ರಾಯಚೂರು

ಅಕಾಲಿಕ ಮಳೆ; ಹಾನಿ ಸಮೀಕ್ಷೆಗೆ ಅಧಿಕಾರಿಗಳ ದೌಡು

Published On :

ಹುಣಸಗಿ: ಸಮೀಪದ ಕೊಡೇಕಲ್ ಹೋಬಳಿ ವಲಯದ ಗ್ರಾಮಗಳಾದ ಮಾರನಾಳ, ಮಾರನಾಳ ಕ್ರಾಸ್, ಬ್ಯಾಲದಗಿಡದ ತಾಂಡಾ, ಅಮಾಪುರ(ಎಸ್.ಕೆ), ದಿಬ್ಬಿ ಕ್ಯಾಂಪ್ ಗ್ರಾಮಗಳಲ್ಲಿ, ಸುರಿದ ಧಾರಾಕಾರ ಅಕಾಲಿಕ ಆಲಿಕಲ್ಲು ಮಳೆಗೆ ಸಿಲುಕಿ ಪಶುಗಳು ಮತ್ತು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಪ್ರದೇಶಗಳಿಗೆ ವಿಶೇಷ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ಜಿಪಂ ಅಧಿಕಾರಿಗಳು ಭೇಟಿ ನೀಡಿ ಮಳೆಯಿಂದಾಗಿ ಹಾನಿ ಸಮೀಕ್ಷೆ ನಡೆಸಿದರು.
ಗ್ರಾಮಗಳಿಗೆ ಭೇಟಿ ನೀಡಿದ ವಿಶೇಷ ತಹಸೀಲ್ದಾರ ಸುರೇಶ ಚಾವ್ಲಾ ಜನರೊಂದಿಗೆ ಸಭೆ ನಡೆಸಿ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ವರದಿ ಬಂದ ನಂತರ ಮಳೆಯಿಂದಾದ ಹಾನಿಯ ನಷ್ಟದ ಅಂದಾಜು ತಿಳಿದು ಬರುತ್ತದೆ. ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಿಕೊಟ್ಟು ರೈತರಿಗೆ ಪರಿಹಾರ ದೊರಕಿಸಿಕೊಡಲಾಗುವುದೆಂದು ಭರವಸೆ ನೀಡಿದರು. ಉಪತಹಸೀಲ್ದಾರ ಮಹಾದೇವಪ್ಪಗೌಡ ಬಿರಾದಾರ, ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಕೇಸರ ಸಿಂಗ ಹಜಾರಿ, ಕಂದಾಯ ನಿರೀಕ್ಷಕ ಕಲ್ಲಪ್ಪ, ಪಿಡಿಒ ಬಿರಾದಾರ, ಕೃಷಿ ಅಧಿಕಾರಿಗಳು ಇದ್ದರು.
ತಾಲೂಕಾ ಆರೋಗ್ಯ ಅಧಿಕಾರಿಗಳ ಭೇಟಿ: ಹೊಲದಿಂದ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಧಾರಾಕಾರವಾಗಿ ಸುರಿದ ಆಲಿಕಲ್ಲು ಮಳೆಯಲ್ಲಿ ಸಿಲುಕಿ ಗಾಯಗೊಂಡಿರುವ ಬ್ಯಾಲದಗಿಡದ ತಾಂಡಾದ ರಾಮಪ್ಪ ಜಾಧವ ಮನೆಗೆ ಶನಿವಾರ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ರಾಜಾ ವೆಂಕಟಪ್ಪನಾಯಕ ಭೇಟಿ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.