ರಾಯಚೂರು

ಕಾಮಗಾರಿ ಕಳಪೆ: ವ್ಯಾಪಾರಸ್ಥರ ಆರೋಪ

Published On :

ಸಿಂಧನೂರು: ರಾಜ್ಯ ಹಣಕಾಸು ಯೋಜನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಹಳೇ ಬಜಾರ್ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ ರಸ್ತೆ ನಿರ್ಮಾಣದ ಕಾಮಗಾರಿಗೆ ಕಂಕರ್ ಹಾಕುವ ಲಾರಿಯನ್ನು ತಡೆದು ಗುಣಮಟ್ಟದ ಕಾಮಗಾರಿ ಮಾಡಿ. ಇಲ್ಲದಿದ್ದರೆ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಬೇಕೆಂದು ತಕರಾರು ತೆಗೆದಿದ್ದಾರೆ.
ನಗರಾಭಿವೃದ್ಧಿ ಹೋರಾಟ ಸಮಿತಿ ವೀಕ್ಷಣೆ: ವ್ಯಾಪಾರಸ್ಥರು ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಪ್ರಮಾಣದ್ದಾಗುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿ ಹಳೇಬಜಾರ್ ರಸ್ತೆಗೆ ತೆರಳಿ ಕಾಮಗಾರಿಯನ್ನು ವೀಕ್ಷಿಸಿತು. ಕಂಕರ್ ಅಂದಾಜು ಪತ್ರಿಕೆಯಲ್ಲಿ ನಮೂದಿಸಿದ ಪ್ರಮಾಣದಲ್ಲಿ ಹಾಕುತ್ತಿಲ್ಲ. ರೂಲರ್ ಮಾಡಿಲ್ಲವಾದ್ದರಿಂದ ತೆಗ್ಗು ದಿನ್ನೆಗಳು ರಸ್ತೆಯಲ್ಲಿ ಎದ್ದು ಕಾಣುತ್ತಿವೆ.
ಗುಣಮಟ್ಟ ಕಳಪೆ: ಅಂದಾಜು ಪತ್ರಿಕೆಯಂತೆ 15 ಫೀಟ್ ರಸ್ತೆ ಅಗಲವಿರಬೇಕು. ಕೆಲ ಕಡೆ 10 ಫೀಟ್, 12 ಫೀಟ್, 16 ಫೀಟ್ ಹೀಗೆ ಹೆಚ್ಚು ಕಡಿಮೆ ಮಾಡಲಾಗಿದೆ. ಕಂಕರ್ ಹಾಕುವಾಗ ಸರಿಯಾಗಿ ನೀರು ಹಾಕಲಿಲ್ಲ. ಕಂಕರ್ ಹಾಕಿ ಈಗ ಮರಂ ಹಾಕಿದ್ದು ನೀರು ಹಾಕದಿರುವುದರಿಂದ ರಸ್ತೆಯ ಗುಣಮಟ್ಟ ಕಳಪೆ ಆಗುತ್ತಿದೆ ಎಂದು ಹೋರಾಟ ಸಮಿತಿಯವರು ಸಹ ಆರೋಪಿಸಿದರು.
ರಸ್ತೆಯ ವೀಕ್ಷಣೆಯ ಸಮಯದಲ್ಲಿ ನಗರಾಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕರು ಡಿ.ಎಚ್. ಕಂಬಳಿ, ಗುಂಡಪ್ಪ ಬಳಿಗಾರ, ಡಾ. ತಾಹೀರ್ ಅಲಿ, ವೆಂಕನಗೌಡ ಗದ್ರಟಗಿ, ಬಸವರಾಜ ಬಾದಲರ್, ಕೆ.ಬಸವರಾಜ ಕೋಟೆ, ರಾಜೇಶ್, ಅನ್ವರ್, ಧರ್ಮಣ್ಣ ಉಪ್ಪಾರ, ಅಜಿತ್ ಓಸ್ತುವಾಲ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.