ಕಾಮುಕರ ಹೆಡಮುರಿ ಕಟ್ಟುತ್ತೇವೆ: ಉಮಾಶ್ರೀ
ಗುಲ್ಬರ್ಗ: ಸರ್ಕಾರ ಅತ್ಯಾಚಾರ ಪ್ರಕರಣಗಳನ್ನು ಸಹಿಸೋದಿಲ್ಲ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಹಿಳಾ- ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಭಾನುವಾರ ಜೇವರ್ಗಿ ತಾಲೂಕಿನ ಕಾಸರ ಬೋಸ್ಗಾ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಅತ್ಯಾಚಾರ ಪೀಡಿತೆ 6 ವರ್ಷದ ಬಾಲಕಿಗೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಿಳೆಯರು ಕಾಮುಕರಿಗೆ ಹೆದರಬೇಕಾಗಿಲ್ಲ, ಕಾಮುಕರು ಎಷ್ಟೇ ಪ್ರಭಾವಿಗಳಿದ್ದರೂ ಅವರ ಹೆಡಮುರಿ ಕಟ್ಟುತ್ತೇವೆ ಎಂದು ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಸಚಿವರು ಅತ್ಯಾಚಾರಕ್ಕೊಳಗಾದ ಬಾಲಕಿಗೆ ಇರಳುಗಣ್ಣು ಸಮಸ್ಯೆ ಇರುವುದನ್ನು ಗಮನಿಸಿ ನೆರವಿಗೆಂದು ಮಕ್ಕಳ ರಕ್ಷಣಾ ಸಮಿತಿಯಿಂದ 10 ಸಾವಿರ ನಗದು ನೀಡಿದರು. ಡಾ. ಅಜಯಸಿಂಗ್ ಅವರನ್ನು ಉದ್ದೇಶಿಸಿ ಸದರಿ ಕುಟುಂಬಕ್ಕೆ ಆಸರೆ ಯೋಜನೆಯಲ್ಲಿ ಮನೆ ನೀಡುವಂತೆಯೂ ಉಮಾಶ್ರೀ ಹೇಳಿದರು.
ಆಳಂದ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ 7 ತಿಂಗಳ ಹಿಂದೆ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಕುಟುಂಬ ವರ್ಗವನ್ನೂ ಖುದ್ದು ಭೇಟಿ ಮಾಡಿದ ಉಮಾಶ್ರೀ, ಈ ಪ್ರಕರಣದಲ್ಲಿಯೂ ನೊಂದವರಿಗೆ ಸಾಂತ್ವನ ಹೇಳಿದರು. ಕಾಮುಕರ ಬಂಧಿಸಿ ಶಿಕ್ಷೆಗೊಳಪಡಿಸಲಾಗುತ್ತದೆ ಎಂದರು. ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಶಾಸಕ ಡಾ. ಅಜಯಸಿಂಗ್, ಎಂಎಲ್ಸಿ ಜಯಮಾಲಾ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

