ನೀಲಗಲ್‌ಶ್ರೀ ಪಟ್ಟಾಧಿಕಾರ ವರ್ಷಾಚರಣೆ ಮಹೋತ್ಸವ
ರಾಯಚೂರು: ದೇವದುರ್ಗ ತಾಲೂಕಿನ ನೀಲಗಲ್ ಬ್ರಹನ್ಮಠದ ಶ್ರೀಗುರು ರೇಣುಕ ಶಾಂತಮಲ್ಲ ಶಿವಾಚಾರ್ಯರ ಗುರು ಪಟ್ಟಾಧಿಕಾರ ಮಹೋತ್ಸವದ ಪ್ರಥಮ ವರ್ಷಾಚರಣೆ ಕಾರ್ಯಕ್ರಮ ಹಾಗೂ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಜೂ.21ರಿಂದ ಮಲ್ಲಿನಾಯಕನದೊಡ್ಡಿಯಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದೇವದುರ್ಗ ತಾಲೂಕಿನ ನೀಲಗಲ್ ಬ್ರಹನ್ಮಠದ ಡಾ. ಶ್ರೀಪಂಚಾಕ್ಷರಿ ಶಿವಾಚಾರ್ಯರು, ಮಲ್ಲಿನಾಯಕನದೊಡ್ಡಿ ಗ್ರಾಮದ ಶ್ರೀಭಾಗ್ಯವಂತಿ ದೇವಸ್ಥಾನದಲ್ಲಿ ಜೂ.21ರಿಂದ 25ರವರೆಗೆ ದಿನವೂ ಸಂಜೆ 6ರಿಂದ 8 ರವರೆಗೆ ಆಧ್ಯಾತ್ಮಿಕ ಪ್ರವಚನ ಆಯೋಜಿಸಲಾಗಿದೆ ಎಂದರು.
ಜೂ.24ರಂದು ಶಿವಲಿಂಗ ನಂದಿ ಮೆರವಣಿಗೆ ಜೂ.25ರಂದು ಪೂಜಾ ಕಾರ್ಯಕ್ರಮ, ಗಂಗಾ ಗಣಪತಿ, ಸ್ವಸ್ತಿವಾಚನ, ಅಂಕುರಾರ್ಪಣ ಪಂಚಕಳಸ ನವಗ್ರಹ ಪ್ರತಿಷ್ಠಾಪನೆ ರುದ್ರಾಭಿಷೇಕ ಮತ್ತು ರುದ್ರಹೋಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
26ರಂದು ಪ್ರಾಣ ಪ್ರತಿಷ್ಠಾಪನೆ: ಜೂ.26ರಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶಿವಲಿಂಗ, ನಂದಿ ವಿಗ್ರಹಗಳ ಪ್ರತಿಷ್ಠಾಪನೆ ನಡೆಯಲಿದ್ದು, ಅಂದು ಬೆಳಗ್ಗೆ 11ಕ್ಕೆ ಶಿವಲಿಂಗ ಮತ್ತು ನಂದಿ ದೇವರಿಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳಿಂದ ಪ್ರಾಣ ಪ್ರತಿಷ್ಠಾಪನೆ ಮತ್ತು ನೂತನ ಈಶ್ವರ ದೇವಸ್ಥಾನದ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.
ಅಡ್ಡಪಲ್ಲಕ್ಕಿ ಮಹೋತ್ಸವ: 26 ರಂದು ಬೆ.11.30ಕ್ಕೆ ಶ್ರೀಗುರು ಪಟ್ಟಾಧಿಕಾರ ವಾರ್ಷಿಕ ಮಹೋತ್ಸವ ಹಾಗೂ ಧರ್ಮಸಭೆ ಆಯೋಜಿಸಿದ್ದು ಶ್ರೀರಂಭಾಪುರಿ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಶ್ರೀರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಶ್ರೀಮಠದ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು. ಈ ಸಂದರ್ಭದಲ್ಲಿ ಶೀರೇಣುಕ ಶಾಂತಮಲ್ಲ ಶಿವಾಚಾರ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

