ರಾಯಚೂರು

ಸೊಳ್ಳೆ ನಿಯಂತ್ರಣದಿಂದ ಡೆಂಘೀ ತಡೆ: ಆರೋಗ್ಯಾಧಿಕಾರಿ ಡಾ. ನಾಗರಾಜ

Published On :

ಸಿಂಧನೂರು: ನೀರು ಸಂಗ್ರಹಿಸುವ ಸಲಕರಣೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಸೊಳ್ಳೆಗಳನ್ನು ನಾಶ ಪಡಿಸಲು ಸಾಧ್ಯ. ಇದರಿಂದ ಡೆಂಘೀ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಯಬಹುದಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ ಬಿ. ಪಾಟೀಲ ಹೇಳಿದರು. ಡೆಂಘೀ ಉಲ್ಬಣ ಹಿನ್ನೆಲೆಯಲ್ಲಿ ತಾಲೂಕಿನ ಆರ್.ಎಚ್. ನಂ.1 ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಿದರು. ಡೆಂಘೀ ಶಂಕಿತ ವ್ಯಕಿಗಳು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಈಗಾಗಲೇ ತಾ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ಲೇಟ್‌ಲೇಟ್ ಕೌಂಟ್ ಮಷೀನ್  ಅಳವಡಿಸಲಾಗಿದೆ. ತಾಲೂಕಾಡಳಿತ ತಾ. ಸಾರ್ವಜನಿಕ ಆಸ್ಪತ್ರೆಯಲ್ಲಿ ಗ್ರಾಪಂ ಆರ್.ಎಚ್. ನಂ-1, ಅಲಬನೂರ, ಬಾದರ್ಲಿ ಇವರ ಸಹಕಾರದೊಂದಿಗೆ ಗ್ರಾಮದಲ್ಲಿ ಡೆಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಪಂನಿಂದ ಧೂಮೀಕರಣ ಕೈಗೊಳ್ಳಲಾಗಿದ್ದು, ಮುಂದಿನ ನಾಲ್ಕು ವಾರಗಳ ಕಾಲ ಮುಂದುವರಿಸಲು ಸೂಚಿಸಲಾಗಿದೆ ಎಂದರು. ಜಿಲ್ಲಾ ಕೀಟ ಶಾಸ್ತ್ರಜ್ಞ ಪರುಶರಾಮ ನಾಯಕ, ಗ್ರಾಪಂ ಅಧ್ಯಕ್ಷೆ ಶಾರದಾ ಬಿಸ್ವಾಸ್, ಉಪಾಧ್ಯಕ್ಷೆ ಹನುಮಂತಿ, ತಾಪಂ ಸದಸ್ಯೆ ಹೇಮಲತಾ ಸರ್ಕಾರ, ಈಶ್ವರ್ ದಾಸಪ್ಪನವರ, ಶಿವಪ್ಪ, ಜಿ. ರಂಗನಾಥ, ಎ.ಐ. ಪಾಟೀಲ್, ಪಂಕಜ, ತುಳಸಿ ಮಂಡಲ, ಆರೋಗ್ಯ ಸ್ವಾಮಿ, ಸುನೀಲ್ ಮೇಸ್ತ್ರಿ, ಭೀಮಣ್ಣ, ಶೈಲಜಾ, ಡೇ, ಚನ್ನಸುಬ್ಬಾರೆಡ್ಡಿ, ವಿರುಪನಗೌಡ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.