ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರವು ಸ್ಥಳೀಯ ಯುವಕರಿಗಾಗಿ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿ ಆ ಗುರಿ ಸಾಧನೆಗೆ ಉತ್ತಮ ಪ್ರಯತ್ನ ನಡೆಸಿ ಅದರಲ್ಲಿ ಸಫಲತೆ ಹೊಂದಬೇಕು. ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈಲ್ವೆ ಶಾಲೆ ಮುಖ್ಯಗುರು ಸಿ.ಐ. ಮಠಪತಿ, ಸಂಸ್ಥೆ ಅಧ್ಯಕ್ಷ ಅರವಿಂದ ಚವ್ಹಾಣ, ಗುರುಲಿಂಗ ವಂಟೂರ ಇದ್ದರು. ಶಿಕ್ಷಕರಾದ ಮಮತಾ ವಾಲಿ, ಶೋಭಾ ಹೆಬ್ಬಾಳ, ಮೇರಿ ಸೋಮನ, ಪದ್ಮಿನಿ ಭಂಕೂರ, ರೇಷ್ಮಾ ಬೇಗಂ, ದಾಮೋಧರ ಭಟ್, ವೀರೇಶ ವಂಟೂರ ಸೇರಿದಂತೆ ಮತ್ತಿತರರು ಇದ್ದರು. ಸಿದಮ್ಮ ಮಾಲಗತ್ತಿ ಸ್ವಾಗತಿಸಿದರು, ಅರ್ಚನಾ ಸೂರ್ಯವಂಶ ನಿರೂಪಿಸಿದರು, ವಾಸುದೇವ ಚವ್ಹಾಣ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.