ಕುರುಕುಂದಾ ಗ್ರಾಮಪಂಚಾಯ್ತಿ ಸ್ಥಾಪನೆಗಾಗಿ ಒತ್ತಾಯಿಸಿ ಮನವಿ
ರಾಯಚೂರು: ಮಾನವಿ ತಾಲೂಕಿನ ಕುರುಕುಂದಾ ಗ್ರಾಪಂ ಸ್ಥಾಪನೆಗೆ ಒತ್ತಾಯಿಸಿ ಕುರುಕುಂದಾ ಗ್ರಾಪಂ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಿದರು.
ಕುರುಕುಂದಾ ಗ್ರಾಮ, ಪಟಕನದೊಡ್ಡಿ ಮತ್ತು ವಡವಟ್ಟಿ ಗ್ರಾಮಗಳು ಸದ್ಯ ಮಲ್ಲಟ್ ಗ್ರಾಪಂ ವ್ಯಾಪ್ತಿಯಲ್ಲಿದ್ದು, ಮಲ್ಲಟ್ ಗ್ರಾಮದಿಂದ 13 ಕಿ.ಮೀ. ದೂರದಲ್ಲಿವೆ. ಹಾಗೆಯೇ ಕುರುಕುಂದಾ ಗ್ರಾಮವು ತಾಪಂ ಕ್ಷೇತ್ರವಾಗಿದ್ದು, 2117 ಜನಸಂಖ್ಯೆ ಹೊಂದಿದೆ. ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ದೂರಿದರು.
ಮಲ್ಲಟ ಗ್ರಾಪಂ ದೂರವಿದ್ದು, ಅದರಿಂದ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಸೌಲಭ್ಯಗಳ ದೊರಕಿಸುವಿಕೆಯಲ್ಲಿ ಹಿನ್ನಡೆಯಾಗಿದೆ. ಅದೇ ರೀತಿ ಪಟಕನದೊಡ್ಡಿ, ಬುಳ್ಳಾಪುರ, ವಡವಟ್ಟಿ, ಕಲಂಗೇರಾ ಸೇರಿದಂತೆ ಒಟ್ಟು ಐದು ಗ್ರಾಮಗಳನ್ನು ಸೇರಿಸಿ ಗ್ರಾಪಂ ರಚಿಸುವಂತೆ ಒತ್ತಾಯಿಸಿದರು.
ಈ ಎಲ್ಲ ಗ್ರಾಮಗಳು ಕವಲ 5 ಕಿ.ಮೀ. ಅಂತರದಲ್ಲಿದ್ದು ಕುರುಕುಂದಾದಲ್ಲಿ ಗ್ರಾಪಂ ಸ್ಥಾಪಿಸಿದರೆ ಅಭಿವೃದ್ಧಿಗೆ ಪೂರಕವಾಗಲಿದೆ. ಸಿರವಾರ-ಹಟ್ಟಿ ರಸ್ತೆಯಲ್ಲಿರುವ ಕುರುಕುಂದಾ ಗ್ರಾಮವು ಎಲ್ಲ ರೀತಿಯಿಂದ ಸಂಪರ್ಕ ವ್ಯವಸ್ಥೆ ಹೊಂದಿದೆ. ಕಾರಣ ಕುರುಕುಂದಾ ಗ್ರಾಮಕ್ಕೆ ಕೂಡಲೇ ಗ್ರಾಪಂ ಸ್ಥಾಪನೆಗೆ ಪೂರಕ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಕುರುಕುಂದಾ ಗ್ರಾಮದಲ್ಲಿ ಈಗಾಗಲೇ ಒಂದು ಪ್ರೌಢಶಾಲೆ, 2 ಹಿರಿಯ ಪ್ರಾಥಮಿಕ ಶಾಲೆಗಳು, 4 ಕಿರಿಯ ಪ್ರಾಥಮಿಕ ಶಾಲೆಗಳು, ಕಿರಿಯ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಗ್ರಂಥಾಲಯವನ್ನು ಹೊಂದಿದ್ದು ಗ್ರಾಪಂ ಸ್ಥಾಪನೆಗೆ ಅನುಕೂಲಕರ ಸ್ಥಳವಾಗಿದೆ ಎಂದು ತಿಳಿಸಿದರು.
ಆಡಳಿತಾತ್ಮಕ, ಭೌಗೋಳಿಕವಾಗಿ ಅನುಕೂಲಕರ ಸ್ಥಳದಲ್ಲಿರುವ ಕುರುಕುಂದಾದಲ್ಲಿ ಗ್ರಾಪಂ ಆರಂಭಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ವೀರನಗೌಡ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

