ನಾಳೆಯಿಂದ ಸಿಲ್ಕ್ ಇಂಡಿಯಾ-2013 ಉತ್ಸವ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.1
ಜಾರ್ಕ್ರಾಫ್ಟ್ ಸಂಸ್ಥೆಯು ಏ.3ರಿಂದ 8ರ ವರೆಗೆ 6 ದಿನಗಳ ಕಾಲ ಸಿಲ್ಕ್ ಇಂಡಿಯಾ-2013 ಉತ್ಸವವನ್ನು ನಗರದಲ್ಲಿ ಏರ್ಪಡಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉತ್ಸವದ ಸಂಘಟಕ ಅಭಿನಂದನ್, ರಾಯಲ್ ಆರ್ಕಿಡ್ನ ಆಕರ್ಷ್ ಪ್ಯಾಲೇಸ್ನಲ್ಲಿ ನಡೆಯಲಿರುವ ಉತ್ಸವವನ್ನು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಅರುಣಾದೇವಿ ಏ.3ರಂದು ಸಂಜೆ 4 ಗಂಟೆಗೆ ಉದ್ಘಾಟಿಸುವರು.
ಇಲ್ಲಿ ಉತ್ಪಾದಕರೇ ನೇರವಾಗಿ ತಮ್ಮ ಉತ್ಪನ್ನವನ್ನು ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದಂತಾಗಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ರೇಷ್ಮೆ ಸೀರೆಗಳು ಲಭ್ಯವಾಗಲಿದೆ ಎಂದು ವಿವರಿಸಿದರು.
50ಕ್ಕೂ ಹೆಚ್ಚು ಮಳಿಗೆ: ಮೇಳದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪರಿಶುದ್ಧ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ರೇಷ್ಮೆಯ ವಿವಿಧ ಪ್ರಬೇಧಗಳಾದ ತಸ್ಸರ್, ಎರಿ, ಮುಲ್ಬಾರಿ ಮತ್ತು ಮುಗಾ ರೇಷ್ಮೆ ಸೀರೆಗಳು ಲಭ್ಯವಿರುತ್ತವೆ. ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಕಾರರು, ಸಹಕಾರ ಸಂಘಗಳು ಇಲ್ಲಿ ಪ್ರತಿನಿಧಿಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 8.30ರ ವರೆಗೆ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡುವವರು ಎಂದರು.
ಮೇಳದಲ್ಲಿ ಬಲಚೂರಿ, ಮಟ್ಕಾ, ಪ್ರಿಂಟೆಡ್, ಪಶ್ಮೀನಾ ಡುಪೇನ್, ಬಾಗಲ್ಪುರ್, ಬನಾರಸ್, ಕಂಚಿ, ತಸ್ಸಾನ್, ಉಪ್ಪಡಾ, ಮಹೇಶ್ವರಿ ಸೇರಿದಂತೆ ವಿವಿಧ ಬಗೆಯ ರೇಷ್ಮೆ ಸೀರೆಗಳು ದೊರೆಯುತ್ತವೆ. ಇದರ ಜೊತೆಗೆ ಕುರ್ತಾ, ರೇಷ್ಮೆ ಶರ್ಟ್, ಟೈ, ಸ್ಟೋಲ್ಸ್, ಶಾಲುಗಳು, ಸಲ್ವಾರ್ ಕಮೀಜ್, ಕುಶನ್ ಕವರ್, ಬೆಡ್ಶೀಟ್ ಇತ್ಯಾದಿ ರೇಷ್ಮೆ ಉತ್ಪನ್ನಗಳು ಸಹ ಮಾರಾಟವಾಗಲಿವೆ ಎಂದು ತಿಳಿಸಿದರು.
ಶಿವಮೊಗ್ಗಕ್ಕೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಸುತ್ತಮುತ್ತ ಗ್ರಾಮದ ಸಾರ್ವದನಿಕರು ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳುವ ಮೂಲಕ ಉತ್ಪಾದಕರನ್ನು ಪ್ರೋತ್ಸಾಹಿಸಿ ಎಂದು ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

