ರಾಯಚೂರು

ಮಹಿಳೆಯರ ಹಕ್ಕುಗಳಿಗಾಗಿ ಕಾನೂನು ತಿಳಿವಳಿಕೆ ಅಗತ್ಯ: ವಿಜಯಲಕ್ಷ್ಮೀ

Published On :

ಸಿಂಧನೂರು: ಅನಾದಿ ಕಾಲದಿಂದ ಆಧುನಿಕ ಯುಗದವರೆಗೆ ಮಹಿಳೆಯರು ಒಂದಿಲ್ಲ ಒಂದು ರೀತಿಯಿಂದ ಪುರುಷ ಪ್ರಧಾನ ಸಮಾಜದ ಕಪಿಮುಷ್ಠಿಯಲ್ಲಿ ಸಿಕ್ಕು ನಲುಗಿ ಹೋಗಿದ್ದಾರೆ ಎಂದು ಎಕ್ಸಲೆಂಟ್ ಕಾಲೇಜಿನ ಉಪನ್ಯಾಸಕಿ ವಿಜಯಲಕ್ಷ್ಮಿ ಗುರಿಕಾರ ತಿಳಿಸಿದರು.
ರಾಷ್ಟ್ರೀಯ ಮಹಿಳಾ ಒಕ್ಕೂಟದ ವತಿಯಿಂದ ನಗರದ ಅನಿಕೇತನ ಕಾಲೇಜಿನಲ್ಲಿ ಜರುಗಿದ ಮಹಿಳಾ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಶೈಲಜಾ ಪ್ರಭಾಕರ ಮಾತನಾಡಿ, ಮಹಿಳಾ ದಿನಾಚರಣೆ ಮುಖ್ಯ ಉದ್ದೇಶ ಪುರುಷರನ್ನು ದ್ವೇಷಿಸುವುದಲ್ಲ. ಬದಲಾಗಿ ಅವರ ಸಹಕಾರದಿಂದ ಹಕ್ಕುಗಳನ್ನು ಪಡೆಯುವುದು ಅಗತ್ಯವೆಂದರು.
ಹೆಣ್ಣನ್ನು ಗೌರವಿಸಿ: ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಪಾರ್ವತಿ ಅಕ್ಕ ಮಾತನಾಡಿ, ಮಹಿಳೆಯರು ಸಮಾಜನತೆ ಬಗ್ಗೆ ಮಾತನಾಡುವುದು ಮುಖ್ಯವಲ್ಲ. ಇನ್ನೊಂದು ಹೆಣ್ಣನ್ನು ಗೌರವಿಸಿದಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದರು. ವಿಜಯಲಕ್ಷ್ಮಿ ಕೆ. ಕರಿಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು.  
ಕಾರ್ಯಕ್ರಮದ ಅಧ್ಯಕ್ಷತೆ ರಾಷ್ಟ್ರೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಂ.ಸಿ. ಸೀತಮ್ಮ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರದ ಮುಖಂಡ ಕೆ. ಬಾಳಪ್ಪ, ನಗರಸಭೆ ಮಾಜಿ ಸದಸ್ಯೆ ಸರಸ್ವತಿ ಪಾಟೀಲ್, ಪ್ರಾಚಾರ್ಯ ವೈ.ಎಚ್. ರಕ್ಕಸಗಿ, ಪತ್ರಕರ್ತ ಡಿ.ಎಚ್. ಕಂಬಳಿ, ತಿಪ್ಪಯ್ಯಶೆಟ್ಟಿ, ವಿಜಯಲಕ್ಷ್ಮಿ ಕೆ. ಕರಿಯಪ್ಪ ಇದ್ದರು. ಉಪನ್ಯಾಸಕಿ ಗುಂಡಮ್ಮ ನಿರೂಪಿಸಿದರು. ಪ್ರಭಾವತಿ ಸ್ವಾಗತಿಸಿದರು. ಪಂಚಾಕ್ಷರಿ ಗವಾಯಿ ಸಂಗೀತ ಪಾಠ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ 5-6 ಜನ ಅಂಧರಿಗೆ ಒಕ್ಕೂಟದಿಂದ ಬಟ್ಟೆ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.