ರಾಯಚೂರು

ಎಲ್ಲ ರಂಗದಲ್ಲೂ ಯುಪಿಎ ಸರ್ಕಾರ ವಿಫಲ

Published On :

ಯಾದಗಿರಿ: ಕೇಂದ್ರದ ಯುಪಿಎ ಸರ್ಕಾರ ಗಡಿ ಭದ್ರತೆ, ಬೆಲೆಯೇರಿಕೆ, ಅಭಿವೃದ್ಧಿ ಹಾಗೂ ಎಲ್ಲ ರಂಗದಲ್ಲೂ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥರಾವ ಮಲ್ಕಾಪುರೆ ಹೇಳಿದರು.
ನಗರದ ವಿದ್ಯಾ ಮಂಗಲ ಕಾರ್ಯಲಯದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆ ನಿರ್ವಹಣಾ ಸಮಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸುಮಾರು 45 ವರ್ಷಗಳಿಂದ ಆಳಿದ ಕಾಂಗ್ರೆಸ್ ದೇಶದಲ್ಲಿ ಅಭಿವೃದ್ಧಿ ಮಾಡದೆ ಕೊಳ್ಳೆ ಹೊಡೆದಿದೆ. ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಬಾರಿ ಕಾಂಗ್ರೆಸ್ಸನ್ನು ಮತದಾರರು ತಿರಸ್ಕರಿಸಲಿದ್ದಾರೆ ಎಂದರು.
ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ್ ಧರಂಸಿಂಗ್ ಅವರು ಹೈದರಾಬಾದ್ ಕರ್ನಾಟಕದಲ್ಲಿ ಸುಮಾರು 40 ವರ್ಷಗಳಿಂದ ಇದ್ದಾರೆ. ಆಗ ಅಭಿವೃದ್ಧಿ ಮಾಡದಿರುವುದರಿಂದ ಹೈಕ ಭಾಗ ಹಿಂದುಳಿದಿದೆ ಎಂದರು.
ಜನರನ್ನ ದಾರಿ ತಪ್ಪಿಸುವ ಕೆಲಸ: ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಇದ್ದಾಗ ಬಿಜೆಪಿ ಸರ್ಕಾರ 371(ಜೆ) ಕಲಂ ವಿಧಾನಮಂಡದಲ್ಲಿ ಮಂಡಿಸಿ ಅದರ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಇಂದು ಖರ್ಗೆ ಮತ್ತು ಧರ್ಮಸಿಂಗ್ ಅವರೇ ಹೈಕ ಭಾಗಕ್ಕೆ 371(ಜೆ) ಕಲಂ ಜಾರಿಗೆ ತಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದ್ದು, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರನ್ನು ಈ ಬಾರಿ ಮತದಾರರು ಬೆಂಬಲಿಸಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಮೇ 16ರಂದು ವಿಜಯೋತ್ಸವ ಆಚರಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಶಿವನಗೌಡ ನಾಯಕ್, ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ, ಮುಖಂಡರಾದ ಅಶೋಕ ಗಸ್ತಿ, ದಯಾಘನ ಧಾರವಾಡಕರ್, ಜಿಲ್ಲಾಧ್ಯಕ್ಷ ವೀರಣಗೌಡ ಮಲ್ಲಾಬಾದಿ, ಚಂದ್ರಶೇಖರಗೌಡ ಮಾಗನೂರ, ಬಸನಗೌಡ ಬಾಗವಾಟ್, ಡಾ. ಶರಣಭೂಪಾಲ ರೆಡ್ಡಿ ನಾಯ್ಕಲ್, ದೇವರಾಜ ನಾಯಕ್, ನೀಲಕಂಠರಾಯ ಎಲ್ಹೇರಿ, ಡಾ. ಮಲ್ಲನಗೌಡ ಉಕ್ಕಿನಾಳ, ಬಸವರಾಜ ಖಂಡ್ರೆ, ವೇಣಗೋಪಾಲ ಜೇವರ್ಗಿ, ಮಲ್ಲಿಕಾರ್ಜುನ ಗುಳೇದ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ ಅಂಬಿಗೇರ, ಗೋಪಾಲ ದಾಸನಕೇರಿ, ತ್ರಿಶೋಲ ಹವಾಲ್ದಾರ್, ಯಲ್ಲಯ್ಯಾ ನಾಯಕ, ವೆಂಕಟರಡ್ಡಿ ಅಬ್ಬೆತುಮಕೂರ, ಚೆನ್ನಯ್ಯ ಮ್ಯಾಳಿಕೇರಿ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.