ಮೊಬೈಲ್(ನಾಟ್) ಅಲೋಡ್...
ರಾಯಚೂರು: ಲೋಕಸಭೆ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ಕೇಂದ್ರದೊಳಕ್ಕೆ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಇನ್ನುಳಿದವರು ಮೊಬೈಲ್‌ಗಳನ್ನು ಕೊಂಡೊಯ್ಯುವಂತಿಲ್ಲ ಎಂಬ ಆದೇಶ ಹೊರಡಿಸಲಾಗಿತ್ತು. ಆದರೆ ಆದೇಶ ಪಾಲನೆಯಾಗಿದ್ದು ಮಾತ್ರ ಅಷ್ಟಕ್ಕಷ್ಟೇ ಎನ್ನಬಹುದು.
ಎಲ್‌ವಿಡಿ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಬೆಳಗ್ಗೆ ಪೊಲೀಸರು ಎಲ್ಲರ ತಪಾಸಣೆ ನಡೆಸಿ, ಮೊಬೈಲ್‌ಗಳನ್ನು ಕೊಂಡೊಯ್ಯದಂತೆ ತಡೆದರು. ಆದರೆ ನಂತರದ ಕೆಲವೇ ಗಂಟೆಗಳಲ್ಲಿ ಮತ ಎಣಿಕೆ ಕೇಂದ್ರದೊಳಕ್ಕೆ ಬಹುತೇಕರ ಕೈಯಲ್ಲಿ ಮೊಬೈಲ್‌ಗಳಿದ್ದವು.
ಮಾಧ್ಯಮದವರಿಗೆ ಮತಗಳ ಎಣಿಕೆ ಪ್ರಕ್ರಿಯೆಯ ಮಾಹಿತಿ ದೊರೆಯುವ ಮುನ್ನವೇ ಮತಎಣಿಕೆ ಕೇಂದ್ರದ ಹೊರಗೆ ಜಮಾಯಿಸಿದ್ದವರಿಗೆ ಅಭ್ಯರ್ಥಿಯ ಮುನ್ನಡೆ, ಹಿನ್ನಡೆಯ ಮಾಹಿತಿ ಮೊಬೈಲ್ ಮೂಲಕವೇ ರವಾನೆಯಾಗುತ್ತಿತ್ತು. ಪರಿಣಾಮ ಕಾರ್ಯಕರ್ತರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು.
ರಾಜಕೀಯ ಪಕ್ಷದವರು, ಕೆಲ ಸಿಬ್ಬಂದಿ ಮೊಬೈಲ್ ಸಮೇತ ಕೇಂದ್ರದೊಳಗಿದ್ದು, ಫಲಿತಾಂಶದ ಅಪ್‌ಡೇಟ್ ಹೊರಗಿನವರಿಗೆ ನಿರಾತಂಕವಾಗಿ ನೀಡುತ್ತಿದ್ದದ್ದು ಕಂಡುಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

