ರಾಯಚೂರು

ಕೋಟೆ ಜೀರ್ಣೋದ್ಧಾರ ಚುರುಕು

Published On :

ಕ.ಪ್ರ. ವಾರ್ತೆ, ಮುದಗಲ್, ಮೇ 18
ಪಟ್ಟಣದ ಐತಿಹಾಸಿಕ ಮುದಗಲ್ ಕೋಟೆ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗಿದೆ.
ಕೋಟೆಯ ಮುಂಭಾಗದ ಬುರುಜುಗಳು, ಗೋಡೆಗಳು ನೆರೆಹಾವಳಿ ಸಮಯದಲ್ಲಿ ಬಿದ್ದುಹೋಗಿದ್ದವು. ಕೋಟೆಯ ಗೋಡೆಗಳ ಮೇಲೆ ಮುಳ್ಳಿನ ಕಂಟಿಗಳು ಬೆಳೆದು ಪಾಳು ಬಿದ್ದಿದ್ದವು. ಅಭಿವೃದ್ಧಿಗೆ ಮೈಸೂರಿನ ಪ್ರಾಚ್ಯವಸ್ತು ಸಂಗ್ರಹ ಇಲಾಖೆ 48 ಲಕ್ಷ ಮಂಜೂರು ಮಾಡಿದ್ದು, ಈಗಾಗಲೇ ಬಾಗಲಕೋಟೆ ರಸ್ತೆಗೆ ಹೊಂದಿರುವ ದ್ವಾರಬಾಗಿಲು, ಕಮಲ್ ಮಹಲ್, ಕೋಟೆ ಗೋಡೆ, ಮಂಟಪ ಹಾಗೂ ಒಳಾಂಗಣ ಅಭಿವೃದ್ಧಿ ಹಾಗೂ ಕಂದಕಕ್ಕೆ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.
ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣ: 2012- 13ನೇ ಸಾಲಿನ 13ನೇ ಹಣಕಾಸು ಯೋಜನೆಯ 48 ಲಕ್ಷ ಮೊತ್ತದಲ್ಲಿ ಕೋಟೆ ಗೋಡೆ ಅಭಿವೃದ್ದಿ ಪಡಿಸಲಾಗುತ್ತಿದೆ. ಚೈನ್‌ಲಿಂಕ್ ನಿರ್ಮಾಣ, ದ್ವಾರಬಾಗಿಲಿನ ಮಂಟಪಗಳನ್ನು ಮುದಗಲ್ ಕಲ್ಲಿನಿಂದ ಹಾಸುವುದು, ಪ್ಲಾಸ್ಟರ್, ಯಂತ್ರಗಳ ಮೂಲಕ ಕೋಟೆ ಹಾಗೂ ಕಮಲ್‌ಮಹಲ್‌ಗೆ ಕಲ್ಲು ಹೊಂದಿಸುವ ಕೆಲಸ ನಡೆಸಲಾಗಿದ್ದು ಇನ್ನು ನಾಲ್ಕೈದು ತಿಂಗಳಲ್ಲಿ ಕೋಟೆ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಗುತ್ತೆದಾರ ಶೆಟ್ಟರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ನಾಗರಿಕರ ಸತತ ಹೋರಾಟದ ಫಲವಾಗಿ ಕೋಟೆ ಜೀರ್ಣೋಧ್ಧಾರಕ್ಕೆ ಸರ್ಕಾರ ಸಹಕರಿಸುವುದು ಹೆಮ್ಮೆಯ ವಿಚಾರವಾಗಿದ್ದು ಮುಂದಿನ ದಿನಮಾನಗಳಲ್ಲಿ ಕೋಟೆ ಉತ್ಸವ ನಡೆಸಲು ಜನಪ್ರತಿನಿಧಿಗಳು ಕಾಳಜಿ ವಹಿಸಬೇಕಿದೆ. ಕೋಟೆಯು ತನ್ನದೇ ಆದ ವಿಶೇಷತೆ ಹೊಂದಿದ್ದು ಮುಂದಿನ ಪೀಳಿಗೆಗೆ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕೋಟೆ ಇತಿಹಾಸವನ್ನು ತಿಳಿಸಲು ಉಳಿಯಬೇಕಾಗಿದೆ. ದಿನೇ ದಿನೇ ಕೋಟೆ ಜೀರ್ಣೋದ್ಧಾರ ಕಾಮಗಾರಿ ಚುರುಕುಗೊಂಡಿದ್ದು ಗುಣಮಟ್ಟದ ಕಾಮಗಾರಿಯನ್ನು ಕಾಯ್ದುಕೊಳ್ಳಬೇಕಿದೆ.
ಪ್ರವಾಸಿ ತಾಣ: ವಿಜಯನಗರ ಸಾಮ್ರಾಜ್ಯ, ಹೈದ್ರಾಬಾದ್ ನಿಜಾಮ, ಬಿಜಾಪುರ ಆದಿಲ್‌ಶಾಹಿ ಆಡಳಿತದಲ್ಲಿ ಮುದಗಲ್ ಐತಿಹಾಸಿಕ ಕೋಟೆ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಇಂತಹ ಕೋಟೆಯನ್ನು ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣವನ್ನಾಗಿ ಮಾಡಿ ಭಾರತದ ಭೂಪಟದಲ್ಲಿ ಅಚ್ಚಳಿಯದೇ ಉಳಿಯುವಂತೆ ಮಾಡಬೇಕೆಂದು ಇತಿಹಾಸ ಪ್ರೇಮಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.