ಮೀನಾಕ್ಷಿ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ
ಸಿಂಧನೂರು: ನಗರದ ಆದರ್ಶ ಕಾಲೋನಿಯಲ್ಲಿರುವ ಮೀನಾಕ್ಷಿ ಪಬ್ಲಿಕ್ ಶಾಲೆಯಲ್ಲಿ ಕೀರ್ತಿ ಹಾಗೂ ಕಿಡ್ಜೀ ಶಾಲೆಗಳ ಆಶ್ರಯದಲ್ಲಿ 15ನೇ ಕಾರ್ಗಿಲ್ ವಿಜಯೋತ್ಸವವನ್ನು ಶಾಲೆಯ ವಿದ್ಯಾರ್ಥಿಗಳು, ಆಡಳಿತ ವರ್ಗ ಹಾಗೂ ಶಿಕ್ಷಕ ವೃಂದವು ಮೇಣದ ಬತ್ತಿಯನ್ನು ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ತ್ಯಾಗ ಬಲಿದಾನ ಮಾಡಿದ ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿತು.
ಶಾಲೆಯ ಆಡಳಿತಾಧಿಕಾರಿ ಚಂದ್ರಕಲಾ ಪ್ರಕಾಶ್ ಮಾತನಾಡಿ, 1999ರ ಯುದ್ಧದಲ್ಲಿ ಭಾಗವಹಿಸಿ ವಿಜಯದಲ್ಲಿ ತಮ್ಮದೇ ಕೊಡುಗೆ ನೀಡಿದ ಅವರ ಸಹೋದರ ಈಗ ಕರ್ನಲ್ ಆಗಿ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಲೋಹಿತ್ ಕೀರ್ತಿ ಹಾಗೂ ಅವರ ಸ್ನೇಹಿತ ವೆಂಕಟೇಶ ಕುಲಕರ್ಣಿ ಅವರನ್ನು ನೆನೆದು ಭಾವುಕರಾಗಿ ಮಕ್ಕಳಿಗೆ ಸೇನೆಯ ಮಹತ್ವ ಮತ್ತು ದೇಶ ಸೇವೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ಯಾಮಸುಂದರ್ ಕೀರ್ತಿ ಮಾತನಾಡಿ, ವೀರಯೋಧರ ತ್ಯಾಗದ ಮನೋಭಾವವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡಲ್ಲಿ ಮುಂದಿನ ಭವ್ಯ ಭಾರತವನ್ನು ನಿರ್ಮಿಸಬಹುದು.
ಪಾಕಿಸ್ತಾನದ ಕುತಂತ್ರದ ಯುದ್ಧಕ್ಕೆ ತಕ್ಕ ಉತ್ತರ ನೀಡಿದ ನಮ್ಮ ಯೋಧರು ನಿಜಕ್ಕೂ ಭಾರತಾಂಬೆಯ ಹೆಮ್ಮೆಯ ಪುತ್ರರು ಎಂದರು. ಸಂಸ್ಥೆಯ ನಿರ್ದೇಶಕ ಪ್ರಕಾಶ್ ಝುಂಜುರವಾಡ, ಮುಖ್ಯೋಪಾದ್ಯಾಯ ವೇಣುಗೋಪಾಲ್, ಶಿಕ್ಷಕರಾದ ರಮೇಶ ಉಪಸ್ಥಿತರಿದ್ದರು. ಶಿಕ್ಷಕ ವೀರೇಶ ನಿರೂಪಿಸಿದರು, ಶಿಕ್ಷಕಿ ಅನ್ನಪೂರ್ಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

