ಸಿಂಧನೂರು ಜನತೆಗೆ ಅಗತ್ಯ ಕುಡಿವ ನೀರು ಒದಗಿಸುವಲ್ಲಿ ವಿಫಲ: ನದೀಮುಲ್ಲಾ
ಕ.ಪ್ರ. ವಾರ್ತೆ ್ಣ ಸಿಂಧನೂರು ್ಣ ಜೂ.2
ಜನತೆಗೆ ಸೌಕರ್ಯ ಒದಗಿಸಲು ವಿಫಲವಾಗಿರುವ ನಗರಸಭಾ ಅಧ್ಯಕ್ಷ ಜಾಫರ್ ಜಾಹಗೀರದಾರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಮಾಜಿ ಉಪಾಧ್ಯಕ್ಷ ಎಂ.ಡಿ. ನದೀಮ್ಮುಲ್ಲಾ ಒತ್ತಾಯಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರೊಂದಿಗೆ ನಗರಸಭೆ ಮುಂದೆ ಅನಿರ್ಧಿಷ್ಟ ಧರಣಿ ಆರಂಭಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದ ಪ್ರತಿಯೊಂದು ಚರಂಡಿಗಳು ಕಸದಿಂದ ತುಂಬಿ ತುಳುಕುತ್ತಿವೆ. ಸರಿಯಾಗಿ ಕಸ ವಿಲೇವಾರಿ ಮಾಡದೇ ಇರುವುದರಿಂದ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ನಗರದ ಪ್ರಮುಖ ವಾರ್ಡ್‌ಗಳಲ್ಲಿ ಬೀದಿ ದೀಪದ ಸಮಸ್ಯೆ, ಅಲ್ಲಲ್ಲಿ ಕಸದ ರಾಶಿ ತುಂಬಿದೆ. ನಗರ ಮಾಲಿನ್ಯದಿಂದ ತುಂಬಿ ತುಳುಕುತ್ತಿದೆ. ಈ ಹಿಂದೆ ತಾವು ವಿರೋಧ ಪಕ್ಷದಲ್ಲಿದ್ದಾಗ ಸಮಸ್ಯೆಗಳ ಬಗ್ಗೆ ಕೂಗಾಡಿ ಪ್ರಚಾರ ಗಿಟ್ಟಿಸಿಕೊಂಡು ಅಧಿಕಾರ ಪಡೆದ ಅವರಿಗೆ ನಗರದ ಸಮಸ್ಯೆಗಳು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಉಡಾಫೆ: ನಗರದ ಜನತೆಗೆ ಅಗತ್ಯ ಕುಡಿವ ನೀರು ಒದಗಿಸುವಲ್ಲಿ ಇವರಿಂದ ಸಾಧ್ಯವಾಗಿಲ್ಲ. ಎಸಿ ಚೇಂಬರ್‌ನಲ್ಲಿ ಕುಳಿತು ಉಡಾಫೆ ಮಾತುಗಳನ್ನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಕೊಠಡಿ ಬಿಟ್ಟು ಹೊರಬಂದರೆ ಸಾಮಾನ್ಯ ಜನರ ಕಷ್ಟ ಕಾರ್ಪಣ್ಯಗಳು ಅರ್ಥವಾಗುತ್ತವೆ. ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಸ್ವಚ್ಛತೆಗೆ ಮುಂದಾಗಿ: ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಿಕೊಂಡು, ಚರಂಡಿ ಸ್ವಚ್ಛತೆಗೆ ಮುಂದಾಗಬೇಕು. ತುಂಗಭದ್ರಾ ಜಲಾಶಯದಿಂದ ನೀರು ಹರಿಸಿ, ನಗರದ ಜನತೆಗೆ ಸಮರ್ಪಕ ನೀರು ಒದಗಿಸಬೇಕು. ತಕ್ಷಣ ಕಸ ವಿಲೇವಾರಿಗೆ ಮುಂದಾಗಬೇಕು. ಕೆಟ್ಟು ನಿಂತ ಜೆಸಿಬಿ ದುರಸ್ತಿ ಮಾಡಿಸಬೇಕೆಂದು ಆಗ್ರಹಿಸಿದರು. ಕರಾರೈ ಸಂಘದ ಅಮೀನ್ ಪಾಷಾ ದಿದ್ದಿಗಿ, ಹನುಮಂತಪ್ಪ ಕ್ಯಾತನಟ್ಟಿ, ಸುರೇಶ ಜಾದವ್, ಸೋಮಣ್ಣ, ಅಹ್ಮದ್ ಪಾಟೀಲ್, ವೀರೇಶ ಬಂಗಿ, ಎಚ್.ಎನ್. ಬಡಿಗೇರ್, ನಗರಸಭಾ ಸದಸ್ಯರಾದ ಲಿಂಗರಾಜ ಹೂಗಾರ, ಶರಣಬಸವ, ಅಜಿತ್ ಓಸ್ತವಾಲ್, ಖಾದರ್ ಬಾಷಾ, ನಾಗರಾಜ ಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

