ರಾಯಚೂರು

ಸಚಿವ ಕೃಷ್ಣ ಬೈರೇಗೌಡರ ಗಮನಕ್ಕೆ ತರುವೆ: ಶಾಸಕ

Published On :

ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನ ರೈತರು ಬಿತ್ತನೆ ಮಾಡಿದ ಸೋಯಾಬಿನ್ ಬೀಜ ಮೊಳಕೆಯೊಡೆದಿಲ್ಲ. ಕೃಷಿ ಇಲಾಖೆಯಿಂದ ನೀಡಿದ ಕಳಪೆ ಮಟ್ಟದ ಸೋಯಾಬಿನ್ ಬೀಜದ ಕುರಿತು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತರಲಾಗುತ್ತದೆ ಎಂದು ಶಾಸಕ ಡಾ. ಉಮೇಶ ಜಾಧವ್ ತಿಳಿಸಿದರು.
ಪಟ್ಟಣದ ಹೊರವಲಯದ ಶಂಕರ ಭಗವಂತಿ ರೈತನ ಹೊಲದಲ್ಲಿ ಸೋಯಾಬಿನ್ ಬೆಳೆಯನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕೆಲವು ರೈತರ ಹೊಲಗಳಲ್ಲಿ ಬಿತ್ತನೆ ಮಾಡಿದ ಸೋಯಾಬಿನ್ ಮೊಳಕೆಯೊಡಿದಿಲ್ಲವೆಂದು ರೈತರು ನನ್ನ ಗಮನಕ್ಕೆ ತಂದಿದ್ದರು. ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಹಾಗೂ ಕೃಷಿ ವಿಜ್ಞಾನಿಗಳು ತಾಲೂಕಿಗೆ ಕಳೆದ ಶನಿವಾರ ಭೇಟಿ ನೀಡಿ ರೈತರ ಹೊಲಗಳಲ್ಲಿ ಬೆಳೆಯ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ವರದಿಯ ಬಗ್ಗೆ ಸೋಮವಾರ ಅಧಿವೇಶನದಲ್ಲಿ ಪ್ರಸ್ತಾಪಿಸಿ ರೈತರಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಾಯಿಸಲಾಗುವುದೆಂದು ತಿಳಿಸಿದರು.
ತಾಲೂಕಿನ ಐನೋಳಿ, ಭೋಗಾಲಿಂಗದಳ್ಳಿ ಮತ್ತು ಚಂದಾಪುರ, ದೇಗಲಮಡಿ, ಪೋಲಕಪಳ್ಳಿ, ಅಣವಾರ, ಚಿಮ್ಮಾಇದಲಾಯಿ ಇನ್ನಿತರ ಗ್ರಾಮಗಳಲ್ಲಿ ರೈತರು ಬಿತ್ತನೆ ಮಾಡಿದ ಸೋಯಾಬಿನ್ ಬೆಳೆ ಪ್ರಗತಿಯಾಗಿಲ್ಲ. ಹೀಗಾಗಿ ರೈತರು ಸೋಯಾಬಿನ್ ಬೆಳೆಯ ಬಗ್ಗೆ ಆತಂಕ ಸೃಷ್ಟಿಯಾಗಿದೆ. ತಾಲೂಕಿಗೆ ಸೋಯಾಬಿನ್ ಬೀಜ ವಿತರಣೆ ಮತ್ತು ಎಷ್ಟು ಎಕರೆ ಜಮೀನುದಲ್ಲಿ ಬಿತ್ತನೆ ಮಾಡಲಾಗಿದೆ ಎಂಬುದರ ಬಗ್ಗೆ ತಾಲೂಕು ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನ ನಡೆಸುತ್ತೇನೆಂದು ಶಾಸಕ ಡಾ. ಉಮೇಶ ಭರವಸೆ ನೀಡಿದರು.



ನೂರಾರು ಎಕರೆ ಬೆಳೆ ನಷ್ಟ
ಏಕನಾಥ ಏಟೆ ಅವರಿಗೆ ಸೇರಿದ 8 ಎಕರೆಯಲ್ಲಿ 2 ಎಕರೆ ಮಾತ್ರ ನಾಟಿಯಾಗಿದ್ದು, ಉಳಿದ ಆರು ಎಕರೆ ನಾಟಿಯಾಗಿಲ್ಲ. ಶ್ರೀಮಂತ ಸಿದ್ದಪ್ಪ ರಾಯೆ ಅವರ 11 ಎಕರೆ, ಅಮೃತ ಮೋಧೆ ಒಂದುವರೆ ಎಕರೆ, ಸುರೇಂದ್ರ ಪಾಟೀಲ 16 ಎಕರೆ, ಹಣಮಂತ ಪಾಟೀಲ 6 ಎಕರೆ ಬೆಳೆ ನಾಟಿಯಾಗಿಲ್ಲ ಎಂದರು. ಹೀಗೆ ಪಟ್ಟಿ ಹೇಳುತ್ತಾ ಹೋದರೆ ನೂರಾರು ಎಕರೆ ಬೆಳೆ ನಷ್ಟವಾಗಿದೆ ಎಂದರು. ಖಜೂರಿಯ ಮಲ್ಲಿನಾಥ ಅವುಟೆ 6 ಎಕರೆ, ನಿರಗುಡಿ ಗ್ರಾಮದ ಯಶ್ವಂತ ನಾಗೂರೆ 2, ಮಹಾಂತಪ್ಪ ಕಾಶಿನಾಥ ನಾಗೂರೆ ನಿರಗುಡಿ 2, ಅಣೂರ ಗ್ರಾಮದ ರಾಜಪ್ಪ ನಾಗಣ್ಣ ಅವರ 3, ನಾಗಮ್ಮ ಅಣೂರೆ 4 ಎಕರೆ ಬಿತ್ತನೆ ಸೋಯಾಬಿನ್ ನಾಟಿಯಾಗಿಲ್ಲ ಎಂದು ಅಳಲು ತೋಡಿಕೊಂಡರು. ನ್ಯಾಯವಾದಿ ಗುರು ಎಂ. ಪಾಟೀಲ ಆಗಮಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.