ಚಿತ್ತಾಪುರದ ಪೆದ್ದು ಮಠದಲ್ಲಿ ಪ್ರವಚನ ಆರಂಭ
ಚಿತ್ತಾಪುರ: ಪುರಾಣ ಪ್ರವಚನಗಳು ಮನುಷ್ಯನ ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ಸೇಡಂದ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ನುಡಿದರು.
ಇಲ್ಲಿಯ ಪೆದ್ದು ಮಠದಲ್ಲಿ ದಿಗ್ಗಾಂವ ಸಿದ್ದವೀರ ಶಿವಾಚಾರ್ಯರ ನೇತೃತ್ವದಲ್ಲಿ ರೇಣುಕಾಚಾರ್ಯರ ಜಯಂತಿ ಅಂಗವಾಗಿ ಐದು ದಿನಗಳ ಕಾಲ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದ ಸಾನಿದ್ಯ ವಹಿಸಿ ಮಾತನಾಡಿ, ಇಂದು ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ನೈತಿಕ ಮಟ್ಟ ಕುಸಿದಿದೆ. ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಪುರಾಣ ಪ್ರವಚನಗಳು ಅಗತ್ಯ. ರೇಣುಕಾಚಾರ್ಯರು ಅಹಿಂಸೆ ಸತ್ಯ ಮಾರ್ಗದಿಂದ ಧರ್ಮವನ್ನು ಬೆಳೆಸಿದ್ದಾರೆ ಎಂದು ಹೇಳಿದರು. ದಿಗ್ಗಾಂವ ಪಂಚ ಗ್ರಹ ಹಿರೇಮಠದ ಸಿದ್ದವೀರ ಶ್ರೀ ನೇತೃತ್ವ ವಹಿಸಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಕಾರ್ಯಕ್ರಮ ಉದ್ಘಾಟಿಸಿದರು. ನ್ಯಾಯವಾದಿ ಚಂದ್ರಶೇಖರ ಅವಂಟಿ, ನಿವೃತ್ತ ಶಿಕ್ಷಕ ಚಂದ್ರಶೇಖರ ದಿಗ್ಗಾಂವಕರ್ ಮಾತನಾಡಿದರು. ಖ್ಯಾತ ಭರತನಾಟ್ಯ ಕಲಾವಿದೆ, ಜ್ಯೋತಿ ಬಳ್ಳಾರಿ, ಸಂಗೀತಾ ಕಲಾವಿದೆ ಶಿವಗಂಗಮ್ಮ ಭಜಂತ್ರಿ ಇದ್ದರು.
ಶಾಂತಕುಮಾರ ಪಾಟೀಲ್ ಬೆಣ್ಣೂರಕರ್ ಪ್ರವಚನ ಹೇಳಿದರು. ಸಂಗೀತ ಕಲಾವಿದ ಶರಣಯ್ಯ ಸ್ವಾಮಿ ಕೊಂಚೂರ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಮಳ್ಳಿ ತಬಲಾ ವಾದನ ನುಡಿಸಿದರು. ಶರಣು ಕಲ್ಕಮ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

