ರಾಯಚೂರು

ಕೋಟೆ ನಿರ್ಬಂಧಿತ ಪ್ರದೇಶದಲ್ಲಿ ವಸತಿ ಸಲ್ಲದು

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಮೇ 23
ಐತಿಹಾಸಿಕ ಎರಡು ಸುತ್ತಿನ ಕೋಟೆಯ ನಿರ್ಬಂಧಿತ ಪ್ರದೇಶ 100 ಮೀಟರ್‌ನೊಳಗೆ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಪಟ್ಟಣ ಪಂಚಾಯಿತಿಯವರು ಪರವಾನಗಿ ನೀಡಬಾರದು ಎಂದು ಪುರಾತತ್ವ ಸಂರಕ್ಷಣಾ ಇಲಾಖೆ ಎಂಜಿನಿಯರ್ ಎಸ್.ಕೆ. ವಾಸುದೇವ್ ತಿಳಿಸಿದರು.
ಪಟ್ಟಣದ ಐತಿಹಾಸಿಕ ಕೋಟೆ ಪ್ರದೇಶ ಹಾಗೂ ಹೊಕ್ರಾಣಿ, ಪುರಾತನ ಬಾವಿಗಳನ್ನು ಪರಶೀಲಿಸಿ, ಐತಿಹಾಸಿಕ ಕೋಟೆಯ 100 ಮೀಟರ್ ನಿರ್ಬಂಧಿತ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಮಾಡಲಾಗಿದೆ. ಅಲ್ಲಿನ ನಿವಾಸಿಗಳನ್ನು ವಿಚಾರಿಸಿದರೆ ಪಟ್ಟಣ ಪಂಚಾಯಿತಿಯವರು ಪರವಾನಗಿ ನೀಡಿದ್ದಾರೆಂದು ಹೇಳುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಪರವಾನಗಿ ನೀಡಿಲ್ಲ, ಅಕ್ರಮವಾಗಿ ಕಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.
ಆದ್ದರಿಂದ ನೂರು ಮೀಟರ್ ನಿರ್ಬಂಧಿತ ಪ್ರದೇಶದಲ್ಲಿ ನಿರ್ಮಿಸಿದ ಮನೆಗಳನ್ನು, ಕಟ್ಟಡಗಳನ್ನು ಯಾವ ಸಂದರ್ಭದಲ್ಲಾದರೂ ತೆರವುಗೊಳಿಸಬಹುದಾಗಿದೆ ಎಂದರು. ಐತಿಹಾಸಿಕ ಕೋಟೆಯ ಮುಂಭಾಗದಲ್ಲಿರುವ ಕಂದಕದಲ್ಲಿ ಪಟ್ಟಣ ಪಂಚಾಯಿತಿಯವರು ಘನ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಅದನ್ನು ಕೂಡಲೇ ತೆರವುಗೊಳಿಸುವಂತೆ ಮುಖ್ಯಾಧಿಕಾರಿ ಮಹಾಂತೇಶ ಅವರಿಗೆ ಸೂಚಿಸಿದರು. ನಿರ್ಬಂಧಿತ ಪ್ರದೇಶದಲ್ಲಿ ಮನೆಗಳನ್ನು ಕಟ್ಟುವವರಿಗೆ ಯಾವುದೇ ಕಾರಣಕ್ಕೂ ಪರವಾನಗಿ ನೀಡಬಾರದು. ಪರವಾನಗಿ ಇಲ್ಲದೆ ಕಟ್ಟುವವರ ವಿರುದ್ಧ ಕ್ರಮ ಜರುಗಿಸಬೇಕು. ಪುರಾತತ್ವ ಇಲಾಖೆಗೆ ಮಾಹಿತಿ ಸಲ್ಲಿಸಬೇಕು ಎಂಉದ್ಯಾನ ವನ: 2013ನೇ ಸಾಲಿನಲ್ಲಿ 13ನೇ ಹಣಕಾಸು ಯೋಜನೆಯಲ್ಲಿ ಕೋಟೆ ಜೀರ್ಣೋದ್ಧಾರಕ್ಕಾಗಿ ರು. 50  ಲಕ್ಷ ಬಿಡುಗಡೆ ಮಾಡಿ, ಕೋಟೆಯ ಹೆಬ್ಬಾಗಿಲುಗಳ ಆವರಣದಲ್ಲಿ ಕಲ್ಲು ಬಂಡೆಗಳನ್ನು ಹಾಸಲಾಗಿದೆ. ಕಂದಕದ ಮುಭಾಗದಲ್ಲಿ ರಕ್ಷಣಾ ಗೋಡೆ ನಿರ್ಮಿಸಲಾಗಿದೆ. ನೆರೆಹಾವಳಿ ಸಮಯದಲ್ಲಿ ಬಿದ್ದಿದ್ದ ಕೋಟೆಯ ಬುರುಜುಗಳನ್ನು ಪುನಾ ನಿರ್ಮಿಸಲಾಗುತ್ತಿದೆ. ಆವರಣದಲ್ಲಿ ಉದ್ಯಾನ ವನ ಮಾಡಿ ಪ್ರವಾಸಿಕರಿಗೆ ಅನುಕೂಲ ಮಾಡಲಾಗುತ್ತಿದೆ ಎಂದರು.
ರು. 2 ಕೋಟಿ ಪ್ರಸ್ತಾವನೆ: 2014ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ಜಿಲ್ಲೆಯ ಮುದಗಲ್, ಜಲದುರ್ಗ, ಮಲಹಬಾದ್ ಕೋಟೆಗಳ ಅಭಿವೃದ್ಧಿಪಡಿಸಲು ರು. 2 ಕೋಟಿ ಪ್ರಸ್ತಾವನೆಯನ್ನು ಕಳಿಸಲಾಗಿದೆ. ಅದರಲ್ಲಿ ಕೋಟೆಯ ಅಭಿಛಿದ್ಧಿ ಮತ್ತು ಪ್ರವಾಸಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ಸೇರಿಸಲಾಗಿದೆ ಎಂದರು. ಸಾರ್ವಜನಿಕರು ಕೋಟೆಯ ರಕ್ಷಣೆಗೆ ಸಹಕಾರ ನೀಡಬೇಕು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.