ಮಹಿಳೆಯರ ರಕ್ಷಣೆಗೆ ಇಲಾಖೆ ಸಿದ್ಧ: ಪಿಎಸ್ಐ ಸಂಗಮೇಶ
ಮುದಗಲ್: ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು ಬಾಲಕಿಯರು, ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ತಮಗೆ ಆಗುವ ತೊಂದರೆಯನ್ನು ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕೆಂದು ಮುದಗಲ್ ಠಾಣಾ ಪಿಎಸ್ಐ ಸಂಗಮೇಶ ಶಿವಯೋಗಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದ ವಿದ್ಯಾರ್ಥಿನಿಯರ, ಮಹಿಳೆಯರ ಸಭೆಯಲ್ಲಿ ಮಾತನಾಡಿ, ಮಹಿಳೆಯರಿಗಾಗಿ ವಿಶೇಷ ಕಾನೂನುಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆದರೆ ಕಾನೂನು ದುರ್ಬುಳಕೆ ಆಗಬಾರದು ಎಂದರು.
ಇಲಾಖೆ ಮಾಹಿತಿ ಕೊಡಿ: ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳ ಕುರಿತು ಮಾಧ್ಯಮದ ಮೂಲಕ ಬಹಿರಂಗವಾಗುತ್ತಿದೆ. ಪೊಲೀಸ್ ಇಲಾಖೆ ಮಹಿಳೆಯರ ರಕ್ಷಣೆಗೆ ಕಟಿಬದ್ಧವಾಗಿದ್ದು, ಮಹಿಳೆಯರು ತಮ್ಮ ಮೇಲಿನ ಕಿರುಕುಳದ ಕುರಿತು ಮಾಹಿತಿಯನ್ನು ಇಲಾಖೆಗೆ ಒದಗಿಸಬೇಕು.
ಪೊಲೀಸ್ ಇಲಾಖೆ ಸ್ಥಳೀಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮತ್ತು ಸರ್ಕಾರಿ ಶಾಲಾ- ಕಾಲೇಜುಗಳಿಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲು ಪತ್ರ ಬರೆಯುವ ಮೂಲಕ ಕ್ರಮ ಕೈಕೊಳ್ಳಲಾಗುವದು. ಅತ್ಯಾಚಾರ ಪ್ರಕರಣಗಳಲ್ಲಿ ಹೆಸರನ್ನು ಬಹಿರಂಗಪಡಿಸದೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು. ವಿಚಾರಣೆಯ ಪದ್ಧತಿಯನ್ನು ಕೂಡ ತಿಳಿಸಿದರು.
ಶಾಲಾ- ಕಾಲೇಜು ಬಳಿ ನಿಗಾಯಿಡಿ: ಸಭೆಯಲ್ಲಿದ್ದ ಕೆಲವು ಮಹಿಳೆಯರು ಶಾಲಾ- ಕಾಲೇಜು ಬಿಡುವ ಸಮಯದಲ್ಲಿ ಪ್ರಾರಂಭದ ನಂತರ ಪೊಲೀಸರು ಆ ಪ್ರದೇಶದಲ್ಲಿ ಹೆಚ್ಚು ಸಂಚರಿಸಬೇಕೆಂದು ಮನವಿ ಮಾಡಿದರು.
ವೇದಿಕೆ ಮೇಲೆ ಎಎಸ್ಐ ಈರಣ್ಣ, ಮಹಿಳಾ ಮುಖ್ಯ ಪೊಲೀಸ್ ಪೇದೆ ರತ್ನಮ್ಮ ಉಪಸ್ಥಿತರಿದ್ದರು. ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಈರಣ್ಣ ಮಾತನಾಡಿದರು. ಅನಿತಾ, ಶಾಂತಮ್ಮ, ಕವಿತಾ, ಲಕ್ಷ್ಮೀ, ವಿಜಯಲಕ್ಷ್ಮೀ, ಹುಲಿಗೆಮ್ಮ, ಯಲ್ಲಮ್ಮ, ಮಹಿಳಾ ವಸತಿ ನಿಲಯದ ಮೇಲ್ವಿಚಾರಕಿ ಭುವನೇಶ್ವರಿ, ಶಾಂತಮ್ಮ ಹೂಗಾರ, ವಸತಿ ನಿಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

